ಕಾರ್ಕಳ : ಕಾರ್ಕಳ ಕಲ್ಲೊಟ್ಟೆ ಎಂಬಲ್ಲಿ ತೆಂಗಿನ ಮರ ಕಡಿಯುವ ಸಂದರ್ಭ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ. 23ರಂದು ಸಂಭವಿಸಿದೆ. ಜೋಡುಕಟ್ಟೆ ನಿವಾಸಿ ವಾಸು (45) ಎಂಬವರೇ ಮೃತಪಟ್ಟ ದುರ್ದೈವಿ. ವಾಸು ಅವರು ಮರ ಕಡಿಯುವುದರಲ್ಲಿ ಹೆಸರುವಾಸಿಯಾಗಿದ್ದರು. ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಾರ್ಕಳ : ತೆಂಗಿನ ಮರ ಕಡಿಯುವ ಸಂದರ್ಭ ವಿದ್ಯುತ್ ಶಾಕ್‌ಗೀಡಾಗಿ ವ್ಯಕ್ತಿ ಸಾವು






































