ಕಾರ್ಕಳ : ಸರಕಾರ ಜಾರಿಗೊಳಿಸಿದ ಕೋವಿಡ್ ನಿಯಮ ಉಲ್ಲಂಘಿಸಿ ಕೆಲವೊಂದು ಬಾರ್ ಗಳು ತೆರೆದಿರುತ್ತವೆ. ಬೆಳಿಗ್ಗೆ 6ರಿಂದ 10ರ ವರೆಗೆ ಮಾತ್ರ ಬಾರ್ ತೆರೆಯಲು ಅವಕಾಶವಿದ್ದು, ಆ ಬಳಿಕ ಬಂದ್ ಮಾಡಬೇಕೆಂದು ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಅಬಕಾರಿ ಇಲಾಖೆಗೆ ಸೂಚನೆ ನೀಡಿದ್ದಾರೆ. ರೆಸ್ಟೋರೆಂಟ್‌ಗಳಿಗೆ ಮಾತ್ರ ಆಹಾರ ಪದಾರ್ಥ ಪಾರ್ಸೆಲ್ ನೀಡಲು ಅವಕಾಶವಿದ್ದು, ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.
ಕಾರ್ಕಳ : ಬಾರ್ ಮುಚ್ಚುವಂತೆ ಅಬಕಾರಿ ಇಲಾಖೆಗೆ ತಹಶೀಲ್ದಾರ್ ಸೂಚನೆ









































