ಕಾರ್ಕಳ : ನೀರೆ ಬೈಲೂರು ಸಮೀಪ ಖಾಸಗಿ ಬಸ್ ರಸ್ತೆ ಬದಿ ಮೋರಿಗೆ ಡಿಕ್ಕಿಯಾದ ಘಟನೆ ನ. 21 ರಂದು ಸಂಭವಿಸಿದೆ.

ಕಾರ್ಕಳದಿಂದ ಹಿರಿಯಡ್ಕ ಕಡೆಗೆ ಸಾಗುತ್ತಿದ್ದ ಬಸ್ (ಕೆಎ 20 ಎಎ 7644) ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಗಾಯವಾಗಿಲ್ಲ. ಒಂದು ವೇಳೆ ಬಸ್ ಕಮರಿಗೆ ಬೀಳುತ್ತಿದ್ದಲ್ಲಿ ಭಾರಿ ಅನಾಹುತವೇ ಸಂಭವಿಸುತ್ತಿತ್ತು.








































