ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಇವರಿಗೆ ಬೆಳಕು ಪ್ರಶಸ್ತಿ ಪ್ರದಾನ

ಕಾರ್ಕಳ : ಬೆಳಕು ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಶನ್ ಕಾರ್ಕಳ ಇದರ ವಾರ್ಷಿಕೋತ್ಸವವು ದಿನ ಆದಿಶಕ್ತಿ ವೀರಭದ್ರ ಸಭಾಂಗಣದಲ್ಲಿ ಜರಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಂ.ಇ.ಎಸ್ ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್ ವಹಿಸಿ ಮಾತನಾಡಿ, ಬೆಳಕು ಸಂಸ್ಥೆ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ.ಒಳ್ಳೆ ಸಂಸ್ಕಾರಯುತ ಜೀವನ ರೂಪಿಸುವಲ್ಲಿ ಸಹಕರಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಇವರಿಗೆ ಬೆಳಕು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕಾರ್ಕಳ ಪುರಸಭಾ ಸದಸ್ಯರಾದ ಶ್ರೀಮತಿ ಪ್ರಭ ಕಿಶೋರ್,ವೀರಭದ್ರ ದೇವಸ್ಥಾನದ ಮುಕ್ತೆಸರರಾದ ಜನಾರ್ಧನ್ ಶೆಟ್ಟಿಗಾರ್, ಆಡಳಿತ ಟ್ರಸ್ಟಿ ಶಿವರಾಯ ಶೆಟ್ಟಿಗಾರ್,ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಪ್ರಕಾಶ್, ಸಂಸ್ಥೆ ಯ ಪ್ರಾಂಶುಪಾಲಾರದ ಗುಣಪಾಲ ಆಚಾರ್ಯ, ಆಡಳಿತ ಪಾಲುದಾರರು ಆದ ಅಶ್ವಥ್ ನಾರಾಯಣ್, ಸಿಬ್ಬಂದಿ ಪ್ರಜ್ವಲ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಾಂತ್ಯ ಶಾಲಾ ಮುಖ್ಯ ಶಿಕ್ಷಕ ಸುಧಾಕರ್ ನಿರೂಪಿಸಿ ಶಿಕ್ಷಕರಾದ ಕಿಶನ್ ಆಚಾರ್ಯ ಸ್ವಾಗತಿಸಿ ವಂದಿಸಿದರು.



































































































error: Content is protected !!
Scroll to Top