ಬುಧವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್

ಬೆಂಗಳೂರು: ಕೊರೋನಾ ಪ್ರಕರಣ ದಿನೇದಿನೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರ ಬುಧವಾರದಿಂದ ಒಂದು ವಾರದ ಕಾಲ ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಿದೆ.

ಈ ಎರಡು ಪ್ರದೇಶಗಳಿಗೆ ಮಾತ್ರ ಲಾಕ್ ಡೌನ್ ಅನ್ವಯವಾಗಲಿದ್ದು, ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಅದರ ಹೊರತಾಗಿ ಉಳಿದವೆಲ್ಲವುಗಳೂ ಒಂದು ವಾರ ಲಾಕ್ ಡೌನ್ ಆಗಲಿದೆ.
 
ಬುಧವಾರ ಅಂದರೆ ಜುಲೈ 14 ರಿಂದ ರಾತ್ರಿ 8 ಗಂಟೆಯಿಂದ ಜುಲೈ 22 ರವರೆಗೂ ಬಂದ್ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ದಿನೇದಿನ  ಸಾವಿರಕ್ಕೂ ಮಿಕ್ಕಿ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಕಷ್ಟು ಪರಾಮರ್ಶೆ ಮಾಡಿದ ಬಳಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.





































error: Content is protected !!
Scroll to Top