ಸೆ.21ರಿಂದ ಶಾಲೆ ಪುನರಾರಂಭ : ಕೇಂದ್ರದ ಮಾರ್ಗಸೂಚಿಯಲ್ಲೇನಿದೆ?

ದಿಲ್ಲಿ, ಸೆ. 9: ಈ ತಿಂಗಳ 21ರಿಂದ 9ನೇ ತರಗತಿಯಿಂದ 12ನೇ ತರಗತಿ ತನಕ  ಶಾಲಾ – ಕಾಲೇಜುಗಳನ್ನು ತೆರೆಯಲು ಕೇಂದ್ರ ಆರೋಗ್ಯ ಇಲಾಖೆ ಎಸ್.ಓ.ಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಬಿಡುಗಡೆ ಮಾಡಿದೆ. ಆದರೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವುದು ಪೂರ್ಣವಾಗಿ ಐಚ್ಚಿಕವಾಗಿದ್ದು, ಪ್ರಾರಂಭವಾಗುವ ಶಾಲೆಗಳು ಮಾತ್ರ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ  ಪಾಲಿಸಬೇಕಾಗುತ್ತದೆ.

ಮಾರ್ಗಸೂಚಿಯಲ್ಲಿ ಏನಿದೆ?

– ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಗೇಟಿನಲ್ಲೇ ಥರ್ಮಲ್ ಗನ್, ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಬೇಕು.ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ಗೇಟಿನಲ್ಲೇ ಥರ್ಮಲ್‌ ಪರೀಕ್ಷೆಗೆ ಒಳಪಡಬೇಕು.

-ಶಾಲೆಗಳನ್ನು ತೆರೆಯುವ ಮೊದಲು ಎಲ್ಲ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಬೇಕು.

-ಕ್ವಾರಂಟೈನ್‌ಗೆ ಬಳಕೆಯಾದ ಶಾಲೆಗಳನ್ನು ಸ್ಯಾನಿಟೈಸ್‌ ಮಾಡುವಾಗ ವಿಶೇಷ ಎಚ್ಚರಿಕೆ ವಹಿಸಬೇಕು.

-ವಿದ್ಯಾರ್ಥಿಗಳು ನೋಟ್ ಪುಸ್ತಕ, ನೀರಿನ ಬಾಟಲ್, ಲೇಖನ ಸಾಮಗ್ರಿಗಳನ್ನು ವಿನಿಮಯ ಮಾಡಿಕೊಳ್ಳುವಂತಿಲ್ಲ.

-ಅಸೆಂಬ್ಲಿ, ಕ್ರೀಡೆ ನಡೆಯುವಂತಿಲ್ಲ.

-ಶಿಕ್ಷಕರು, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,

-ಪೋಷಕರ ಒಪ್ಪಿಗೆ ಪತ್ರ ವಿದ್ಯಾರ್ಥಿಯ ಬಳಿ ಇರಬೇಕು.

-ಡೆಸ್ಕ್, ಕುರ್ಚಿಗಳ ನಡುವೆ 6 ಅಡಿ ಅಂತರವನ್ನು ಕಾಪಾಡಬೇಕು.

-ಶಾಲಾ-ಕಾಲೇಜುಗಳ ಆವರಣದಲ್ಲಿರುವ ಕ್ಯಾಂಟೀನ್, ಕ್ಯಾಫಿಟೇರಿಯ/ಮೆಸ್ ತೆರೆಯುವಂತಿಲ್ಲ.

-ಶಿಕ್ಷಕರ ಕೊಠಡಿಗಳಲ್ಲಿ, ಪ್ರಯೋಗಾಲಯಗಳಲ್ಲಿ, ಶಾಲಾ ವಾಹನಗಳಲ್ಲಿ ದೈಹಿಕ ಅಂತರವನ್ನು ಕಾಪಾಡಬೇಕು.

-ಸರದಿ ಸಾಲಿನಲ್ಲಿ ನಿಲ್ಲಲು 6 ಅಡಿ ಅಂತರದಲ್ಲಿ ಗುರುತನ್ನು ಹಾಕಬೇಕು.

-ಪ್ರತಿಯೊಬ್ಬರೂ ಆರೋಗ್ಯ ಸೇತು ಆಪ್ ಹಾಕಿಕೊಳ್ಳಬೇಕು.

-ಶೇ. 50 ರಷ್ಟು ಮಾತ್ರ ಬೋಧಕ ಬೋಧಕೇತರ ಸಿಬ್ಬಂದಿ ಇರಬೇಕು.ಆನ್‌ ಲೈನ್‌ ತರಗತಿಗಳೂ ಮುಂದುವರಿಯಲಿವೆ.

-ಶಾಲೆ ಕಾಲೇಜುಗಳ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಪಾಡಬೇಕು.

-9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವುದ ಇಲ್ಲವೇ ಅನ್‌ ಲೈನ್‌ ಕ್ಲಾಸ್‌ ಮೂಲಕ ಕಲಿಯುವುದು ಅವರ ಆಯಕೆಗೆ ಬಿಟ್ಟದ್ದು.

-ಪಾಠ ಪ್ರವಚನವನ್ನು ತರಗತಿ ಕೊಠಡಿಯೊಳಗೆ ಮಾಡುವುದಕ್ಕಿಂತ ಹೊರಗಿನ ಬಯಲಿನಲ್ಲಿ ಮಾಡಲು ಆದ್ಯತೆ ಕೊಡಬೇಕು.

-ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬಂದಿಗಳು ಇಡೀ ದಿನ ಮಾಸ್ಕ್‌ ಧರಿಸುವುದು ಕಡ್ಡಾಯ.









































































































error: Content is protected !!
Scroll to Top