ಚೀನಿ ಸೈನಿಕರಿಂದ ಐವರು ಭಾರತೀಯರ ಅಪಹರಣ

ದಿಲ್ಲಿ, ಸೆ.5: ಗಡಿಯಲ್ಲಿ ಚೀನ-ಭಾರತ ಬಿಕ್ಕಟ್ಟು ಕಾವೇರಿರುವಂತೆಯೇ ಚೀನದ ಸೈನಿಕರು ಐವರು ಭಾರತೀಯ ನಾಗರಿಕರನ್ನು ಅಪಹರಿಸಿ ಒತ್ತೆ ಸೆರೆಯಲ್ಲಿ  ಇಟ್ಟುಕೊಂಡಿದ್ದಾರೆಂದು ಅರುಣಾಚಲದ ಕಾಂಗ್ರೆಸ್‌ ಶಾಸಕ ನಿನೊಂಗ್‌ ಎರಿಂಗ್‌ ಹೇಳಿದ್ದಾರೆ.

ಚೀನದ ಪಿಎಲ್‌ ಎ ಸೈನಿಕರು  ಐವರು ಭಾರತೀಯ ನಾಗರಿಕರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.

ಐವರು ಭಾರತೀಯರು ಮೀನುಗಾರಿಕೆಗೆ ತೆರಳಿದ ವೇಳೆ ಚೀನದ ಸೈನಿಕರನ್ನು ಅವರನ್ನು ಅಪಹರಿಸಿದ್ದಾರೆ  ಎಂದಿರುವ ನಿನೊಂಗ್‌ ಎರಿಂಗ್‌ ಅಪಹೃತರ ಹೆಸರುಗಳನ್ನೂ ತಿಳಿಸಿದ್ದಾರೆ.

ಅಪ್ಪರ್‌ ಸುಬಾನ್ಸಿರಿ ಜಿಲ್ಲೆಯ ಸೆರಾ 7 ಪ್ರದೇಶದಿಂದ ಭಾರತೀಯ ನಾಗರಿಕರನ್ನು ಅಪಹರಿಸಲಾಗಿದೆ. ಲಡಾಖ್‌ ಮತ್ತು ಡೋಖ್ಲಾಂ ಬಳಿಕ ಈಗ ಅರುಣಾಚಲ ಪ್ರದೇಶದಲ್ಲಿ ಚೀನ ಸೇನೆ ಅತಿಕ್ರಮಣ ಮಾಡುತ್ತಿದೆ ಎಂದು ನಿನೊಂಗ್‌ ಹೇಳಿದ್ದಾರೆ.

































































































error: Content is protected !!
Scroll to Top