ಮುಂಬಯಿ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಕೊರೊನಾ ಸೋಂಕು ತಗಲಿದ ಬೆನ್ನಿಗೆ ಮನೆಯಲ್ಲಿರುವ ಸೊಸೆ, ಐಶ್ವರ್ಯಾ ರೈ ಬಚ್ಚನ್, ಅವರ ಪುತ್ರಿ ಆರಾಧ್ಯಾ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಮಡದಿ ಜಯಾ ಬಚ್ಚನ್ ಅವರ ಪರಿಸ್ಥಿತಿ ಹೇಗಿದೆ ಎಂಬ ಆತಂಕ ಎದುರಾಗಿತ್ತು.ಇದೀಗ ಕೊರೋನಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದರಿಂದ ಎಲ್ಲರೂ ನಿರಾಳರಾಗಿದ್ದಾರೆ.
ಇನ್ನೊಂದೆಡೆ ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಅವರಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಅಮಿತಾಭ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ. ಸೌಮ್ಯ ಲಕ್ಷಣಗಳಷ್ಟೇ ಕಂಡು ಬಂದಿದೆ. ಪ್ರಸ್ತುತ ಆಸ್ಪತ್ರೆಯ ಐಸೋಲೇಷನ್ ಘಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ 10.30ರ ವೇಳೆಗೆ ಅಮಿತಾಭ್ ಅವರಿಗೆ ಕೊರೋನಾ ವೈರಸ್ ಅವರೇ ಸ್ವತಃ ಟ್ವೀಟ್ ಮಾಡಿ ತಿಳಿಸಿದ್ದರು, ಇದಾಗಿ ಕೆಲ ಸಮಯದ ನಂತರ ಅವರ ಪುತ್ರರಾದ ಅಭಿಷೇಕ್ ಬಚ್ಚನ್ ಸಹ ಕೊರೋನಾ ಪಾಸಿಟಿವ್ ಇರುವುದಾಗಿ ಟ್ವೀಟ್ ಮಾಡಿದ್ದರು.
“ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ಅಧಿಕಾರಿಗಳಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಕುಟುಂಬ ಹಾಗೂ ಸಿಬ್ಬಂದಿ ಕೂಡ ಪರೀಕ್ಷೆಗೆ ಒಳಗಾಗಿದ್ದಾರೆ. ಅವರ ವರದಿಗಾಗಿ ಗಾಯುತ್ತಿದ್ದೇವೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಗಾಗಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು” ಅಮಿತಾಬ್ ಹೇಳಿದ್ದರು.
ಇದೀಗ ಅಭಿಷೇಕ್ ಪತ್ನಿ ಐಶ್ವರ್ಯಾ, ಮಗಳು ಆರಾದ್ಯ ಸೇರಿ ಮೂವರಿಗೂ ಕೊರೋನಾ ಇಲ್ಲವೆಂದು ಖಚಿತವಾಗಿದ್ದು ಸದ್ಯ ಅವರು ವಾಸವಿರುವ ಜುಹುವಿನಬಜಾಲ್ಸಾ ಬಂಗಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಬಿಎಂಸಿ ಈ ಪ್ರದೇಶದಲ್ಲಿನ ಇನ್ನೊಂದು ಬಂಗಲೆ ಪ್ರತೀಕ್ಷಾ ಮತ್ತು ಇತರ ಕಟ್ಟಡಗಳನ್ನು ಸೀಲ್ ಡೌನ್ ಮಾಡಲಿದ್ದು ಅಲ್ಲಿ ಸಹ ಶೀಘ್ರವೇ ಸ್ವಚ್ಚತಾ ಕಾರ್ಯ ನಡೆಯಲಿದೆ,