ಐಶ್ವರ್ಯಾ ರೈ,ಪುತ್ರಿ ಆರಾಧ್ಯಾಳಿಗೆ ಕೊರೋನಾ ಸೋಂಕು

ಅಮಿತಾಬ್ ಬಚ್ಚನ್ ಬಳಿಕ ಅವರ ಸೊಸೆ ಐಶ್ವರ್ಯಾ ರೈ,ಮೊಮ್ಮಗಳು  ಆರಾದ್ಯಾ ಬಚ್ಚನ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮುಂಬಯಿ:  ಅಮಿತಾಬ್ ಬಚ್ಚನ್ ಅವರ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಐಶ್ವರ್ಯಾ ಪುತ್ರಿ ಆರಾಧ್ಯಾ ಬಚ್ಚನ್ ಅವರಿಗೂ ಕೊರೋನಾ ಸೋಂಕು ತಗಲಿದೆ.

ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಈಗಾಗಲೇ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಐಶ್ವರ್ಯಾ, ಆರಾಧ್ಯ ಮತ್ತು ಜಯಾ ಬಚ್ಚನ್‌ ವರದಿ ನೆಗೆಟಿವ್‌ ಬಂದಿದೆ ಎನ್ನಲಾಗಿತ್ತು.ಆದರೆ ಬಳಿಕ ಮಹಾರಾಷ್ಡ್ರದ ಆರೋಗ್ಯ ಸಚಿವರೇ ಇವರಿಬ್ಬರ ವರದಿ ಪೊಸಿಟಿವ್‌ ಆಗಿರುವುದನ್ನು ದೃಢಪಡಿಸಿದ್ದಾರೆ.

ಪತಿ ಹಾಗೂ ಮಾವನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ, ಪುತ್ರಿ ಆರಾಧ್ಯಾ ಹಾಗೂ ಅತ್ತೆ ಜಯಾ ಬಚ್ಚನ್ ಅವರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮೂವರ ವರದಿ ಬಂದಿದ್ದು, ಐಶ್ವರ್ಯಾ ಹಾಗೂ ಆರಾಧ್ಯಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಜಯಾ ಬಚ್ಚನ್ ವರದಿ ನೆಗಟಿವ್ ಬಂದಿದೆ.

ಈ ನಡುವೆ ಅಮಿತಾಭ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ. ಸೌಮ್ಯ ಲಕ್ಷಣಗಳಷ್ಟೇ ಕಂಡು ಬಂದಿದೆ. ಪ್ರಸ್ತುತ ಆಸ್ಪತ್ರೆಯ ಐಸೋಲೇಷನ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 

ಶನಿವಾರ ರಾತ್ರಿ 10.30ರ ವೇಳೆ ಸ್ವತಃ ಅಮಿತಾಭ್ ಅವರೇ ತಮಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು. ಇದಾಗಿ ಕೆಲ ಸಮಯದ ನಂತರ ಅವರ ಪುತ್ರರಾದ ಅಭಿಷೇಕ್ ಬಚ್ಚನ್ ಸಹ ಕೊರೋನಾ ಪಾಸಿಟಿವ್ ಇರುವುದಾಗಿ ಟ್ವೀಟ್ ಮಾಡಿದ್ದರುerror: Content is protected !!
Scroll to Top