ಕಾರ್ಕಳ : ದತ್ತ ಪೀಠದಲ್ಲಿ ನಡೆಯುವ ದತ್ತ ಜಯಂತಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಡಿ. 28ರಂದು ಕಾರ್ಕಳ ಅನಂತಶಯನ ದೇವಸ್ಥಾನದಿಂದ ವೆಂಕಟರಮಣ ದೇವಸ್ಥಾನದವರೆಗೆ ದತ್ತಮಾಲಾ ಯಾತ್ರೆ ನಡೆಯಿತು. ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್., ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ವಿಶ್ವ ಹಿಂದೂ ಪರಿಷತ್‌ನ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ತಾಲೂಕು ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಜಗದೀಶ್ ಸಾಣೂರು, ಸುಧೀರ್ ನಿಟ್ಟೆ, ಬೋಳ ಜಯರಾಮ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಬೆಳ್ಮಣ್, ಬಜರಂಗದಳದ ತಾಲೂಕು ಸಂಚಾಲಕ ಚೇತನ್ ಪೆರಲ್ಕೆ, ಸಹ ಸಂಚಾಲಕ ಸುನಿಲ್ ನಿಟ್ಟೆ, ಮನೋಜ್ ಕರಿಕಲ್ಲು, ಪ್ರಸಾದ್ ನಿಟ್ಟೆ, ಶೈಲೇಶ್ ಸಾಣೂರು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ : ದತ್ತಮಾಲಾ ಯಾತ್ರೆ







































