Uncategorized

ಸತ್ಯವನ್ನು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಿದ ಕಾಂಗ್ರೆಸ್‌ : ಬಿಜೆಪಿ ಆಕ್ರೋಶ

ಪಾಕಿಸ್ಥಾನ್‌ ಜಿಂದಾಬಾದ್‌ ಘೋಷಣೆ ದೃಢವಾದ ಬಳಿಕ ಕಾಂಗ್ರೆಸ್‌ ಮೌನಕ್ಕೆ ಜಾರಿದೆ ಎಂದು ಆರೋಪ ಬೆಂಗಳೂರು: ವಿಧಾನಸೌಧದ ಒಳಗೆ ಪಾಕಿಸ್ಥಾನ​ ಜಿಂದಾಬಾದ್​​ ಘೋಷಣೆ ಕೂಗಿರುವುದು ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ ಎಫ್‌ಎಸ್‌ಎಲ್‌ ವರದಿಯಲ್ಲಿ ಬಟಾಬಯಲಾಗಿದೆ ಎಂದು ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿಕಾರಿದೆ.ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು […]

ಸತ್ಯವನ್ನು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಿದ ಕಾಂಗ್ರೆಸ್‌ : ಬಿಜೆಪಿ ಆಕ್ರೋಶ Read More »

ಚುನಾವಣೆ : ಕರಪತ್ರ ಮುದ್ರಣ, ಜಾಲತಾಣ ಜಾಹೀರಾತುಗಳಿಗೆ ನಿರ್ಬಂಧ

ಎಂಸಿಎಂಸಿ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸೂಚನೆ ಉಡುಪಿ: ಚುನಾವಣಾ ಆಯೋಗ ಸೂಚಿಸಿರುವ ನಿಯಮಾನುಸಾರ ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಕರಪತ್ರ ಹಾಗೂ ಜಾಹೀರಾತು ಮೂಲಕ ಚುನಾವಣೆ ಪ್ರಚಾರ ಪಡಿಸುವ ಮುನ್ನ ಎಂ.ಸಿ.ಎಂ.ಸಿ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಕೇಬಲ್ ಆಪರೇಟರ್ಸ್‌ ಮತ್ತು

ಚುನಾವಣೆ : ಕರಪತ್ರ ಮುದ್ರಣ, ಜಾಲತಾಣ ಜಾಹೀರಾತುಗಳಿಗೆ ನಿರ್ಬಂಧ Read More »

ಕಸಗಳಿಂದ ತುಂಬಿದ ಹೆಬ್ರಿ ಬಸ್‌ ತಂಗುದಾಣ

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೊಳಪಡುವ ಪೇಟೆಯ ಮಧ್ಯಭಾಗದಲ್ಲಿರುವ ಬಸ್‌ ತಂಗುದಾಣ ಕಸಗಳಿಂದ ತುಂಬಿದ್ದು, ಪಂಚಾಯತ್‌ನಿಂದ ಸ್ವಚ್ಛತೆಯ ಕಾರ್ಯಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತದ ಪರಿಕಲ್ಪನೆಗಳು ಬರೀ ಭಾಷಣಕ್ಕೆ ಮಾತ್ರ ಸೀಮಿತಗೊಂಡಿದೆ. ಸಾರ್ವಜನಿಕ ಸ್ಥಳದ ಸ್ವಚ್ಛತೆಯ ವಿಷಯದಲ್ಲಿ ಆಡಳಿತ ವರ್ಗವೇ ಈ ರೀತಿ ಅಸಡ್ಡೆ ತೋರಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಂಚಾಯತ್‌ನಿಂದ ಕಸ ಸಂಗ್ರಹಿಸುವ ಕೆಲಸ ಕೇವಲ ವಾಹನದಲ್ಲಿ ಹಾಡು ಹಾಕಿಕೊಂಡು ತಿರುಗಾಡಲು ಮಾತ್ರ ಸೀಮಿತವಾಗಿದೆ. ಬಸ್‌ ನಿಲ್ದಾಣದಲ್ಲಿ ತುಂಬಿರುವ

ಕಸಗಳಿಂದ ತುಂಬಿದ ಹೆಬ್ರಿ ಬಸ್‌ ತಂಗುದಾಣ Read More »

