ಪಿಟಿಐಗೆ 84 ಕೋಟಿ ರೂ. ದಂಡ

ದಿಲ್ಲಿ : ಕಟ್ಟಡ ನಿರ್ಮಾಣ ಪ್ಲಾನ್ ಉಲ್ಲಂಘಿಸಿ ಕಚೇರಿಯನ್ನು ಕಟ್ಟಿರುವ ಆರೋಪದ ಮೇಲೆ ಪ್ರಮುಖ ನ್ಯೂಸ್‌ ಏಜೆನ್ಸಿಯಾಗಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ  ಕೇಂದ್ರ ವಸತಿ ಮತ್ತು ನಗರ ವ್ಯವವಹಾರ ಸಚಿವಾಲಯ 84 ಕೋಟಿ ರೂ. ದಂಡ ವಿಧಿಸಿ ನೊಟೀಸ್ ಹೊರಡಿಸಿದೆ. ಪಿಟಿಐ ಚೀನಾ ರಾಯಬಾರಿ ಸನ್ ವಿಸಾಂಗ್ ಸಂದರ್ಶನ ನಡೆಸಿದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ.

ಕಚೇರಿ ನಿರ್ಮಾಣಕ್ಕೆ ನೀಡಿದ್ದ ಪ್ಲಾನ್ ಗಿಂತ ಭಿನ್ನವಾಗಿ ಪಿಟಿಐ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಆರೋಪಿಸಿರುವ ಸಚಿವಾಲಯ ನೊಟೀಸ್ ತಲುಪಿದ 30 ದಿನಗಳ ಒಳಗಾಗಿ ದಂಡ ಪಾವತಿ  ಮಾಡುವಂತೆಯೂ ಸೂಚಿಸಿದೆ.ಇದಕ್ಕೆ ತಪ್ಪಿದಲ್ಲಿ ಅವಧಿ ಮೀರಿದ ಬಳಿಕ 10% ಬಡ್ಡಿತನ್ನು ಸಹ ಪಾವತಿ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪಿಟಿಐ ಗೆ ನೀಡಿದೆ. ಹಾಗೆಯೇ ಸಚಿವಾಲಯದ ಆದೇಶದಲ್ಲಿ ತಿಳಿಸಲಾದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಮತ್ತಷ್ಟು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಸೂಚಿಸಿದೆ.

ಚೀನಾ ರಾಯಭಾರಿ ಸಂದರ್ಶನದಲ್ಲಿ ಲಡಾಕ್ ನ ಎಲ್ಲ ಗಲಭೆಗಳಿಗೂ ಭಾರತವೇ ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕಾರಣದಿಂದಲೇ ಪಿಟಿಐ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ ಕೆಂಗಣ್ಣಿಗೆ ಗುರಿಯಾಗಿದೆ.

Latest Articles

error: Content is protected !!