20 ವರ್ಷ ನಿರಂತರ ಸರಕಾರದ ಮುಖ್ಯಸ್ಥ : ಮೋದಿ ವಿಶಿಷ್ಟ ದಾಖಲೆ

ದಿಲ್ಲಿ, ಅ. 7: ಚುನಾಯಿತ ಸರಕಾರದ ಮುಖ್ಯಸ್ಥರಾಗಿ ಸುದೀರ್ಘ 20 ವರ್ಷ ಪೂರೈಸಿದ ಅಪರೂಪದ ದಾಖಲೆಯೊಂದನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಗುಜರಾತ್‌ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ಈ ದಾಖಲೆಯನ್ನು ಮೋದಿ ಮಾಡಿದ್ದಾರೆ. ಬಿಜೆಪಿ ನಾಯಕರಿಂದ ಮೋದಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ಈ ಸಾಧನೆಯ ಮೂಲಕ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌, ಜಾರ್ಜ್‌ ಡಬ್ಲ್ಯು. ಬುಶ್‌, ಫ್ರಾಂಕ್ಲಿನ್‌ ರೂಸ್‌ವೆಲ್ಟ್‌ , ದಿ.ಮಾರ್ಗರೇಟ್‌ ಥ್ಯಾಚರ್‌ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಮೋದಿ ಚುನಾಯಿತ ಸರಕಾರಗಳನ್ನು ಸುದೀರ್ಘ ಕಾಲ ಮುನ್ನಡೆಸಿದ ಅಪರೂಪದ ದಾಖಲೆಯನ್ನು ಮಾಡಿದ್ದಾರೆ. ಇದು ಎಲ್ಲ ಭಾರತೀಯರು ಅಭಿಮಾನ ಪಡಬೇಕಾದ ವಿಚಾರ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಟ್ವೀಟ್‌ ಮಾಡಿದ್ದಾರೆ. ಇನ್ನೂ ಹಲವು ಬಿಜೆಪಿ ಸಚಿವರು ಮತ್ತು ನಾಯಕರು ಮೋದಿಯನ್ನು ಅಭಿನಂದಿಸಿದ್ದಾರೆ.

2014ರಲ್ಲಿ ಪ್ರಧಾನಿಯಾಗುವುದಕ್ಕಿಂತ ಮುಂಚೆ 2001ರಿಂದ ತೊಡಗಿ 13 ವರ್ಷ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.  

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ಆಂಗ್ಲ ಪತ್ರಿಕೆಗಳಿಗೆ ಮೋದಿ ಕುರಿತಾಗಿ ಲೇಖನಗಳನ್ನು ಬರೆದಿದ್ದು, ಇದರಲ್ಲಿ ಸರಕಾರದ ಮುಖ್ಯಸ್ಥರಾಗಿ ಯಾವ ಚುನಾವಣೆಯನ್ನೂ ಸೋಲದ ನಾಯಕ ಎಂದು ಬಣ್ಣಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೋದಿಯನ್ನು ಸುಧಾರಣೆಗಳ ಹರಿಕಾರ ಎಂದು ಬಣ್ಣಿಸಿದ್ದಾರೆ.





























































































error: Content is protected !!
Scroll to Top