ಕಾರ್ಕಳ : ಪರಂಪರಾ ವಿವಿದ್ಧೋದ್ದೇಶ ಸಹಕಾರ ಸಂಘ ಕಾರ್ಕಳ ಇದರ ಬ್ಯಾಂಕಿಗ್ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಚಿನ್ನಾಭರಣ ಈಡಿನ ಮೇಲೆ ನೀಡುವ ಸಾಲ ಸೌಲಭ್ಯವನ್ನು ಆ. 21ರಂದು ಉದ್ಘಾಟಿಸಲಾಯಿತು. ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ನೂತನ ಸೌಲಭ್ಯಕ್ಕೆ ಚಾಲನೆ ನೀಡಿದ ನವೀನ್‍ಚಂದ್ರ ಜೈನ್ ಸಂಘದ ಸದಸ್ಯರಿಗೆ ಗರಿಷ್ಠ ಪ್ರಮಾಣದ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ ಆರ್‌ಟಿಜಿಎಸ್-ಎನ್‌ಇಎಫ್‌ಟಿ ಸೌಲಭ್ಯ ಪ್ರಾರಂಭಿಸಲಾಗಿದೆ. ಪರಂಪರಾ ವಿವಿದ್ಧೋದ್ಧೇಶ ಸಹಕಾರ ಸಂಘವು, ಸಾಲ ನೀಡುವುದರೊಂದಿಗೆ ಠೇವಣಿದಾರರಿಗೆ ಉತ್ತಮ ಬಡ್ಡಿ ನೀಡುತ್ತಿದೆ. ಮಾತ್ರವಲ್ಲದೇ ಅದು ಗ್ರಾಹಕರ ಸೇವೆಗೆ ಬದ್ಧ ಎಂದರು. ಸಂಘದ ಆಡಳಿತ ನಿರ್ದೇಶಕರಾದ ಕೆ.ಪಿ. ಭಂಡಾರಿ, ಮೋಹನ ಪಡಿವಾಳ್, ಜಯರಾಮ್ ಸಾಲ್ಯಾನ್, ಪ್ರವೀಣ್ ಸಾಲ್ಯಾನ್, ಮೋಹನದಾಸ ಅಡ್ಯಂತಾಯ, ನರಸಿಂಹ ಕಾಮತ್ ಸಾಣೂರು, ಡಿ. ಮಹಾವೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ಆರ್. ಸ್ವಾಗತಿಸಿ, ನಿರೂಪಿಸಿದರು. ಉಪಾಧ್ಯಕ್ಷ ಅಭಯ್ ಕುಮಾರ್ ವಂದಿಸಿದರು.
ಚಿನ್ನಾಭರಣ ಸಾಲ ಮತ್ತು ಆರ್‌ಟಿಜಿಎಸ್-ಎನ್‌ಇಎಫ್‌ಟಿ ಸೌಲಭ್ಯ ಉದ್ಘಾಟನೆ


















