ಡ್ರಗ್‌ ನಂಟು : ಇನ್ನಷ್ಟು ನಟಿಯರಿಗೆ ವಿಚಾರಣೆ ಉರುಳು?

ಬೆಂಗಳೂರು, ಸೆ. 5 : ನಟಿ ರಾಗಿಣಿ ಬಂಧನವಾದ ಬೆನ್ನಿಗೆ ಇನ್ನೂ ಕೆಲವು ನಟಿಯರಿಗೆ ಪೊಲೀಸರು ನೊಟೀಸ್‌ ನೀಡಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಖ್ಯಾತ ನಟಿಯರು ಹಾಗೂ ನಟರು ಡ್ರಗ್​ ತೆಗೆದುಕೊಳ್ಳುತ್ತಿದ್ದ ವಿಚಾರ ಸಿಸಿಬಿಗೆ ಗೊತ್ತಾಗಿದೆ. ಈಗಾಗಲೇ ನಟಿ ರಾಗಿಣಿ ದ್ವಿವೇದಿ ಅವರನ್ನು ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಹೀಗಾಗಿ, ರಾಗಿಣಿ ವಿಚಾರಣೆ ವೇಳೆ ಯಾವ ಯಾವ ಮಾಹಿತಿಯನ್ನು ಬಿಚ್ಚಿಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಈ ಮಧ್ಯೆ ಇನ್ನೂ ಕೆಲ ಹೀರೋಯಿನ್​ಗಳಿಗೆ ನೋಟಿಸ್​ ನೀಡಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ನಟಿ ಸಿಡಿಸಿದ ಬಾಂಬ್‌

ಈ ಮಧ್ಯೆ ಕನ್ನಡದ ನಟಿಯೊಬ್ಬರು ರೇವ್​ ಪಾರ್ಟಿಗೆ ಕೆಲವು ಉನ್ನತ ಪೊಲೀಸ್‌  ಅಧಿಕಾರಿಗಳು ಹೋಗುತ್ತಾರೆ.ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಿದರೆ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂಬುದಾಗಿ ಬಾಂಬ್‌ ಸಿಡಿಸಿದ್ದಾರೆ.

“ನಾನು ಪ್ರತಿಷ್ಠಿತ ಕುಟುಂಬದಿಂದ ಬಂದವಳು. ಆದರೆ, ಇತ್ತೀಚೆಗೆ ನನ್ನ ಹೆಸರನ್ನು ಡ್ರಗ್​ ಕೇಸ್​ನಲ್ಲಿ ಎಳೆದು ತರಲಾಗುತ್ತಿದೆ. ನನಗೆ ತೊಂದರೆ ಕೊಡುವುದು ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ. ರೇವ್​ ಪಾರ್ಟಿಗೆ ತೆರಳುತ್ತಿದ್ದ ಪೊಲೀಸ್​ ಅಧಿಕಾರಿಗಳು ಹಾಗೂ ಪ್ರತಿಷ್ಠಿತರ ಹೆಸರನ್ನು ಬಯಲು ಮಾಡುತ್ತೇನೆ. ಡ್ರಗ್​ ಮಾಫಿಯಾ ಬಗ್ಗೆ ಗೊತ್ತಿರುವವರಲ್ಲಿ ಸಾಕಷ್ಟು ಮಂದಿ ಪೊಲೀಸರೂ ಇದ್ದಾರೆ ಎಂದು ಈ ನಟಿ ಹೇಳಿದ್ದಾರೆ.

































































































error: Content is protected !!
Scroll to Top