ಕುವೈಟ್ ನಲ್ಲಿ ಈ ಕಾನೂನು ಜಾರಿಗೆ ಬಂದರೆ 8 ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ

ಕುವೈಟ್:‌ ಇಡೀ ಜಗತ್ತು ಕೊರೊನಾ ವೈರಸ್‌ ಉಂಟು ಮಾಡಿರುವ ಕೋಲಾಹಲದಿಂದ ತಲ್ಲಣಿಸಿ ಹೋಗಿದೆ.ಎಲ್ಲೆಡೆ ನೌಕರಿಗೆ ಕತ್ತರಿ ಹಾಕುತ್ತಿರುವ ಸುದ್ದಿಗಳೇ ಬರುತ್ತಿವೆ.ಅದರಲ್ಲೂ ವಿದೇಶಗಳಲ್ಲಿ ದುಡಿಯುತ್ತಿರುವವರ ಪಾಡು  ಬಹಳ ಶೋಚನೀಯವಾಗಿದೆ.ಲಾಕ್‌ ಡೌನ್‌ , ಶಟ್‌ ಡೌನ್‌ನಂಥ ಕ್ರಮಗಳಿಂದಾಗಿ ದೇಶಗಳ ಆರ್ಥಿಕತೆ ಮುಗ್ಗರಿಸಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳು ಖರ್ಚುವೆಚ್ಚಗಳನ್ನು ಕಡಿಮೆ ಮಾಡುವ ಮತ್ತು ಸ್ಥಳೀಯರಿಗೆ ನೌಕರಿ ಕೊಡುವಂಥ ಕ್ರಮಗಳಿಗೆ ಮುಂದಾಗಿವೆ. ಕುವೈಟ್‌ ದೇಶವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು,ಹೊಸದಾಡಿ ಕಾನೂನು ರಚಿಸಲು ಮುಂದಾಗಿದೆ. ಒಂದು ವೇಳೆ ಈ ಕಾನೂನು ರಚನೆಯಾದದ್ದೇ ಆದರೆ ದೊಡ್ಡ ಹೊಡೆತ ಬೀಳುವುದು ಅಲ್ಲಿ ದುಡಿಯುತ್ತಿರುವ ಭಾರತೀಯರಿಗೆ.

ಕಚದಚಾತೈಲ ಬೆಲೆ ಕುಸಿದಿರುವ ಕಾರಣ ಕುವೈಟ್ ನ ಆರ್ಥಿಕತೆ ನೆಲಕಚ್ಚಿದೆ. ಈ ಪರಿಸ್ಥಿತಿಯಲ್ಲಿ ಕಠಿಣ  ಕ್ರಮ ಕೈಗೊಳ್ಳವುದು ಅಲ್ಲಿನ ಸರಕಾರಕ್ಕೆ ಅನಿವಾರ್ಯವಾಗಲಿದೆ.

ಏನಿದು ಹೊಸ ಕಾನೂನು?

ಕುವೈಟ್‌ ನ ಒಟ್ಟಾರೆ ಜನಸಂಖ್ಯೆಯಲ್ಲಿ ವಿದೇಶಿಗರ ಪಾಲು 30% ಮೀರಬಾರದು ಎನ್ನುವುದೇ ಕುವೈಟ್‌ ತರಲುದ್ದೇಶಿಸಿರುವ ಹೊಸ ಕಾನೂನು. ಅಲ್ಲಿನ ಪ್ರಧಾನಿ ಶೇಖ್‌ ಸಬಹ್‌ ಅಲ್‌ ಖಾಲಿದ್‌ ಅಲ್‌ ಸಬಹ್‌ ಈ ಕರಡು ಕಾಯಿದೆಯನ್ನು ಮಂಡಿಸಿದ್ದಾರೆ.

 14 ಲಕ್ಷ ಭಾರತೀಯರು

ಕುವೈಟ್‌ ನ ಜನಸಂಖ್ಯೆ 48  ಲಕ್ಷ. ಅಲ್ಲಿ 14 ಲಕ್ಷ ಭಾರತೀಯರಿದ್ದಾರೆ. ಹೊಸ ಕಾನೂನಿನ ಪ್ರಕಾರ ಭಾರತೀಯರ ಸಂಖ್ಯೆ ಸ್ಥಳೀಯ ಜನಸಂಖ್ಯೆಯ 30% ಮೀರಬಾರದು. ಪ್ರಸ್ತುತ ಕುವೈಟ್‌ ನ ಒಟ್ಟು ಜನಸಂಖ್ಯೆಯ 70% ಅನ್ಯ ದೇಶದವರೇ ಇದ್ದಾರೆ. ಹೊಸ ಕಾನೂನು ಬಂದರೆ 14  ಲಕ್ಷ ಭಾರತೀಯರ ಪೈಕಿ  8 ಲೆದಞ ಮಂದಿ ತವರಿಗೆ ಗಂಟುಮೂಟೆ ಕಟ್ಟಬೇಕಾಗುತ್ತದೆ.

ಐವರು ಸಂಸದರು ಪ್ರಸ್ತಾವಿಸಿರುವ ಮಸೂದೆಗೆ ಈಗಾಗಲೇ ಕಾನೂನು ಮತ್ತು ಶಾಸಕಾಂಗ ಸಮಿತಿ ಅನುಮೋದನೆ ಸಿಕ್ಕಿದೆ. ಈಗ ಅದು ಸ್ಥಾಯಿ ಸಮಿತಿಯ ಪರಿಶಿಲನೆಯಲ್ಲಿದೆ. ಅಂತಿಮವಾಗಿ ಕೋಟಾ ನಿಗದಿಪಡಿಸುವ ಅಧಿಕಾರ ಇರುವುದು ಈ ಸಮಿತಿಗೆ. ಅದರ ಕೈಯಲ್ಲಿದೆ ಲಕ್ಷಾಂಗರ ಭಾರತೀಯರ ಭವಿಷ್ಯ.

error: Content is protected !!
Scroll to Top