ಇಂದು ಮೇ 26 – ಸೂಪರ್ ರೆಡ್ ಬ್ಲಡ್ ಮೂನ್

ಭೂಮಿಯ ಸುತ್ತ ಚಂದ್ರ ಸುತ್ತುವುದು ದೀರ್ಘ ವೃತ್ತಾಕಾರದ ಪಥದಲ್ಲಿ. ಅದರಿಂದಾಗಿ ಚಂದ್ರ ಭೂಮಿಗೆ ಕೆಲವೊಮ್ಮೆ ತೀರಾ ಹತ್ತಿರ, ಕೆಲವೊಮ್ಮೆ ತೀರಾ ದೂರ ಸ್ಥಾನ ಪಡೆಯುತ್ತಾನೆ. ಚಂದ್ರನಿಂದ ಭೂಮಿಗೆ ಇರುವ ಸರಾಸರಿ ದೂರವು 3,84,000 ಕಿ.ಮೀ. ಆದರೆ, ಇಂದು ಚಂದ್ರ ಭೂಮಿಗೆ ಕೇವಲ 3,57,462 ಕಿ.ಮೀ. ದೂರದಲ್ಲಿ ಕಾಣಿಸುತ್ತಾನೆ. ಅದರಿಂದಾಗಿ ಚಂದ್ರನ ಗಾತ್ರ 14% ದೊಡ್ಡದಾಗುವುದು. ಪ್ರಭೆ 24% ಹೆಚ್ಚಾಗಿರುವುದು. ಜೊತೆಗೆ ಇಂದು ಪಾರ್ಶ್ವ ಚಂದ್ರ ಗ್ರಹಣ ಕೂಡ ಇರುವ ಕಾರಣ ಚಂದ್ರ ಕಡು ಕೆಂಪು ಬಣ್ಣದಲ್ಲಿ ಕಾಣುತ್ತಾನೆ. ಈ ವಿದ್ಯಮಾನವು ಅತ್ಯದ್ಭುತ ಖಗೋಳ ವಿದ್ಯಮಾನವಾಗಿದ್ದು, ವಿಜ್ಞಾನಿಗಳು ರೆಡ್ ಬ್ಲಡ್ ಮೂನ್ ಎಂದು ಹೆಸರಿಟ್ಟಿದ್ದಾರೆ. ಸೂಪರ್‌ ರೆಡ್‌ ಬ್ಲಡ್‌ ಮೂನ್‌ ಈಶಾನ್ಯ ಭಾರತದಲ್ಲಿ ಮಾತ್ರ ಕಂಡು ಬರಲಿದ್ದು ಕರಾವಳಿ ಭಾಗದವರಿಗೆ ನೋಡುವ ಸೌಭಾಗ್ಯವಿಲ್ಲ. ಭೂಮಿ ಚಂದ್ರರ ಗುರುತ್ವಾಕರ್ಷಣೆ ಹೆಚ್ಚುವ ಕಾರಣ ಅರಬ್ಬೀ ಸಮುದ್ರದಲ್ಲಿ ಮೂರು ದಿನಗಳ ಕಾಲ ಅಲೆಗಳು ಉಂಟಾಗಲಿದ್ದು, ಸಮುದ್ರ ಕೊರೆತ ತೀವ್ರವಾಗಲಿದೆ ಎನ್ನಲಾಗುತ್ತಿದೆ.

















































































error: Content is protected !!
Scroll to Top