ತಿಂಗಳೆಯಲ್ಲಿ 60ನೇ ವರ್ಷದ ಧರ್ಮ ಕಲೆ ಸಾಹಿತ್ಯೋತ್ಸವ-ಬನ್ನಂಜೆ ಸಂಸ್ಮರಣೆ

ಕಾರ್ಕಳ : ಬನ್ನಂಜೆ ಗೋವಿಂದ ಆಚಾರ್ಯರು ಒರ್ವ ಶ್ರೇಷ್ಠ ವಿದ್ವಾಂಸರು. ಸಮಾಜವನ್ನು ತಿದ್ದುವ ಉದ್ದೇಶದಿಂದ ಸಾಹಿತ್ಯ ಬರೆದವರು. ಬನ್ನಂಜೆಯವರು ನಮ್ಮ ಮನಸ್ಸಿನಲ್ಲಿ ನೆಲೆಯೂರುವಂತಾಗಬೇಕು. ಈ ನಿಟ್ಟಿನಲ್ಲಿ ಅವರ ಕುರಿತು ಅಧ್ಯಯನ ನಡೆಸಿ ಶಾಶ್ವತ ಯೋಜನೆಯೊಂದನ್ನು ರೂಪಿಸಬೇಕಿದೆ ಎಂದು ಬನ್ನಂಜೆ ಗೋವಿಂದ ಆಚಾರ್ಯ ಅವರ ಶಿಷ್ಯ ರಾಮನಾಥ ಆಚಾರ್ಯ ಹೇಳಿದರು.
ಅವರು ಮಾ. 8ರಂದು ನಾಡ್ಪಾಲು ಗ್ರಾಮದ ತಿಂಗಳೆಯ ಕಾರಣಿಕ ಶಿವರಾಯ ಹಾಗೂ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ಉತ್ಸವ ಮತ್ತು 60ನೇ ಧರ್ಮ ಕಲೆ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ತಿಂಗಳೆ ಗರಡಿಯ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ, ಬನ್ನಂಜೆ ಗೋವಿಂದ ಆಚಾರ್ಯ ಸುಮಾರು 45 ವರ್ಷಗಳ ಕಾಲ ಉಪದೇಶ ನೀಡಿರುತ್ತಾರೆ. ಮೇರು ವ್ಯಕ್ತಿತ್ವದ ಬನ್ನಂಜೆ ಅವರನ್ನು ಸದಾ ಸ್ಮರಿಸಬೇಕಿದೆ ಎಂದರು.

ನಾನು ಕಂಡಂತೆ ಬನ್ನಂಜೆ ಎಂಬ ವಿಷಯದ ಕುರಿತು ವೀಣಾ ಬನ್ನಂಜೆ ಮಾತನಾಡಿದರು. ಹೊಸದಿಗಂತ ಪತ್ರಿಕೆಯ ನಿವೃತ್ತ ಸಂಪಾದಕ ದು.ಗು. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ವೈದೇಹಿ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರಿನ ಅಧ್ಯಕ್ಷ ಡಿಎ ಶ್ರೀನಿವಾಸ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಕೆಳಚಾವಡಿ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಕವಿತಾ ಉಡುಪ ಅವರು ಬನ್ನಂಜೆ ರಚಿಸಿದ ಕವನಗಳನ್ನು ಹಾಡಿದರು. ಗೀತಾಂಜಲಿ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದ ಪುತ್ತೂರಿನ ಜಗದೀಶ ಆಚಾರ್ಯ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.































































































error: Content is protected !!
Scroll to Top