ಕಾರ್ಕಳ : ಎಸ್‌.ಎಸ್.‌ಎಲ್‌.ಸಿ. ಫಲಿತಾಂಶ ಪೂರ್ಣ ವಿವರ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ 2,530 ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಬರೆದಿದ್ದು, 2209 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಈ ಮೂಲಕ 87.31 ಶೇ. ಫಲಿತಾಂಶ ದಾಖಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್.‌ ಹೇಳಿದರು.

ಈ ಬಾರಿ ಫಲಿತಾಂಶವು ಗುಣಮಟ್ಟದ ಆಧಾರದ ಮೇಲೆ ನಿರ್ಧರಿತವಾಗಿದ್ದು, ಕಾರ್ಕಳ ತಾಲೂಕು ಉಡುಪಿ ಜಿಲ್ಲೆಯ 5 ವಲಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ರಾಜ್ಯ ಮಟ್ಟದ 204 rankಗಳಲ್ಲಿ 40ನೇಯ rank ಅನ್ನು ಕಾರ್ಕಳ ಸಾಧಿಸಿದೆ.

ಮಿಷನ್‌ 100 ಪರಿಣಾಮ

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಶೇ.100 ಸಾಧಿತ 8 ಶಾಲೆಗಳು ಕಾರ್ಕಳದಲ್ಲಿ ಇವೆ. ತಾಲೂಕಿನ 56 ಶಾಲೆಗಳ ಪೈಕಿ 37 ಎ., 13 ಬಿ., 6 ಸಿ. ಗ್ರೇಡ್‌ ಪಡೆದಿವೆ. ಈ ವರ್ಷ ಕಾರ್ಕಳ ಉತ್ತಮ ಫಲಿತಾಂಶ ಪಡೆಯುವಲ್ಲಿ ಮಿಷನ್‌ 100 ಸಂಪೂರ್ಣ ಉತ್ತೀರ್ಣತಾ ಅಭಿಯಾನ ಸಹಕಾರಿಯಾಗಿದೆ. ಅಭಿಯಾನದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ಎನ್‌. ವಿಷ್ಣುವರ್ಧನ್‌, ಜಿಲ್ಲಾ ಉಪನಿರ್ದೇಶಕ ಶೇಷಶಯನ ಕಾರಿಂಜ, ವಿಧಾನ ಪರಿಷತ್‌ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್‌, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್‌ ಹೆಗ್ಡೆ ಮಾರಾಳಿ ಮತ್ತಿತರ ಗಣ್ಯರು ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡಿದ್ದರು.









































































































error: Content is protected !!
Scroll to Top