ಈ ಸಲ ಲಾಲ್ ಬಾಗ್ಚಾ ರಾಜನ ಎತ್ತರ ಬರೀ 3 ಅಡಿ

ಮುಂಬಯಿ: ನಗರದ ಅತಿ ಪ್ರಸಿದ್ಧ ಗಣೇಶ ಮಂಡಲಗಳಲ್ಲಿ ಒಂದಾಗಿರುವ ಲಾಲ್‌ ಬಾಗ್ಚಾ ರಾಜನ ಎತ್ತರ ಈ ಸಲ ಗರಿಷ್ಠ ಎಂದರೆ ಮೂರರಿಂದ ನಾಲ್ಕು ಅಡಿ ಮಾತ್ರ ಇರಲಿದೆ.ಕೊರೊನಾ ವೈರಸ್‌ ಮಹಾರಾಷ್ಟ್ರದ ಜನಪ್ರಿಯ ಹಬ್ಬವಾಗಿರುವ ಗಣೇಶೋತ್ಸವವನ್ನು ಕಾಡುವುದು ನಿಶ್ಚಿತ. ಹೀಗಾಗಿ ಸರಕಾರ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಿದೆ. ದೊಡ್ಡ ದೊಡ್ಡ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸಲಾಗಿದೆ.ಹೀಗಾಗಿ ಲಾಲ್‌ ಬಾಗ್ಚಾ ರಾಜ ಗಣೇಶ ಮಂಡಳಿಯವರು ಚಿಕ್ಕ ವಿಗ್ರಹವನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದಾರೆ.

ಈ ಸಲ ಗಣೇಶೋತ್ಸವವನ್ನು ಹೆಚ್ಚು ಭಕ್ತಿ ಮತ್ತು ಕಡಿಮೆ ಆಡಂಬರದಿಂದ ಆಚರಿಸಬೇಕೆಂದು ಮಹಾಕರಾಷ್ಟ್ರದ ಮುಖ್ಯಮಂತ್ರಿ ನದ್ಧವ ಠಾಕ್ರೆ ಕರೆಕೊಟ್ಟಿದ್ದಾರೆ.ಈ ಮನವಿಯನ್ನನುಸರಿಸಿ ರಾಜ್ಯದ ಎಲ್ಲ ಗಣೇಶ ಮಂಡಳಗಳು ಸರಳ ಗಣೇಶೋತ್ಸವ ಆಚರಿಸಲು ತೀರ್ಮಾನಿಸಿವೆ.

ಸಾಮಾನ್ಯವಾಗಿ ಲಾಲಧ ಬಾಗ್ಚಾ ರಾಜನ ಎತ್ತರ 15 ಅಡಿಗಿಂತ ಎತ್ತರವಿರುತ್ತದೆ.ಗಿರ್ಗಾಂವ್‌ ,ಪುಣೆಯಲ್ಲೂ ಬೃಹತ್‌ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಿದ್ದರು. ಈ ಸಲ ಈ ಆಡಂಭರಕ್ಕೆಲ್ಲಿ ಕೊರೊನಾ ಬ್ರೇಕ್‌ ಹಾಕಿದೆ.

Latest Articles

error: Content is protected !!