ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್: ಭಾರತ-ಲಂಕಾ ನಡುವಿನ 2ನೇ ಟಿ20 ಪಂದ್ಯ ರದ್ದು

ಕೊಲಂಬೋ: ಶ್ರೀಲಂಕಾ ಮತ್ತು ಭಾರತ ನಡುವೆ ಇಂದು ನಡೆಯಬೇಕಿದ್ದ ಎರಡನೇ ಟಿ20 ಪಂದ್ಯ ರದ್ದಾಗಿದೆ.

ಟೀಂ ಇಂಡಿಯಾ ಆಲೌ ರೌಂಡರ್ ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇಂದಿನ ಪಂದ್ಯವನ್ನು ಮುಂದೂಡಲಾಗಿದೆ.

ಕೋವಿಡ್ ಪರೀಕ್ಷೆಯಲ್ಲಿ ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಟಿ20 ಪಂದ್ಯವನ್ನು ಮುಂದೂಡಲಾಗಿದ್ದು ಉಳಿದ ಆಟಗಾರರಿಗೆ ಕೊರೋನಾ ಪತ್ತೆ ಪರೀಕ್ಷೆ ನಂತರವೇ ಟೂರ್ನಿಯನ್ನು ನಿರ್ಧರಿಸಲಾಗುತ್ತದೆ. 

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇನ್ನು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.

















































































error: Content is protected !!
Scroll to Top