Sunday, October 24, 2021
spot_img
Homeರಾಜ್ಯದ್ವಿತೀಯ ಪಿಯುಸಿ - 88 ಕಾಲೇಜುಗಳ ಫಲಿತಾಂಶ ಶೂನ್ಯ

ದ್ವಿತೀಯ ಪಿಯುಸಿ – 88 ಕಾಲೇಜುಗಳ ಫಲಿತಾಂಶ ಶೂನ್ಯ

5 ಸರ್ಕಾರಿ ಪಿಯುಸಿ ಕಾಲೇಜುಗಳು,  5 ಅನುದಾನಿತ ಪಿಯುಸಿ ಕಾಲೇಜುಗಳು ಹಾಗೂ 78 ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಹೀಗಾಗಿ ಅನುದಾನಿತ ಕಾಲೇಜುಗಳ ಅನುದಾನ ನೀಡುವ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ .

ಬೆಂಗಳೂರು : ಈ ಬಾರಿ ರಾಜ್ಯದ 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. 05 ಸರ್ಕಾರಿ ಪಿಯುಸಿ ಕಾಲೇಜುಗಳು,  05 ಅನುದಾನಿತ ಪಿಯುಸಿ ಕಾಲೇಜುಗಳು ಹಾಗೂ 78 ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ದಾಖಲಿಸಿದ ಪಟ್ಟಿಯಲ್ಲಿವೆ. ಹೀಗಾಗಿ ಅನುದಾನಿತ ಕಾಲೇಜುಗಳ ಅನುದಾನ ನೀಡುವ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

ಇನ್ನು ರಾಜ್ಯದ 92 ಕಾಲೇಜುಗಳು ಶೇ. 100ಕ್ಕೆ 100 ರಷ್ಟು ಫಲಿತಾಂಶ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. 03 ಸರ್ಕಾರಿ ಪಿಯು ಪರೀಕ್ಷೆ ಕಾಲೇಜು, 01 ಅನುದಾನಿತ ಪಿಯುಸಿ ಕಾಲೇಜು ಹಾಗೂ 88 ಅನುದಾನ ರಹಿತ ಪಿಯುಸಿ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ನೀಡಿವೆ. ಹೀಗಾಗಿ ಈ ಎಲ್ಲಾ ಕಾಲೇಜುಗಳಿಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮೆಚ್ಚುಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಈ ವರ್ಷ ಒಟ್ಟಾರೆ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80 ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!