ಕಾರ್ಕಳ : ಕಾಲು ಸಂಕದಿಂದ ಬಿದ್ದು ವ್ಯಕ್ತಿ ಸಾವು

ಕಾರ್ಕಳ : ಕಾಲು ಸಂಕದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತೆಳ್ಳಾರಿನಲ್ಲಿ ಫೆ. 29ರಂದು ಸಂಭವಿಸಿದೆ. ಮಾದೊಟ್ಟು ನಿವಾಸಿ ಸತೀಶ್‌ ಶೆಟ್ಟಿ (50) ಮೃತ ದುರ್ದೈವಿ. ಮನೆಯ ಸಮೀಪದ ಕಾಲುಸಂಕದಲ್ಲಿ ಸಂಚರಿಸುತ್ತಿರುವಾಗ ಆಯತಪ್ಪಿ ಬಿದ್ದಿರುತ್ತಾರೆ ಎನ್ನಲಾಗುತ್ತಿದ್ದು, ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾರ್ಕಳ : ಕಾಲು ಸಂಕದಿಂದ ಬಿದ್ದು ವ್ಯಕ್ತಿ ಸಾವು Read More »

ಮಮತಾ ಗಟ್ಟಿಗೆ ಗೇರು ಅಭಿವೃದ್ಧಿ; ಸದಾಶಿವ ಉಳ್ಳಾಲ್‌ ಮಂಗಳೂರು ನಗರಾಭಿವೃದ್ಧಿ

ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಬೆಂಗಳೂರು: ಲೋಕಸಭೆ ಚುನಾವಣೆಗೂ ಮೊದಲೇ ಕಾಂಗ್ರೆಸ್‌ನ 44 ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಭಾಗ್ಯ ಸಿಕ್ಕಿದೆ. ಬಹಳಷ್ಟು ಸಮಯದಿಂದ ನನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ನೇಮಕ ಪ್ರಹಸನಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ. ಶಾಸಕರಿಗೆ ಹಾಗೂ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ಎದುರಿಸಿತ್ತು. ಮಮತಾ ಗಟ್ಟಿ – ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆಜಿ.ಪಲ್ಲವಿ – ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆಎಚ್.ಸಿ.ಸುಧೀಂದ್ರ

ಮಮತಾ ಗಟ್ಟಿಗೆ ಗೇರು ಅಭಿವೃದ್ಧಿ; ಸದಾಶಿವ ಉಳ್ಳಾಲ್‌ ಮಂಗಳೂರು ನಗರಾಭಿವೃದ್ಧಿ Read More »

ತಾಪಮಾನ 2 ಡಿಗ್ರಿ ಏರಿಕೆ : ಸುಡಲಿದೆ ಈ ಸಲದ ಬೇಸಿಗೆ

ಆರಂಭದಲ್ಲೇ ಬಿಸಿಲಿನ ಬೇಗೆಗೆ ಜನ ಹೈರಾಣ ಬೆಂಗಳೂರು: ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪಕ್ಕೆ ಜನ ಬಸವಳಿಯುತ್ತಿದ್ದಾರೆ. ಈ ಸಲ ಮಳೆಯೂ ಕಡಿಮೆಯಾಗಿ ಬರದ ಛಾಯೆಯೂ ಇರುವುದರಿಂದ ಬೇಸಿಗೆ ಜನರನ್ನು ಬಹಳಷ್ಟು ಹೈರಣಾಗಿಸುವ ಸಾಧ್ಯತೆ ಇದೆ. ಇದೀಗ ಹವಾಮಾನ ಇಲಾಖೆ ಈ ಬೇಸಿಗೆಯಲ್ಲಿ ಉಷ್ಣತೆ ಮಾಮೂಲಿಗಿಂತ ಎರಡು ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದು ಈ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿದೆ.ರಾಜ್ಯದಾದ್ಯಂತ ಈಗಾಗಲೇ ಬಿಸಿಲಿನ ಝಳಕ್ಕೆ ಜನ ತತ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಮತ್ತೆ ಎರಡು ಡಿಗ್ರಿ

ತಾಪಮಾನ 2 ಡಿಗ್ರಿ ಏರಿಕೆ : ಸುಡಲಿದೆ ಈ ಸಲದ ಬೇಸಿಗೆ Read More »

