ಗೆಳೆಯನಿಲ್ಲದ ಕೊರತೆ ಕಾಡುತ್ತಿದೆ : ಜೈಟ್ಲಿಯನ್ನು ನೆನಪಿಸಿಕೊಂಡ ಮೋದಿ

ದಿಲ್ಲಿ, ಆ. 24: ಮಾಜಿ ಹಣಕಾಸು ಸಚಿವ ಅರುಣ್‌ ಜೈಟ್ಲಿ ಪುಣ್ಯತಿಥಿ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌  ಮೂಲಕ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.

ಕಳೆದ ಇದೇ ದಿನದಂದು ನಾವು ಅರುಣ್‌ ಜೈಟ್ಲಿಯವರನ್ನು ಕಳೆದುಕೊಂಡೆವು. ಸ್ನೇಹಿತನಿಲ್ಲದ ಕೊರತೆ ನನ್ನನ್ನು ಬಹಳವಾಗಿ ಕಾಡುತ್ತಿದೆ.ಅವರು ಈ ದೇಶಕ್ಕಾಗಿ ಕಾಳಜಿಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಕಾನೂನು ಜ್ಞಾನ ಮತ್ತು ಆತ್ಮೀಯ ಸಂಬಂಧ ಸದಾ ನೆನಪಿನಲ್ಲಿರುತ್ತದೆ ಎಂದು ಮೋದಿ ಟ್ವೀಟ್ ನಲ್ಲಿ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ.ಟ್ವೀಟ್‌  ಜೊತೆಗೆ ಪ್ರಾರ್ಥನಾ ಸಭೆಯ ವೀಡಿಯೊವನ್ನು ಮೋದಿ ಹಂಚಿಕೊಂಡಿದ್ದಾರೆ.

ಇದೇ ವೇಳೆ ಗೃಹ ಸಚಿವ ಅಮಿತ್‌ ಶಾ ಅವರೂ ಜೈಟ್ಲಿಯವರನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.



































































































error: Content is protected !!
Scroll to Top