ವಿದ್ಯೆಯೊಂದಿಗೆ ವಿವೇಕವಿರಲಿ

ಕಾರ್ಕಳ : ಶಿಕ್ಷಣದ ಜೊತೆಗೆ ವಿವೇಕವನ್ನು ಬೆಳೆಸಿಕೊಳ್ಳುವುದು ಅತಿ ಅಗತ್ಯ. ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿದಾಗ ಮಾತ್ರವೇ ಉತ್ತಮ ಫಲಿತಾಂಶ ದೊರೆಯಲು ಸಾಧ್ಯವೆಂದು ಪ್ರಶಾಸನ ಮಂಡಳಿ ಸಂಚಾಲಕ ಎಸ್. ನಿತ್ಯಾನಂದ ಪೈ ಹೇಳಿದರು. ಅವರು ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಶಾಸನ ಮಂಡಳಿಯ ಸದಸ್ಯ ಟಿ. ರಾಮಚಂದ್ರ ನಾಯಕ್, ಜ್ಯೋತಿ ಜೆ. ಪೈ, ಬೋಳ ರಾಹುಲ್‍ ಕಾಮತ್, ನಿಕಟಪೂರ್ವ ಮುಖ್ಯಶಿಕ್ಷಕ ಶ್ರೀಧರ ಆಚಾರ್, ಸಂಸ್ಥೆಯ ಮುಖ್ಯಶಿಕ್ಷಕಿ ವೃಂದಾ ಶೆಣೈ, ವಿದ್ಯಾಶಾಲಾ ಮುಖ್ಯಶಿಕ್ಷಕಿ ವಿದ್ಯಾ ವಿ. ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆದ ಸಂಸ್ಥೆಗೆ ಮೊದಲ ಸ್ಥಾನಿಯಾಗಿರುವ ವೈಷ್ಣವಿ ಎನ್. ಭಟ್‍, ಐಶ್ವರ್ಯ ಪ್ರಭು, ಪ್ರಣತಿ ಜಿ.ಆರ್., ಬೋಳ ಸುರೇಶ್‍ ಕಾಮತ್, ಚಂದನಾ ಪೈ ಅವರನ್ನುಅಭಿನಂದಿಸಲಾಯಿತು. ಗಣೇಶ್‌ ಜಾಲ್ಸೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜಯ ಕುಮಾರ್ ವಂದಿಸಿದರು.

































































































error: Content is protected !!
Scroll to Top