ಬಾಲಿವುಡ್‌ ಡ್ರಗ್‌ ಕೇಸ್‌ : ಪ್ರಮುಖ ನಟನಿಗಾಗಿ ಬಲೆ ಬೀಸಿದ ಎನ್‌ಸಿಬಿ

ಮುಂಬಯಿ, ಅ. 21: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯಲ್ಲಿ ಮಾದಕ ವಸ್ತು ವಹಿಸಿದ ಪಾತ್ರದ ಕುರಿತಾದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಸದ್ಯದಲ್ಲೇ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊದ ಅಧಿಕಾರಿಗಳು ಬಾಲಿವುಡ್‌ ನ ಪ್ರಮುಖ ನಟನೊಬ್ಬನನ್ನು ಬಲೆಗೆ ಕೆಡವಿಕೊಳ್ಳುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕದ ಪ್ರಜೆ ಅಗಿಸಿಯಲೊಸ್‌ ಡಿಮಿಟ್ರಿಯಡ್ಸ್‌ ಮತ್ತು ನಿರ್ದೇಶಕ ಸಾಹಿಲ್‌ ಕೊಹ್ಲಿಯ ವಿಚಾರಣೆ ಸಂದರ್ಭದಲ್ಲಿ ಈ ನಟನ ಹೆಸರು ಪ್ರಸ್ತಾವಕ್ಕೆ ಬಂದಿದೆ. ಬಾಲಿವುಡ್‌ ಡ್ರಗ್‌ ಕೂಟದಲ್ಲಿ ಈತ ಪ್ರಮುಖ ಕೊಂಡಿ ಎನ್ನಲಾಗಿದೆ.

ಯಾರು ಈ ನಟ?

ಯಾರು ಈ ನಟ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆದರೆ ಆತನ ಹೆಸರನ್ನು ಎನ್‌ ಸಿಬಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ನಟನನ್ನು ವಿಚಾರಣೆಗೆ ಕರೆಸಲು ತಯಾರಿ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ನಟನಿಗೆ ಸಮನ್ಸ್‌ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಟ ಅರ್ಜುನ್‌ ರಾಮ್ ಪಾಲ್‌ ನ ಪ್ರೇಯಸಿ ಗ್ಯಾಬ್ರಿಯಾಲ ಡಿಮಿಟ್ರಿಯಡ್ಸ್‌ಳ ಸಹೋದರ ಅಗಿಸಿಯಲೊಸ್‌ ಡಿಮಿಟ್ರಿಯಡ್ಸ್‌. ಈತನೇ ಬಾಲಿವುಡ್‌ ತಾರೆಯರಿಗೆ ಡ್ರಗ್‌ ಪೂರೈಸುವ ಪ್ರಮುಖ ವ್ಯಕ್ತಿ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತ ಈಗ ಬಂಧನದಲ್ಲಿದ್ದಾನೆ.















































































































































error: Content is protected !!
Scroll to Top