ಅನಂತ ಕುಮಾರ್‌ ಹೆಗ್ಡೆ ಸಹಿತ 24 ಸಂಸದರಿಗೆ ಕೊರೊನಾ ಪಾಸಿಟಿವ್‌

ದಿಲ್ಲಿ, ಸೆ. 14 : ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಬರೋಬ್ಬರಿ 24 ಸಂಸದರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ.

ಅನಂತ ಕುಮಾರ್‌ ಹೆಗ್ಡೆ, ಮೀನಾಕ್ಷಿ ಲೇಖಿ, ಪರ್ವೇಶ್‌ ಸಾಹಿಬ್‌ ಸಿಂಗ್‌ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವ ಸಂಸದರಲ್ಲಿ ಸೇರಿದ್ದಾರೆ.

ಮೊದಲ ದಿನ ಲೋಕಸಭೆಯ ಚೇಂಬರ್‌ನಲ್ಲಿ ಸುಮಾರು 200 ಸಂಸದರಿದ್ದರು ಮತ್ತು ಸುಮಾರು 30 ಮಂದಿ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಪ್ಲಾಸ್ಟಿಕ್‌ ಶೀಲ್ಡ್‌ ಗಳನ್ನು ಅಳವಡಿಸಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.



































































































error: Content is protected !!
Scroll to Top