ಕಾರ್ಕಳ : ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಕಾರ್ಕಳ : ಕಾರ್ಕಳ ತಾಲೂಕಿನ 27 ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ಜ. 22ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಪಂಚಾಯತ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರ್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

ಪಳ್ಳಿ ಗ್ರಾ.ಪಂ. ಅಧಕ್ಷ ಸ್ಥಾನ ಹಿಂದುಳಿದ ವರ್ಗ ಅ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ನಿಟ್ಟೆ ಗ್ರಾ.ಪಂ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ನಂದಳಿಕೆ ಗ್ರಾ.ಪಂ. ಹಿಂದುಳಿದ ವರ್ಗ ಅ ಹಾಗೂ ಎಸ್‌ಸಿ ಮಹಿಳೆ, ಕಡ್ತಲ ಗ್ರಾ.ಪಂ. ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಸಾಮಾನ್ಯ, ಮರ್ಣೆ ಗ್ರಾ.ಪಂ. ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಎಸ್‌ಸಿ ಮಹಿಳೆ, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಈದು ಗ್ರಾ.ಪಂ. ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಸಾಮಾನ್ಯ, ಹಿರ್ಗಾನ ಗ್ರಾ.ಪಂ. ಹಿಂದುಳಿದ ವರ್ಗ ಬಿ ಹಾಗೂ ಸಾಮಾನ್ಯ ಮಹಿಳೆ, ಸಾಣೂರು ಗ್ರಾ.ಪಂ. ಹಿಂದುಳಿದ ವರ್ಗ ಬಿ ಮಹಿಳೆ ಹಾಗೂ ಹಿಂದುಳಿದ ವರ್ಗ ಅ, ಶಿರ್ಲಾಲು ಗ್ರಾ.ಪಂ. ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ, ಮುಡಾರು ಗ್ರಾ.ಪಂ. ಸಾಮಾನ್ಯ ಹಾಗೂ ಹಿಂದುಳಿದ ವರ್ಗ ಅ ಮಹಿಳೆ, ದುರ್ಗಾ ಗ್ರಾ.ಪಂ. ಸಾಮಾನ್ಯ ಹಾಗೂ ಅನುಸೂಚಿತ ಜಾತಿ ಮಹಿಳೆ, ಬೈಲೂರು ಗ್ರಾ.ಪಂ. ಸಾಮಾನ್ಯ ಹಾಗೂ ಹಿಂದುಳಿದ ವರ್ಗ ಬಿ ಮಹಿಳೆ, ಕಲ್ಯಾ ಗ್ರಾ.ಪಂ. ಸಾಮಾನ್ಯ ಹಾಗೂ ಹಿಂದುಳಿದ ವರ್ಗ ಅ ಮಹಿಳೆ, ಮಿಯ್ಯಾರು ಗ್ರಾ.ಪಂ. ಸಾಮಾನ್ಯ ಹಾಗೂ ಎಸ್‌ಟಿ ಮಹಿಳೆ, ಬೆಳ್ಮಣ್‌ ಗ್ರಾ.ಪಂ. ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ, ಇನ್ನಾ ಗ್ರಾ.ಪಂ. ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ, ಮಾಳ ಗ್ರಾ.ಪಂ. ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಮಹಿಳೆ, ಎರ್ಲಪ್ಪಾಡಿ ಗ್ರಾ.ಪಂ. ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ, ನೀರೆ ಗ್ರಾ.ಪಂ. ಸಾಮಾನ್ಯ ಮಹಿಳೆ ಹಾಗೂ ಹಿಂದುಳಿದ ವರ್ಗ ಅ, ನಲ್ಲೂರು ಗ್ರಾ.ಪಂ. ಸಾಮಾನ್ಯ ಮಹಿಳೆ ಹಾಗೂ ಹಿಂದುಳಿದ ವರ್ಗ ಬಿ, ರೆಂಜಾಳ ಗ್ರಾ.ಪಂ. ಸಾಮಾನ್ಯ ಮಹಿಳೆ ಹಾಗೂ ಹಿಂದುಳಿದ ವರ್ಗ ಅ., ಬೋಳ ಗ್ರಾ.ಪಂ. ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ, ಕೆರ್ವಾಶೆ ಗ್ರಾ.ಪಂ. ಎಸ್‌ಸಿ ಹಾಗೂ ಹಿಂದುಳಿದ ವರ್ಗ ಅ ಮಹಿಳೆ, ಇರ್ವತ್ತೂರು ಗ್ರಾ.ಪಂ. ಎಸ್‌ಸಿ ಮಹಿಳೆ ಹಾಗೂ ಹಿಂದುಳಿದ ವರ್ಗ ಅ ಮಹಿಳೆ, ಮುಂಡ್ಕೂರು ಗ್ರಾ.ಪಂ. ಎಸ್‌ಸಿ ಮಹಿಳೆ ಹಾಗೂ ಸಾಮಾನ್ಯ, ಕಾಂತಾವರ ಗ್ರಾ.ಪಂ. ಎಸ್‌ಟಿ ಮಹಿಳೆ ಹಾಗೂ ಸಾಮಾನ್ಯ ಸ್ಥಾನಕ್ಕೆ ನಿಗದಿಯಾಗಿದೆ.



































































































error: Content is protected !!
Scroll to Top