ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾರತ್‌ ಮಾತಾ ಪೂಜನ್‌ ಕಾರ್ಯಕ್ರಮ

ಕಾರ್ಕಳ : ಹಿಂದೂ ಜಾಗರಣ ವೇದಿಕೆ ಬೆಳ್ಮಣ್‌ ವಲಯ ಇದರ ವತಿಯಿಂದ ಭಾರತ್ ಮಾತಾ ಪೂಜನ್ ಕಾರ್ಯಕ್ರಮ ಮತ್ತು ನೂತನ ಘಟಕಗಳ ಘೋಷಣೆ ಸೆ. 13ರಂದು ಸೂಡ ಸುಬ್ರಹ್ಮಣ್ಯ ದೇವಸ್ಥಾನದದ ಸಭಾಂಗಣದಲ್ಲಿ ನಡೆಯಿತು. ವಾಗ್ಮಿ ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಧಾರ್ಮಿಕ ಮುಂದಾಳು ಶ್ರೀಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರ್, ರಾಜೇಶ್ ಉಚ್ಚಿಲ, ಕಾರ್ಕಳ ತಾಲೂಕು ಹಿಂಜಾವೇ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ, ಹಿಂಜಾವೇ ಬೆಳ್ಮಣ್ ವಲಯಾಧ್ಯಕ್ಷ ಪ್ರಸಾದ್ ಶೆಟ್ಟಿ, ಹಿಂಜಾವೇ ಬೆಳ್ಮಣ್ ವಲಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಕ್ಕದಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಭೂ ಸುರಕ್ಷಾ ಸಂಯೋಜಕ್ ರಮೇಶ್ ಕಲ್ಲೊಟ್ಟೆ, ಜಿಲ್ಲಾ ಹಿಂದೂ ಯುವವಾಹಿನಿ ಸಂಯೋಜಕ್ ಉಮೇಶ್ ನಾಯ್ಕ್ ಸೂಡ, ಕಾಪು ತಾಲೂಕ್ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಆಚಾರ್ಯ ಇವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 400 ರಷ್ಟು ಹಿಂದೂ ಕಾರ್ಯಕರ್ತರು, ಮಾತೆಯರು ಹಿಂದೂ ಜಾಗರಣದ ದೀಕ್ಷೆ ಸ್ವೀಕರಿಸಿದರು. ಅಕ್ಷತಾ ಪುಜಾರಿ ಪ್ರಾರ್ಥಿಸಿದರು.



































































































error: Content is protected !!
Scroll to Top