ಹಿಂದು ಮುಖಂಡ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ

ಬಂಟ್ವಾಳ, ಅ. 21: ಬಂಟ್ವಾಳದ ಸಕ್ರಿಯ ಹಿಂದು ಮುಖಂಡ ಇಂದು ಮಧ್ಯಾಹ್ನ ತನ್ನ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಿಸಿ.ರೋಡ್‌ ನಲ್ಲಿರುವ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ರೀತಿಯಲ್ಲಿ ಅವರ ಶವ ಕಂಡುಬಂದಿದೆ. ಸುರೇಂದ್ರ ಬಂಟ್ವಾಳ ಅವರನ್ನು ಬಲ್ಲವರೇ ಈ ಕೃತ್ಯವನ್ನು ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಹಿಂದು ಮುಖಂಡನಾಗಿ ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ್‌ ಬಿ.ಸಿ.ರೋಡ್‌ ಮತ್ತು ಬಂಟ್ವಾಳದಲ್ಲಿ ಹಿಂದು ಸಂಘಟನೆಗಳನ್ನು ಬಲಪಡಿಸಿದ್ದರು. ಹಿಂದೊಮ್ಮೆ  ಭೂಗತ ಜಗತ್ತಿನ ಜೊತೆಗೆ ಅವರ ಹೆಸರು ತಳಕು ಹಾಕಿಕೊಂಡಿದ್ದರೂ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರಲಿಲ್ಲ.  ಸಮಾಜದಲ್ಲಿ ಸಭ್ಯ, ಕ್ರಿಯಾಶೀಲ  ಮುಖಂಡ ಎಂಬುದಾಗಿ ಗುರುತಿಸಿಕೊಂಡಿದ್ದರು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕೊಲೆ ಎಸಗಿದವರು ಯಾರು ಮತ್ತು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ.



































































































error: Content is protected !!
Scroll to Top