ಕಾರ್ಕಳ : ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವದ ಸಂದರ್ಭದಲ್ಲಿ Right tax mate india Pvt.ltd ಸಂಸ್ಥೆಯ ವತಿಯಿಂದ ಸೇವಾ ರೂಪವಾಗಿ ನಿರ್ಮಿಸಲಾದ ಸ್ವಾಗತ ಗೋಪುರದ ಲೋಕಾರ್ಪಣೆ ನಡೆಯಿತು.
ಸ್ವಾಗತ ಗೋಪುರವನ್ನು Right tax mate india Pvt.ltd ಸಂಸ್ಥೆಯ ಸಿಇಓ ಹರೀಶ್ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಹಿರಿಯಂಗಡಿಯ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿಯವರ ಆಶೀರ್ವಾದದೊಂದಿಗೆ ಉತ್ಸವ ಬಲಿಯ ಕ್ಷೇತ್ರ ಪ್ರವೇಶದೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ಆಶಾ ಗಿರೀಶ್ ರಾವ್, ಶೇಖರ ರಾವ್,ಶುಭದ ರಾವ್,ಪ್ರಕಾಶ್ ರಾವ್ ಜಾದವ್ ಹಾಗೂ ಎಲ್ಲಾ ಮೊಕ್ತೇಸರರು, ಬ್ರಹ್ಮಕಲಶೋತ್ಸವ,ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಶ್ರೀಕ್ಷೇತ್ರ ಹಿರಿಯಂಗಡಿ ಇದರ ಮೆರಗನ್ನು ಈ ಸ್ವಾಗತ ಗೋಪುರ ಹೆಚ್ಚಿಸಲಿದೆ








































