ದುರ್ಗಾ : ಸಮಗ್ರ ಕೃಷಿ ಅಭಿಯಾನ


ಬೆಳೆ ಸಮೀಕ್ಷೆ ಉತ್ಸವ ಮಾಹಿತಿ ರಥ ಚಾಲನೆ

ಕಾರ್ಕಳ : ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಮಾಹಿತಿ ಕಾರ್ಯಕ್ರಮ, ಸಮಗ್ರ ಕೃಷಿ ಅಭಿಯಾನ ಹಾಗೂ ಬೆಳೆ ಸಮೀಕ್ಷೆ ಉತ್ಸವ ಮಾಹಿತಿ ರಥದ ಚಾಲನಾ ಕಾರ್ಯಕ್ರಮ ಜು. 26ರಂದು ದುರ್ಗ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಸತೀಶ್ ಮಾತನಾಡಿ, ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷ ವಾಕ್ಯದೊಂದಿಗೆ ವಿನೂತಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿಕರು ಯೋಜನೆಯ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.

ಹಿರಿಯ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ತೋಟಗಾರಿಕೆ ಇಲಾಖೆಯ ಯೋಜನೆ, ಬೆಳೆ ವಿಮೆ ಕುರಿತು ತಿಳಿಸಿದರು. ಜಲಾನಯನ ವ್ಯಾಪ್ತಿಯ ಗ್ರಾಮದ ರೈತರಿಗೆ ಸಾಂಕೇತಿಕವಾಗಿ ಇದೇ ಸಂದರ್ಭ ಸಸಿ ವಿತರಣೆ ಮತ್ತು ಇಲಾಖೆಯ ಮಾಹಿತಿ ಕೈಪಿಡಿ ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಸುಶೀಲ, ಸಾಮಾಜಿಕ ಅರಣ್ಯ ಅಧಿಕಾರಿ ವಾರಿಜಾಕ್ಷಿ, ಬ್ರಹ್ಮಾವರ ಕೆ.ವಿ.ಕೆ. ವಿಜ್ಞಾನಿ ಚೈತನ್ಯ, ಪಶು ಸಂಗೋಪನೆ ಇಲಾಖೆಯ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾ ಪಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನೋದ್‌ ನಾತೂ ಪ್ರಾರ್ಥಸಿ, ರೈತ ಗೀತೆ ಹಾಡಿದರು. ಸಹಾಯಕ ಕೃಷಿ ಅಧಿಕಾರಿ ಸಿದ್ದಪ್ಪ ತುಡುಬಿನ್ ನಿರೂಪಿಸಿ, ಸಹಾಯಕ ಕೃಷಿ ಅಧಿಕಾರಿ ರಮೇಶ್ ಉಳ್ಳಾಗಡ್ಡಿ ವಂದಿಸಿದರು.

















































































error: Content is protected !!
Scroll to Top