• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ನಿಟ್ಟೆ : ಬೈಕ್‌ ಸ್ಕಿಡ್‌ ಆಗಿ ಸಹ ಸವಾರೆ ಸಾವು

ಕಾರ್ಕಳ : ಬೈಕ್‌ ಸ್ಕಿಡ್‌ ಆಗಿ ಮಹಿಳೆಯೋರ್ವರು ಸಾವನ್ನಪ್ಪಿದ ದುರ್ಘಟನೆ ಜು. 21 ರಂದು ನಿಟ್ಟೆಯಲ್ಲಿ ಸಂಭವಿಸಿದೆ. ನಿಟ್ಟೆ ಗರಡಿ ಬಳಿ ನಿವಾಸಿ ಮಲ್ಲಿಕಾ ಶೆಟ್ಟಿ (42) ಎಂಬವರೇ ಮೃತ ದುರ್ದೈವಿ. ಮಂಗಳೂರು ತೆರಳಲು ಹೊರಟಿದ್ದ ಮಲ್ಲಿಕಾ ಅವರನ್ನು ಮಗ ಭವಿಷ್‌ ಶೆಟ್ಟಿ ಬೈಕ್‌ನಲ್ಲಿ ಕೂರಿಸಿಕೊಂಡು ನಿಟ್ಟೆ ಬಸ್‌ ನಿಲ್ದಾಣಕ್ಕೆ ಹೊರಟಿದ್ದರು. ನಿಟ್ಟೆ ಗರಡಿ ಸಮೀಪ ಬೈಕ್‌ ಸ್ಕಿಡ್‌ ಆಗಿ ಮಲ್ಲಿಕಾ ಅವರು ಡಾಮರು ರಸ್ತೆಗೆ ಎಸೆಯಲ್ಪಟ್ಟರು. ಪರಿಣಾಮ ಮಲ್ಲಿಕಾ ಅವರ ತಲೆಗೆ ತೀವ್ರತೆರನಾದ ಗಾಯವಾಗಿ ಕೊನೆಯುಸಿರೆಳೆದರು.

ನಿಟ್ಟೆ : ಬೈಕ್‌ ಸ್ಕಿಡ್‌ ಆಗಿ ಸಹ ಸವಾರೆ ಸಾವು Read More »

ಮಾಳ ಘಾಟಿಯಲ್ಲಿ ಕಾರು ಅಪಘಾತ : ತಿಂಗಳ ಬಳಿಕ ದೂರು ದಾಖಲು

ಕಾರ್ಕಳ : ಮಾಳ ಘಾಟಿಯಲ್ಲಿ ಕಳೆದ ಜೂ. 10ರಂದು ಸಂಭವಿಸಿದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಸಮೀಪದ ಅಡ್ಡೂರಿನ ಕೋಟಿಪಳ್ಳ ಹೌಸ್‌ ಹನೀಫ್‌ ಎ.ಕೆ. (40) ಎಂಬವರು ದೂರು ದಾಖಲಿಸಿದ್ದಾರೆ.ಕ್ರೆಟ್ಟಾ ಕಾರಿನಲ್ಲಿ ಹೋಗುತ್ತಿರುವಾಗ ಘಾಟಿಯಲ್ಲಿ ದನ ಅಡ್ಡ ಬಂದಿದ್ದು, ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಚಾಲಕ ಮುಬಾರಕ್‌ ಬ್ರೇಕ್‌ ಹಾಕಿದಾಗ ಕಾರು ನಿಯಂತ್ರಣ ತಪ್ಪಿ ಬಂಡೆಗೆ ದಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಹನೀಫ್‌, ತಶರೀಫಾ ಹಾಗೂ

ಮಾಳ ಘಾಟಿಯಲ್ಲಿ ಕಾರು ಅಪಘಾತ : ತಿಂಗಳ ಬಳಿಕ ದೂರು ದಾಖಲು Read More »

ಬೈಲೂರು : ಕೆಸರಲ್ಲಿ ಹೂತುಹೋದ ಹಿಟಾಚಿ ಸಾಗಿಸುತ್ತಿದ್ದ ಲಾರಿ

ಕಾರ್ಕಳ : ಹಿಟಾಚಿಯನ್ನು ಸಾಗಿಸುತ್ತಿದ್ದ ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಘಟನೆ ಜು. 8 ರಂದು ಬೈಲೂರಿನಲ್ಲಿ ಸಂಭವಿಸಿದೆ. ಕಾರ್ಕಳದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟಿಪ್ಪರ್‌ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ ಮುಂಭಾಗದ ರಸ್ತೆ ತಿರುವಿನಲ್ಲಿ ಕೆಸರಿನಲ್ಲಿ ಹೂತು ಹೋಗಿ ವಾಲಿದೆ. ಅದೃಷ್ಟವಶಾತ್‌ ಟಿಪ್ಪರ್‌ ಸಂಪೂರ್ಣವಾಗಿ ಪಲ್ಟಿಯಾಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ .ಈ ರಸ್ತೆಯಲ್ಲಿ ಇತ್ತೀಚೆಗೆ ಅನೇಕ ಅಪಘಾತಗಳು ಸಂಭವಿಸಿದೆ. ಕೆಲವರು ಕೂದಳೆಲೆ ಅಂತರದಲ್ಲಿ ಪಾರಾಗಿದ್ದರೆ, ಕಳೆದ ತಿಂಗಳು ಓರ್ವ ಸ್ಕೂಟಿ ಸವಾರ ಇದೇ ಸ್ಥಳದಲ್ಲಿ

