ಅನುಪಮ್ ಖೇರ್ ತಾಯಿ, ಸಹೋದರನಿಗೆ ಕೊರೊನಾ

0

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಅವರಿಗೆ ಕೊರೊನಾ ಪಾಸಿಟಿವ್ ಆದ ಬೆನ್ನಲ್ಲೇ ಈಗ ಹಿರಿಯ ನಟ ಅನುಪಮ್ ಖೇರ್‌ ಕುಟುಂಬ ಸದಸ್ಯರಿಗೂ ಕೊರೊನಾ ಕಂಟಕ ಎದುರಾಗಿದೆ

ಮುಂಬಯಿ:  ಹಿರಿಯ ನಟ ಅಮಿತಾಭ್ ಬಚ್ಚನ್‌ ಮತ್ತು ಅವರ ಪುತ್ರ, ನಟ ಅಭಿಷೇಕ್ ಬಚ್ಚನ್‌ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆದ ಬೆನ್ನಲ್ಲೇ ಈಗ ಇನ್ನೋರ್ವ ಹಿರಿಯ ನಟ ಅನುಪಮ್‌ ಖೇರ್‌ ಅವರ ಪರಿವಾರಕ್ಕೆ ಕೊರೊನಾ ಕಂಟಕ ಎದುರಾಗಿದೆ.  
ಅನುಪಮ್‌ ಅವರ ತಾಯಿ ದುಲಾರಿ, ಸಹೋದರ ರಾಜೀವ್, ಅತ್ತಿಗೆ ರಿಮಾ ಹಾಗೂ ಸಂಬಂಧಿ ವೃಂದಾಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಈ ವಿಚಾರವನ್ನು ಅನುಪಮ್‌ ಖೇರ್ ತಮ್ಮ ಟ್ಟಿಟರ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ. ‘ನನ್ನ ತಾಯಿ ದುಲಾರಿ ಅವರಿಗೆ ರಕ್ತ ಪರೀಕ್ಷೆ ಮಾಡಿಸಿದಾಗ ಯಾವುದೇ ಕೊರೊನಾ ವೈರಸ್ ಕಾಣಿಸಿಕೊಂಡಿರಲಿಲ್ಲ. ಆನಂತರ ಸಿಟಿ ಸ್ಕ್ಯಾನ್‌ ಮಾಡಿಸಿದಾಗ ಸಣ್ಣ ಪ್ರಮಾಣದಲ್ಲಿ ಕೊರೊನಾ ವೈರಸ್ ತಗಲಿರುವುದು ಗೊತ್ತಾಯಿತು. ನಾನು ಮತ್ತು ನನ್ನ ಸಹೋದರ ಕೂಡ ಸಿಟಿ ಸ್ಕ್ಯಾನ್‌ ಮಾಡಿಸಿಕೊಂಡೆವು. ನನಗೆ ನೆಗೆಟಿವ್ ವರದಿ ಬಂದಿದೆ. ಆತನಿಗೆ ಪಾಸಿಟಿವ್‌ ಆಗಿದೆ’ ಎಂದು ಅನುಪಮ್ ಮಾಹಿತಿ ನೀಡಿದ್ದಾರೆ.

ಸದ್ಯ ಅನುಪಮ್ ಅವರ ತಾಯಿಯನ್ನು ಕೊಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ‘ನನ್ನ ತಾಯಿಯನ್ನು ಕೊಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಅವರು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಸಹೋದರನ ಕುಟುಂಬವು ಮನೆಯಲ್ಲೇ ಹೋಮ್‌ ಕ್ವಾರಂಟೈನ್ ಆಗಿದೆ. ನಾನು ಬಿಎಂಸಿಗೆ ಮಾಹಿತಿ ನೀಡಿದ್ದೇನೆ. ಅವರು ಕೂಡ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಸಹೋದರನ ಮನೆಯನ್ನು ಸ್ಯಾನಿಟೈಸ್ ಮಾಡಿದ್ದಾರೆ. ನಿಮ್ಮ ಮನೆಯಲ್ಲಿ ಯಾರಿಗಾದರೂ, ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದರೂ ಪರೀಕ್ಷೆ ಮಾಡಿಸಿ. ಎಂದು ಹೇಳಿದ್ದಾರೆ ಅನುಪಮ್.
ಇನ್ನು, ಶನಿವಾರ ರಾತ್ರಿಯೇ ಅಮಿತಾಭ್ ಬಚ್ಚನ್‌ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 


Previous articleಗಡಿ ನುಸುಳಲು ಕಾದಿದ್ದಾರೆ 300 ಉಗ್ರರು
Next articleಬುಧವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್

LEAVE A REPLY

Please enter your comment!
Please enter your name here