ಗಡಿ ನುಸುಳಲು ಕಾದಿದ್ದಾರೆ 300 ಉಗ್ರರು

300 ಕ್ಕೂ ಹೆಚ್ಚು ಪಾಕಿಸ್ತಾನ ಬೆಂಬಲಿತ  ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ಎಚ್ಚರಿಸಿದೆ.

ದಿಲ್ಲಿ: ಪಾಕಿಸ್ಥಾನದಲ್ಲಿ ತರಬೇತಿ ಪಡೆದಿರುವ  300 ಕ್ಕೂ ಹೆಚ್ಚು ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎಂದು ಸೇನೆಯು ಎಚ್ಚರಿಸಿದೆ.

ಕುಪ್ವಾರಾ ಗಡಿ ಜಿಲ್ಲೆಯ ನೌಗಮ್ ಸೆಕ್ಟರ್‌ನ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇಂದು ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ  ಮೇಜರ್ ಜನರಲ್ ವೀರೇಂದ್ರ ವ್ಯಾಟ್ಸ್, ಇತ್ತೀಚೆಗಿನ ದಿನಗಳಲ್ಲಿ ಗಡಿ ಭಾಗದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ.ಸಮಯ ಸಾಧಿಸಿ ಗಡಿ ದಾಟಿ ಬರಲು ಉಗ್ರರು ಲಾಂಚಿಗ್‌ ಪ್ಯಾಡ್ ಗಳಲ್ಲಿ ತಯಾರಾಗಿರುವ ಕುರಿತು ಬೇಹು ಮಾಹಿತಿ ಸಿಕ್ಕಿದೆ ಎಂದಿದ್ದಾರೆ.

ನೌಗಂನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಅವರಿಂದ 1.5 ಲಕ್ಷ ಭಾರತೀಯ ಮತ್ತು ಪಾಕಿಸ್ತಾನಿ ಕರೆನ್ಸಿ ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಜಮ್ಮು ಮತ್ತು ಕಾಶ್ಮೀರದ ಶಾಂತಿಯನ್ನು ಭಂಗಗೊಳಿಸಲು ಕಾಶ್ಮೀರ ಕಣಿವೆಯಲ್ಲಿ ಹೆಚ್ಚು ಹೆಚ್ಚು ಭಯೋತ್ಪಾದಕರನ್ನು ತಳ್ಳಲು ಪಾಕಿಸ್ಥಾನ ತೀವ್ರವಾಗಿ ಪ್ರಯತ್ನಿಸುತ್ತಿದೆ ಎಂದು ಮೇಜರ್ ಜನರಲ್ ವೀರೇಂದ್ರ ವ್ಯಾಟ್ಸ್ ಎಚ್ಚರಿಸಿದ್ದಾರೆ.

error: Content is protected !!
Scroll to Top