ಬಿಎಸ್‌ಎನ್‌ಎಲ್‌ ಎಂಟಿಎನ್‌ಎಲ್‌ 5 ಜಿ ಸೇವೆಗೆ ಆಡಳಿತಾತ್ಮಕ ಅನುಮೋದನೆ

ನವದೆಹಲಿ : ಈಗಾಗಲೇ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಮತ್ತು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಗಳೊಂದಿಗೆ ಕೋರ್ ನೆಟ್ವರ್ಕ್ ಪ್ರಯೋಗಗಳನ್ನು ಪೂರ್ಣಗೊಳಿಸಿರುವ ಬಿಎಸ್‌ಎನ್‌ಎಲ್, 2022 ರಿಂದ 5 ಜಿ ನೆಟ್ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಎಸ್‌ಎನ್‌ಎಲ್ 4 ಜಿ ಸೇವೆಯು 2022 ರ ಆಗಸ್ಟ್ ‌ನಿಂದಲೇ ಆರಂಭವಾಗುವ ಸಾಧ್ಯತೆ ಇರುವುದಾಗಿಯೂ ತಿಳಿದು ಬಂದಿದೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ 4 ಜಿ ಸೇವೆಗಾಗಿ ಅನುಸರಿಸಿದ ನಿಯಮಗಳನ್ನೇ 5 ಜಿ ಸೇವೆಯಲ್ಲಿಯೂ ಅನುಸರಿಸಲಿದೆ. ತಾಂತ್ರಿಕ, ವಾಣಿಜ್ಯ ಕ್ಷೇತ್ರ‌ಗಳನ್ನು ಪರಿಗಣಿಸಿ 4 ಜಿ ಮತ್ತು 5 ಜಿ ಸೇವೆಗಳನ್ನು ಸರಕಾರಿ ಸ್ವಾಮ್ಯದ ಈ ಎರಡೂ ಟೆಲಿಕಾಂಗಳು ಆರಂಭ ಮಾಡಲಿವೆ ಎಂದು ಮೂಲಗಳು ಹೇಳಿವೆ.

ಎಂಟಿಎನ್‌ಎಲ್ ಜೊತೆಗೆ ಮುಂಬೈ ಮತ್ತು ನವದೆಹಲಿಯಲ್ಲಿ ಬಿಎಸ್‌ಎನ್‌ಎಲ್ 2021 ರಿಂದಲೇ ವ್ಯವಹಾರ ನಡೆಸಲಾರಂಭಿಸಿದೆ. ಇದೇ ತತ್ವಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ‌ಯೂ 5 ಜಿ ಸ್ಪೆಕ್ಟ್ರಂ ಪಡೆಯಲು ಅನುಮೋದಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಸಚಿವ ದೇವುಸಿನ್ಹ ಚೌಹಾಣ್ ಲಿಖಿತವಾಗಿ ತಿಳಿಸಿದ್ದಾರೆ.

















































































error: Content is protected !!
Scroll to Top