Thursday, December 2, 2021
spot_img
HomeUncategorizedದೊಂಡೇರಂಗಡಿ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ದೊಂಡೇರಂಗಡಿ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಕಾರ್ಕಳ : ನಿಟ್ಟೆ ಗಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಕಳ, ಶ್ರೀ ರಾಮಮಂದಿರ ದೊಂಡೇರಂಗಡಿ , ಕೌಂಡಿಣ್ಯ ಗೋತ್ರ ನಾಯಕ್‌ ಕುಲಪುರುಷ ಸಮಿತಿ ,ಶ್ರೀರಾಮ ಭಜನಾ ಸೇವಾ ಸಂಘ ಮಹಿಳಾ ವಿಭಾಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಕಡ್ತಲ ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಕೌಂಡಿಣ್ಯ ಗೋತ್ರ ಕುಲ ಪುರುಷ ಸಮಿತಿ ಅಧ್ಯಕ್ಷರಾದ ರಾಮಮೋಹನ. ಕೆ. ನಾಯಕ್ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಶ್ರೀಯುತ ಬೈಲಂಗಡಿ ಜಯರಾಮ ನಾಯಕ್ ,ಮುಖ್ಯ ಅಥಿತಿಗಳಾಗಿ ನಿಟ್ಟೆ ಗಜ್ರಿಯಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಸಚಿದಾನಂದ ಪ್ರಭು, ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹೆಚ್. ಸುಧೀರ್ ನಾಯಕ್ ಹೆಬ್ರಿ, ಶ್ರೀ ರಾಮ ಭಜನಾ ಸೇವಾ ಸಂಘ ಮಹಿಳಾ ವಿಭಾಗ ಇದರ ಅಧ್ಯಕ್ಷರಾದ ಶ್ರೀಮತಿ ನಮಿತಾ ಕಿಣಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಉಡುಪಿ ಜಿಲ್ಲೆ ಸಂಯೋಜಕರಾದ ಪ್ರಮೋದ್ ಶೆಟ್ಟಿ ಮಂದರ್ತಿ ನಿಟ್ಟೆ ಗಾಜ್ರಿಯ ಆಸ್ಪತ್ರೆಯ ಸಂಪರ್ಕಧಿಕಾರಿ ಶುಭಕರ್ ಅಂಚನ್ ಮಾತನಾಡಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಕಾರ್ಕಳ ತಾಲೂಕು ಸಂಯೋಜಕರಾದ ಗುರುಪ್ರಸಾದ್ ಕಿಣಿ ಸ್ವಾಗತಿಸಿ, ನವೀನ್. ಆರ್. ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!