ಕಾರ್ಕಳ : ಕಾರ್ಕಳ ಪುರಸಭೆಗೆ ಸರಕಾರ ಐವರು ನಾಮನಿರ್ದೇಶಿತ ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಿದೆ. 23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಗೆ ಐವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಗರ ಬಿಜೆಪಿ ಕಾರ್ಯದರ್ಶಿ ಅಶೋಕ್ ಸುವರ್ಣ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸದಸ್ಯ ಅವಿನಾಶ್ ಜಿ. ಶೆಟ್ಟಿ, ಬಿಜೆಪಿ ಕಾರ್ಯಕರ್ತ ಪ್ರಸನ್ನ ಕಾರ್ಲ, ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಸಂಧ್ಯಾ ಮಲ್ಯ, ಸಂತೋಷ್ ರಾವ್, ಗಿರಿಧರ್ ನಾಯಕ್, ಯೋಗೀಶ್ ನಾಯಕ್, ಪ್ರಕಾಶ್ ರಾವ್, ನಿರಂಜನ್ ಜೈನ್, ಅಕ್ಷಯ್ ರಾವ್ ಹೆಸರು ಚಾಲ್ತಿಯಲ್ಲಿದೆ.
ಸ್ಪರ್ಧಿಸಿದವರಿಗಿಲ್ಲ ಅವಕಾಶ
ಕಳೆದ ಪುರಸಭಾ ಚುನಾವಣೆ ಸಂದರ್ಭ ಬಿಜೆಪಿಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅವಕಾಶ ದೊರೆಯುವುದು ಅನುಮಾನವಾಗಿದೆ. ಹೀಗಾಗಿ ಪ್ರಕಾಶ್ ರಾವ್, ಅಕ್ಷಯ್ ರಾವ್, ನಿರಂಜನ್ ಜೈನ್ ಅವರಿಗೆ ಅದೃಷ್ಟ ಒಲಿಯುವುದು ಕಷ್ಟ ಎನ್ನಲಾಗುತ್ತಿದೆ.









































