ಐದು ದಿನ ಕಳೆದರೂ ನ್ಯಾಯ ಸಿಗದ ಹಿನ್ನೆಲೆ ಕಾರಣ ಜಿಲ್ಲಾಧಿಕಾರಿಗೆ ದೂರು
ಕುಟ್ರುಪಾಡಿ:ಕರ್ತವ್ಯ ನಿರತ ಕೊರೋನಾ ವಾರಿಯರ್ಸ್ ಗೆ ಕೊರೋನಾ ಸೋಂಕಿತರೊಬ್ಬರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬಳಿಕ ಪೊರಕೆಯಲ್ಲಿ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಡಬ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕುಟ್ರುಪಾಡಿ ಗ್ರಾಮದ ಉಳಿಪ್ಪು ಭಾಗದಲ್ಲಿ ಆಶಾ ಕಾರ್ಯಕರ್ತೆ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೀವಿ ಬಿ.ಎಸ್ ಹಲ್ಲೆಗೊಳಗಾದವರು.
ಡಿ.16 ರಂದು ಉಳಿಪ್ಪು ನಿವಾಸಿ ಜಿನ್ನಪ್ಪ ಗೌಡ ಎಂಬವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಡಿ.21ರಂದು ಮನೆ ಭೇಟಿ ನೀಡಿದ ವೇಳೆ ಸೋಂಕಿತ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಅವರ ಪತ್ನಿ ಶೀಲಾವತಿ ಎಂಬವರು ಪೊರಕೆಯಲ್ಲಿ ಯದ್ವಾತದ್ವಾ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ . ಬಳಿಕ ಕಡಬ ಆಸ್ಪತ್ರೆಯ ವೈಧ್ಯಾಧಿಕಾರಿಗೆ ಮಾಹಿತಿ ನೀಡಿ ಕಡಬ ಠಾಣೆಗೆ ಡಿ.21 ರಂದು ದೂರು ನೀಡಿದ್ದಾರೆ.
ಪೋಲಿಸರು ಸೋಂಕಿತರ ಕ್ವಾರಂಟೈನ್ ಮುಗಿದ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಕ್ವಾರಂಟೈನ್ ಮುಗಿದು ಜಿನ್ನಪ್ಪ ಗೌಡರು ಹೊರಗಡೆ ತಿರುಗಾಡುತ್ತಿದ್ದು ಪೊರಕೆಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಪ್ರಕರಣವಾದರೂ ಆಸ್ಪತ್ರೆಯಿಂದ ಆಗಲಿ ಠಾಣೆಯಿಂದ ಆಗಲಿ ನನಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ , ಕರ್ತವ್ಯ ನಿರ್ವಹಿಸಲು ಮಾನಸಿಕ ವೇದನೆಯಿಂದ ಕಷ್ಟವಾಗುತ್ತಿದೆ.ಅಲ್ಲದೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ಜಿಲಾಧಿಕಾರಿಗೆ ದೂರು ನೀಡಿದ್ದಾರೆ.
ಕಡಬ; ಕರ್ತವ್ಯನಿರತ ಕೊರೋನಾ ವಾರಿಯರ್ಸ್ ಗೆ ಪೊರಕೆಯಲ್ಲಿ ಯದ್ವಾತದ್ವಾ ಹೊಡೆದ ಕೊರೋನಾ ಸೋಂಕಿತರ ಕುಟುಂಬ







