ಹೆಬ್ರಿ : ಚೆಕ್ ಬೌನ್ಸ್ – ಪ್ರತ್ಯೇಕ 3 ಪ್ರಕರಣಗಳಲ್ಲಿ ಆರೋಪಿಗೆ 18 ತಿಂಗಳ ಸಜೆ

ಹೆಬ್ರಿ : ಕಾರ್ಕಳದ ನ್ಯಾಯಾಲಯವು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ವ್ಯಕ್ತಿಯೊಬ್ಬರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ 18 ತಿಂಗಳ ಜೈಲು ಸಜೆಯ ಆದೇಶ ನೀಡಿದೆ.ನಾಡ್ಪಾಲು ಗ್ರಾಮದ ಬೈದೆ ಬೆಳಾರ ನಿವಾಸಿ ಶಿವರಾಂ ಪೂಜಾರಿ ಇವರು ಪರಿಚಯಸ್ಥ ಮಡಾಮಕ್ಕಿ ಗ್ರಾಮದ ಕಾಸನಮಕ್ಕಿ ಕೊಡ್ಸನ್ ಬೈಲು ನಿವಾಸಿ ದಿನಕರ ನಾಗು ಶೆಟ್ಟಿ ಇವರಿಗೆ 2016ರಲ್ಲಿ ಮೂರು ತಿಂಗಳ ಮಟ್ಟಿಗೆ 3,32,000 ಹಣವನ್ನು ನೀಡಿದ್ದು, ಮರುಪಾವತಿಗಾಗಿ ದಿನಕರ್ ಶೆಟ್ಟಿ 3 ಚೆಕ್ಕನ್ನು ನೀಡಿದ್ದರು. ಬ್ಯಾಂಕಿನಲ್ಲಿ ಚೆಕ್ ಹಾಕಿದಾಗ ಅದು ಬೌನ್ಸ್ ಆಗಿತ್ತು.

ಹೆಬ್ರಿ : ಚೆಕ್ ಬೌನ್ಸ್ – ಪ್ರತ್ಯೇಕ 3 ಪ್ರಕರಣಗಳಲ್ಲಿ ಆರೋಪಿಗೆ 18 ತಿಂಗಳ ಸಜೆ Read More »

ಶಿವಪುರ ಸೂರಿಮಣ್ಣು ಮಠದಲ್ಲಿ ಸಂಹಿತ ಯಾಗಶಾಲೆ ಲೋಕಾರ್ಪಣೆ

ಹೆಬ್ರಿ : ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠದಲ್ಲಿ ಇತ್ತೀಚೆಗೆ ಸಂಹಿತ ಯಾಗಶಾಲೆ ಲೋಕಾರ್ಪಣೆ, ಶ್ರೀವಾದಿರಾಜ ಗುರು ಸಾರ್ವಭೌಮರ ಜನ್ಮದಿನೋತ್ಸವ ಮತ್ತು ಭಜನಾ ಮಂಗಲೋತ್ಸವ ನಡೆಯಿತು.ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಂಹಿತ ಯಾಗಶಾಲೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸೂರಿಮಣ್ಣು ಮಠದ ಮುಖ್ಯಸ್ಥ ಎಸ್. ಸದಾಶಿವ ಉಪಾಧ್ಯಾಯ, ರವಿರಾಜ್‌ ಉಪಾಧ್ಯಾಯ, ಸ್ಥಳೀಯ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.

ಶಿವಪುರ ಸೂರಿಮಣ್ಣು ಮಠದಲ್ಲಿ ಸಂಹಿತ ಯಾಗಶಾಲೆ ಲೋಕಾರ್ಪಣೆ Read More »

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದಾತ್ಮಕ ಸುತ್ತೋಲೆ

ಬೆಂಗಳೂರು : ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆಯನ್ನು ರಾಜ್ಯ ಸರಕಾರ ಫೆಬ್ರವರಿ 16ರಂದು ಹೊರಡಿಸಿರುವುದು ಇದೀಗ ತಿಳಿದುಬಂದಿದೆ. ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ವಿರೋಧಗಳು ವ್ಯಕ್ತವಾಗುತ್ತಿದೆ. ಸುತ್ತೋಲೆಯಲ್ಲಿ ಏನಿದೆ?ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 1ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದಾತ್ಮಕ ಸುತ್ತೋಲೆ Read More »

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸೋಜನ್‌ ಪಿ. ಜೇಮ್ಸ್‌

ಕಾರ್ಕಳ : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಉದ್ಯಮಿ, ಈದು ಗ್ರಾಮ ಹೊಸ್ಮಾರಿನ ಸೋಜನ್‌ ಪಿ. ಜೇಮ್ಸ್‌ ಅವರು ನೇಮಕಗೊಂಡಿದ್ದಾರೆ. ಈ ಕುರಿತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾ‍ಧ್ಯಕ್ಷ ಡಾ. ಅನಿಲ್‌ ಥಾಮಸ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ತಾಲೂಕು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸೋಜನ್‌ ಅವರು ಕ್ರೈಸ್ತ ಸಮುದಾಯದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸೋಜನ್‌ ಪಿ. ಜೇಮ್ಸ್‌ Read More »

error: Content is protected !!
Scroll to Top