ಬೈಲೂರು : ಕೆಸರಲ್ಲಿ ಹೂತುಹೋದ ಹಿಟಾಚಿ ಸಾಗಿಸುತ್ತಿದ್ದ ಲಾರಿ Read More »

ಬೈಕ್‌ ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು

ಕಾರ್ಕಳ : ಯರ್ಲಪಾಡಿಯಲ್ಲಿ ಬೈಕೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಪಾದಚಾರಿ ಆಸ್ಪತ್ರೆ ದಾಖಲಾದ ಘಟನೆ ಜು. 4 ರಂದು ಸಂಭವಿಸಿದೆ. ರಾಜು ಮೂಲ್ಯ ಎಂಬುವವರು ಮುಂಜಾನೆ ಕಾಂತರಗೋಳಿ ಕಡೆಯಿಂದ ಬೈಲೂರು ಕಡೆಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಸಂತೋಷ ಪೂಜಾರಿ ಎಂಬಾತ ಕಾಂತರಗೋಳಿ ಕಡೆಯಿಂದ ಬೈಲೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EL-9760 ನೋಂದಾವಣಿಯ ಬೈಕ್‌ ರಾಜು ಮೂಲ್ಯ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಾಜು ಮೂಲ್ಯ ರಸ್ತೆ ಬಿದ್ದಿದ್ದಾರೆ ಮತ್ತು ಅವರ ಮುಖ, ಕಣ್ಣಿನ ಬಳಿ

ಬೈಕ್‌ ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು Read More »

ಚಲಿಸುತ್ತಿದ್ದ ಬಸ್​ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ;​ ಪ್ರಾಣಾಪಾಯದಿಂದ ಪಾರು

ಚಿಕ್ಕಬಳ್ಳಾಪುರ : ಶಕ್ತಿ ಯೋಜನೆಯಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಬಹುತೇಕ ಎಲ್ಲಾ ಬಸ್​ಗಳು ಫುಲ್​ ಆಗುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗಿ ಬರುವುದಕ್ಕೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪುಟ್​ಬೋಡ್​ ಮೇಲೆ ನಿಂತುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರದ ಹೊಸಹಳ್ಳಿ ಗೇಟ್ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್​ನಿಂದ ವಿದ್ಯಾರ್ಥಿನಿಯೋರ್ವಳು ಕೆಳಗೆಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಚಲಿಸುತ್ತಿದ್ದ ಬಸ್​ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ;​ ಪ್ರಾಣಾಪಾಯದಿಂದ ಪಾರು Read More »

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ : ಸವಾರರಿಗೆ ಗಾಯ

ಹೆಬ್ರಿ : ಅಮೃತ ಭಾರತಿ ಶಾಲೆಯ ಬಸ್ ಸ್ಟಾಪ್ ಬಳಿ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದು ಸವಾರರು ಗಾಯಗೊಂಡಿರುವ ಘಟನೆ ಜೂ. 30 ರಂದು ಸಂಭವಿಸಿದೆ. ರಂಜಿತ್‌ ಎಂಬುವವರು ಬೈಕ್‌ನಲ್ಲಿ ಹೆಬ್ರಿ ಕಡೆಗೆ ಸಾಗುತ್ತಿದ್ದಾಗ, ಮುಂಭಾಗದಲ್ಲಿ ಮುದ್ರಾಡಿ ಕಡೆಯಿಂದ ಭರತ್‌ ಎಂಬುವವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎರಡೂ ಬೈಕ್‌ಗಳು ರಸ್ತೆಗೆ ಉರುಳಿದ್ದು, ಸವಾರರಾದ ರಂಜಿತ್‌ಗೆ ತಲೆ, ಎಡಕೈ ಮತ್ತು ಎಡಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಭರತ್‌ಗೆ ಎಡಗಾಲಿಗೆ ಗಾಯವಾಗಿದೆ. ಈ ಕುರಿತು

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ : ಸವಾರರಿಗೆ ಗಾಯ Read More »

ಬೈಕ್‌ ಡಿಕ್ಕಿ : ಪಾದಚಾರಿಗೆ ಗಾಯ

ಕಾರ್ಕಳ : ಬೈಕ್‌ ಡಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡಿರುವ ಘಟನೆ ಹಿರ್ಗಾನ ಗ್ರಾಮದ ಕೊರಳ ದರ್ಖಾಸ್ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.ಕಾರ್ಕಳದ ಬಟ್ಟೆ ಮಳಿಗೆ ಸಿಬ್ಬಂದಿ ಮಮತಾ ಎಂಬವರು ರಾತ್ರಿ ಕೆಲಸ ಮುಗಿಸಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಬೈಕ್‌ ಮಮತಾ ಅವರ ಕೈಗೆ ತಾಗಿಕೊಂಡು ಹೋಗಿ ಅವರ ಹಿಂದಿನಿಂದ ಬರುತ್ತಿದ್ದ ದೊಡ್ಡಪ್ಪ ಗೋಪಾಲ ನಾಯ್ಕ್‌ ಅವರಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಗೋಪಾಲ ನಾಯ್ಕ್‌ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಬೈಕ್‌ ಚಲಾಯಿಸುತ್ತಿದ್ದ ಆದಿತ್ಯ ಎಂಬಾತನೂ

