
-10 ಗ್ರಾಂಗೆ 55,370 ರೂ.
ಕಾರ್ಕಳ, ಆ. 4: ಈ ಕೊರೊನಾ ಸಂಕಷ್ಟ ಕಾಲದಲ್ಲಿಯೂ ಚಿನ್ನದ ರೇಟು ರಾಕೆಟ್ ವೇಗದಲ್ಲಿ ನೆಗೆತ ಕಂಡಿದೆ. 24 ಕ್ಯಾರೆಟ್ ಚಿನ್ನದ ದರ ಮಾರುಕಟ್ಟೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿ 10 ಗ್ರಾಂಗೆ 55,370 ರೂಪಾಯಿಗೆ ಏರಿದೆ. ಜುಲೈ ಒಂದರಂದು 50,200 ರೂಪಾಯಿ ಇದ್ದ ಚಿನ್ನದ ದರ ಅಲ್ಲಿಂದ ಪ್ರತೀ ದಿನ ಎಂಬಂತೆ ನೆಗೆತ ಕಂಡಿದೆ. ಒಂದು ತಿಂಗಳ ಅವಧಿಯಲ್ಲಿ 9.5% ಅಧಿಕ ಆಗಿದೆ. ಬೆಳ್ಳಿಯ ದರ ಕೂಡ ಅದೇ ರೀತಿ ವೃದ್ಧಿ ಆಗಿದ್ದು ಹೆಂಗಸರ ಸದ್ಯದ ಚಿನ್ನದ ಕನಸುಗಳಿಗೆ ಬ್ರೇಕ್ ಬಿದ್ದಂತೆ ಆಗಿದೆ.