Author name: newskarkala desk

ಎರ್ಪಪಾಡಿ-ದ್ವಿಚಕ್ರ ಅಪಘಾತ

ಕಾರ್ಕಳ : ಎರ್ಲಪಾಡಿ ಗ್ರಾಮದ ಕೊಡಂಗೆ ಜಡ್ಡು ಬಳಿ ಜು. 31ರಂದು ದ್ವಿಚಕ್ರ ಅಪಘಾತಕ್ಕೀಡಾಗಿ ಇದೇ ಗ್ರಾಮದ ಸುಜಾತ ಎಂ ಆಚಾರ್ಯ ( 36) ಗಾಯಗೊಂಡಿರುತ್ತಾರೆ. ಸುಜಾತ ಅವರು ತನ್ನ ಅಳಿಯ ಪ್ರಶಾಂತ್‌ ಅವರೊಂದಿಗೆ ಬೈಕ್‌ನಲ್ಲಿ ಸಹಸವಾರೆಯಾಗಿ ಸಾಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.  

ಎರ್ಪಪಾಡಿ-ದ್ವಿಚಕ್ರ ಅಪಘಾತ Read More »

ಕೊರೊನಾ ಪಾಸಿಟಿವ್‌ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗು ಕಾಲಿಡುತ್ತಿದ್ದೆಂತೆಯೇ ಸಾರ್ವಜನಿಕ ತಾ. ಆಸ್ಪತ್ರೆ ಸಕಲ ಸಿದ್ಧತೆಗಳೊಂದಿಗೆ ಅದನ್ನು ಎದುರಿಸಲು ಸನ್ನದ್ಧವಾಗಿತ್ತು. ಕೊರೊನಾ ಬಾಧಿತರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಯಾವೊಂದು ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಇಲ್ಲಿನ ವೈದ್ಯರು, ಸಿಬ್ಬಂದಿ ಸೇವೆ ಪ್ರಶಂಸನೀಯ. ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದವರಲ್ಲಿ ಓರ್ವರಾದ ಡಾ. ಜ್ಯೋತ್ಸ್ನಾ  ಅವರೊಂದಿಗೆ ನ್ಯೂಸ್‌ ಕಾರ್ಕಳ. ಕಾಂ. ವಿಶೇಷ ಸಂದರ್ಶನ. ಈ ಸಂಚಿಕೆಯ ಪ್ರಾಯೋಕರು ಡಿ. ