ಡ್ಯಾನ್ಸ್‌ ಅಲ್ಲ ವ್ಯಾಯಾಮ ಮಾಡುತ್ತಿದ್ದೆವು : ಸಂಯುಕ್ತಾ ಹೆಗ್ದೆ

ಬೆಂಗಳೂರು, ಸೆ. 5 : ಕಿರಿಕ್ ಪಾರ್ಟಿ ಸಿನಿಮಾದಿಂದ ಹೆಸರು ಮಾಡಿದ್ದ ನಟಿ  ಸಂಯುಕ್ತಾ ಹೆಗ್ಡೆ ನಗರದ ಅಗರ ಪಾರ್ಕಿನಲ್ಲಿ ನಿನ್ನೆ ತನ್ನ ಮತ್ತು ಸಂಗಡಿಗರ ಮೇಲೆ ನಡೆದಿರುವ ಘಟನೆ ಈ ದೇಶದ ಭವಿಷ್ಯವನ್ನು ತಿಳಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಸಂಯುಕ್ತಾ ಹೆಗ್ಡೆ ತನ್ನ ಕೆಲವು ಸ್ನೇಹಿತರೊಂದಿಗೆ ಪಾರ್ಕಿನಲ್ಲಿ ಅಸಭ್ಯವಾಗಿ ಕುಣಿಯುತ್ತಿರುವಾಗ ಮಹಿಳೆಯರ ಗುಂಪೊಂದು ಅವರನ್ನು ತಡೆದಿದೆ. ಈ ಸಂದರ್ಭದಲ್ಲಿ ನಟಿ ಮತ್ತು ಮಹಿಳೆಯರ ನಡುವೆ ಚಕಮಕಿ ನಡೆದಿದೆ.

ನನ್ನ ಮೇಲೆ ಮಹಿಳೆಯರು ಹಲ್ಲೆ ಮಾಡಿದ್ದಾರೆ ಎಂದು ಸಂಯುಕ್ತಾ ಹೆಗ್ದೆ ಆರೋಪಿಸಿದ್ದಾರೆ. ಘಟನೆ ಸಂಬಂಧ ಟ್ವೀಟ್‌ ಮಾಡಿರುವ ಅವರು” ಇಂದು ನಮಗಾದ ಅನುಭವ ಈ ದೇಶದ ಭವಿಷ್ಯವನ್ನು ತಿಳಿಸುತ್ತದೆ. ಘಟನೆಗೆ ಸಾಕಷ್ಟು ಸಾಕ್ಷ್ಯಗಳಿವೆ” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‌ ಗೆ ಅವರು ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿದ್ದಾರೆ.

ಕವಿತಾ ರೆಡ್ಡಿ ಎಂಬ ಮಹಿಳೆಯ ನೇತೃತ್ವದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ. ಅವರು ನನ್ನನ್ನು ಡ್ರಗ್‌ ಕೇಸಿನಲ್ಲಿ ಸಿಕ್ಕಿಸಿ ಹಾಕುವ ಬೆದರಿಕೆಯೊಡ್ಡಿದ್ದಾರೆ. ನಾವು ಪಾರ್ಕಿನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಇದೆಲ್ಲ ಸಂಭವಿಸಿದೆ ಎಂದು ಸಂಯುಕ್ತಾ ಹೆಗ್ಡೆ ಹೇಳಿಕೊಂಡಿದ್ದಾರೆ.



































































































error: Content is protected !!
Scroll to Top