ಸ್ಯಾಂಡಲ್‌ವುಡ್‌ನ ಇನ್ನಷ್ಟು ಮಂದಿ ಮಾದಕ ಬಲೆಗೆ?

ಬೆಂಗಳೂರು, ಸೆ. 14 : ಸ್ಯಾಂಡಲ್‌ವುಡ್‌ನ ಮಾದಕ ನಂಟು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಮಾತ್ರ ಸೀಮಿತವಾಗಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾನುವಾರ ನೀಡಿದ ಹೇಳಿಕೆಯನ್ನು ಗಮನಿಸಿದರೆ  ತನಿಖೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಗೋಚರಿಸುತ್ತದೆ. ತನಿಖೆ ಚುರುಕುಗೊಳ್ಳುವುದೆಂದರೆ ಡ್ರಗ್‌ ನಂಟು ಇರುವ ಇನ್ನಷ್ಟು ಮಂದಿಗೆ ಉರುಳು ಬಿಗಿದಂತೆ.

ಸದ್ಯ ರಾಗಿಣಿ ಮತ್ತು ಸಂಜನಾ ಯಾರೆಲ್ಲ ಹೆಸರು ಬಾಯಿಬಿಟ್ಟಿದ್ದಾರೆ ಎಂಬುದರ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಓರ್ವ ಖ್ಯಾತ ನಿರ್ದೇಶಕ, ಓರ್ವ ಜನಪ್ರಿಯ ನಟ ಸೇರಿ ಕನ್ನಡ ಚಿತ್ರರಂಗದ ಕೆಲವು ಪ್ರಭಾವಿಗಳ ಹೆಸರನ್ನು ತೇಲಿ ಬಿಡಲಾಗಿದೆ.

ಮುಂಬರುವ ದಿನಗಳು ಬಹಳ ನಿರ್ಣಾಯಕವಾಗಲಿವೆ. ನಾವು ಇನ್ನಷ್ಟು ಬಿರುಸಾಗಿ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಬೊಮ್ಮಾಯಿ ಹೇಳಿರುವುದು ಹಲವರಲ್ಲಿ ನಡುಕವುಂಟು ಮಾಡಿದೆ. ಡ್ರಗ್‌ ನಂಟಿನ ಜಾಲದ ಮೂಲಕ್ಕಿಳಿಯುವ ಸಲುವಾಗಿ ಗುಪ್ತಚರ ಪಡೆಯನ್ನು ಬಳಸಿಕೊಳ್ಳುವ ಹಾಗೂ ಸಿಸಿಬಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಯೋಜನೆಯನ್ನು ಸರಕಾರ ಹೊಂದಿದೆ.  ಮುಂದಿನ ದಿನಗಳಲ್ಲಿ ಸರಕಾರ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಆಗ ಯಾರೆಲ್ಲ ತಲೆದಂಡವಾಗಲಿದೆ ಎನ್ನುವುದನ್ನು ಕಾದು ನೋಡಬೇಕು.



































































































error: Content is protected !!
Scroll to Top