ಬೈಕ್‌ ಡಿಕ್ಕಿ : ಪಾದಚಾರಿಗೆ ಗಾಯ Read More »

ಕಾರ್ಕಳ : ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಕಾರ್ಕಳ : ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣ ಶಾಸಕ ಪಂಜುಗುಳಿ ರೋಹಿತ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಶನಿವಾರ ಮಿಯ್ಯಾರು ಸೇತುವೆ ಬಳಿ ಸಂಭವಿಸಿದೆ. ಮುಡಾರು- ನಲ್ಲೂರು ಕ್ರಾಸ್ ಬಳಿ ವೇಗವಾಗಿ ಸಾಗುತ್ತಿದ್ದ ಕಾರಿನ ಟಯರ್ ಏಕಾಏಕಿ ಸ್ಫೋಟಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ವಾಹನದಲ್ಲಿದ್ದ ಶಾಸಕರು ಪಾರಾಗಿದ್ದಾರೆ. ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ಮಧ್ಯೆ ಸಿಲುಕಿದ ಜೀಪು ಜಖಂಗೊಂಡಿದೆ. ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಪ್ರತ್ಯೇಕ ವಾಹನದಲ್ಲಿ ಶಾಸಕರು ಶೃಂಗೇರಿ ಕಡೆಗೆ ಪ್ರಯಾಣಿಸಿದ್ದಾರೆ.

ಕಾರ್ಕಳ : ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ಕಾರು ಅಪಘಾತ Read More »

ಸ್ಕೂಟಿಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಕಾರ್ಕಳ : ಕಾರ್ಕಳ : ಮಿಯ್ಯಾರಿನಲ್ಲಿ ಸ್ಕೂಟಿ ಹಾಗೂ ಕಾರು ಮಧ್ಯೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಗಾಯಗೊಂಡ ಘಟನೆ ಜೂ. 21ರಂದು ನಡೆದಿದೆ.ಆಂಟನಿ ಮೋರಸ್ ಎಂಬವರು ಮಿಯ್ಯಾರು ಜೊಡುಕಟ್ಟೆಯಿಂದ ಕಾರ್ಕಳದ ಕಡೆಗೆ ತನ್ನ ಸ್ಕೂಟಿಯಲ್ಲಿ ಬರುತ್ತಿದ್ದಾಗ ಕಾರ್ಕಳದಿಂದ ಬಜಗೋಳಿ ಕಡೆ ಸಾಗುತ್ತಿದ್ದ ಮಾರುತಿ ಸ್ವಿಪ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಪಲ್ಟಿಯಾಗಿ ಆಂಟನಿ ಮೋರಸ್ ಅವರಿಗೆ ಗಾಯವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿಗೆ ಕಾರು ಡಿಕ್ಕಿ – ಸವಾರನಿಗೆ ಗಾಯ Read More »

ಆಗುಂಬೆ ಘಾಟಿಯಲ್ಲಿ ಬಸ್‌ – ಬೈಕ್ ಮುಖಾಮುಖಿ ಡಿಕ್ಕಿ – ಬೈಕ್‌ ಸವಾರ ಸ್ಥಳದಲ್ಲೇ ಸಾವು

ಹೆಬ್ರಿ : ಆಗುಂಬೆ ಘಾಟಿಯಲ್ಲಿ ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಬ್ರಹ್ಮಾವರ ತಾಲೂಕಿನ ಶಶಾಂಕ್‌ (22) ಎಂಬವರೇ ದಾರುಣವಾಗಿ ಸಾವಿಗೀಡಾದ ಯುವಕ. ಶಶಾಂಕ್ ಆತನ ಸಂಬಂಧಿಕಳ ಜೊತೆ ಆಗುಂಬೆ ಕಡೆಯಿಂದ ಹೆಬ್ರಿ ಮೂಲಕ ಬ್ರಹ್ಮಾವರ ತೆರಳುತ್ತಿದ್ದ ಎಂದು ಹೇಳಲಾಗುತ್ತಿದೆ. ಆಗುಂಬೆಯ 2 ನೇ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗುಂಬೆ ಘಾಟಿಯಲ್ಲಿ ಬಸ್‌ – ಬೈಕ್ ಮುಖಾಮುಖಿ ಡಿಕ್ಕಿ – ಬೈಕ್‌ ಸವಾರ ಸ್ಥಳದಲ್ಲೇ ಸಾವು Read More »

error: Content is protected !!
Scroll to Top