ದ್ರೌಪದಿ ಮುರ್ಮುಗೆ ಝಡ್‌ ಪ್ಲಸ್‌ ಭದ್ರತೆ

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಸರಕಾರ ಇಂದಿನಂದಲೇ ಅನ್ವಯವಾಗುವಂತೆ ಝಡ್‌ ಪ್ಲಸ್‌ ಶೃೇಣಿಯ ಭದ್ರತೆ ಒದಗಿಸಿದೆ.
ಝಡ್‌ ಪ್ಲಸ್‌ ಭದ್ರತೆಯಂಗವಾಗಿ ದ್ರೌಪದಿ ಮುರ್ಮು ಅವರು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಅಂಗರಕ್ಷಕರನ್ನು ಹೊಂದಲಿದ್ದಾರೆ. ಇಂದಿನಿಂದಲೇ ಈ ಭದ್ರತಾ ವ್ಯವಸ್ಥೆ ಜಾರಿಗೆ ಬರಲಿದೆ.
ಒಡಿಶಾದವರಾಗಿರುವ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ದ್ರೌಪದಿ ಮುರ್ಮು ಹೆಸರು ರಾಷ್ಟ್ರಪತಿ ಅಭ್ಯರ್ಥಿಗಳ ಯಾದಿಯಲ್ಲಿ ಮುಂಚೂಣಿಯಲ್ಲಿತ್ತು. ನಿನ್ನೆ ಅದಕ್ಕೆ ಎನ್‌ಡಿಎ ಮೈತ್ರಿಕೂಟ ಅಧಿಕೃತ ಮುದ್ರೆಯೊತ್ತಿದೆ. ಈ ಮೂಲಕ ದೇಸ ಎರಡನೇ ಮಹಿಳಾ ರಾಷ್ಟ್ರಪತಿಯನ್ನು ಕಾಣುವುದು ಬಹುತೇಕ ಖಚಿತವಾಗಿದೆ.ಈಗಿರುವ ಮತಗಳ ಪ್ರಕಾರ ದ್ರೌಪದಿ ಮುರ್ಮು ಅವರನ್ನು ಗೆಲ್ಲಿಸಿ ತರುವುದು ಬಿಜೆಪಿಗೆ ಕಷ್ಟವಾಗದು. ವಿರೋಧ ಪಕ್ಷಗಳು ಒಗ್ಗಟ್ಟಾಗಿ ಯಶವಂತ್‌ ಸಿನ್ನಾ ಅವರನ್ನು ಕಣಕ್ಕಿಳಿಸಿವೆ.





























































































































































































































error: Content is protected !!
Scroll to Top