ಕಾರ್ಕಳ : ಮುಂಡ್ಕೂರು ಪರಿಸರದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಂದ ಹಾಗೂ ಅಂಗಡಿಮುಂಗಟ್ಟುಗಳಿಂದ ದೇಣಿಗೆ ವಸೂಲಿ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ
ವಿಷನ್ ಸಹಾಯನಿಧಿ ಸೇವಾ ಟ್ರೆಸ್ಟ್ ಕರ್ನಾಟಕ ಎಂಬ ಹೆಸರಿನಲ್ಲಿ ಮುದ್ರಿತವಾದ ಡೊನೆಷನ್ ಪುಸ್ತಕವನ್ನು ವ್ಯಕ್ತಿಯೋರ್ವನು ಹಿಡಿದುಕೊಂಡು ಮುಂಡ್ಕೂರು ಪರಿಸರದ ಸಾರ್ವಜನಿಕರಿಂದ ಹಾಗೂ ಅಂಗಡಿಗಳಿಂದ ದೇಣಿಗೆ ವಸೂಲು ಮಾಡುತ್ತಿದ್ದು ಆತನನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ಕೊಡದೆ ತಪ್ಪಿಸಲೆತ್ನಿಸಿದನು. ಡೊನೇಷನ್ ರಶೀದಿಯಲ್ಲಿರುವ ಸಂಪರ್ಕ ಸಂಖ್ಯೆಗೂ ಪೋನ್ ಮಾಡಿದಾಗ ಉತ್ತರ ಸಿಗದಿದ್ದ ಕಾರಣ ಜನರು ಕೂಡಲೇ ಆತನನ್ನು ಕಾರ್ಕಳ ಗ್ರಾಮಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.