ಕಾರ್ಕಳ : ವಿಶ್ವ ಹಿಂದೂ ಪರಿಷತ್,ಬಜರಂಗದಳ ಕಾರ್ಕಳ ಇದರ ವತಿಯಿಂದ ಕಾರ್ಕಳದ ಗಾಂಧಿಮೈದಾನದಲ್ಲಿ ಡಿ. 12ರಂದು ನಡೆಯುವ ಹಿಂದೂ ಸಂಗಮದ ಸ್ಟಿಕರ್ ಬಿಡುಗಡೆಯು ಅತ್ತೂರಿನ ಪರ್ಪಲೆಗಿರಿಯಲ್ಲಿ ನ.21ರಂದು ನಡೆಯಿತು
ಉದ್ಯಮಿಗಳಾದ ಬೋಳ ಶ್ರೀನಿವಾಸ್ ಕಾಮತ್ ಮತ್ತು ಬೆಳಿಂಜೆ ಭೋಜ ಕುಲಾಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಿಂದೂ ಸಮಾಜ ದ ಪವಿತ್ರ ಕ್ಷೇತ್ರವಾಗಿ ದತ್ತ ಪೀಠ ಆಗಲಿ, ಎಲ್ಲಾ ಹಿಂದೂಗಳು ಹಿಂದೂ ಸಂಗಮದಲ್ಲಿ ಭಾಗವಹಿಸಿ ನಮ್ಮ ಶಕ್ತಿಯನ್ನು ಪ್ರದರ್ಶಿಸೋಣ ಎಂದರು.

ಬಜರಂಗದಳದ ಪ್ರಾಂತ ಸಂಚಾಲಕ ಸುನಿಲ್ ಕೆ ಆರ್, ಅರುಣ್ ನಿಟ್ಟೆ,ಬಿ.ಜೆ.ಪಿ.ಯ ಪ್ರಮುಖರಾದ ನವೀನ್ ನಾಯಕ್, ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಪಾಲಡ್ಕ, ಸುಧೀರ್ ನಿಟ್ಟೆ , ಜಗದೀಶ್ ಸಾಣೂರ್, ಅಶೋಕ್ ಜೈನ್, ಬಜರಂಗದಳದ ಚೇತನ್ ಪೆರಲ್ಕೆ ಉಪಸ್ಥಿತರಿದ್ದರು.
ಸುನಿಲ್ ನಿಟ್ಟೆ ಅವರು ಸ್ವಾಗತಿಸಿ, ಪ್ರಸಾದ್ ನಿಟ್ಟೆ ಅವರು ವಂದಿಸಿದರು. ಶೈಲೇಶ್ ನಿರೂಪಿಸಿದರು.








































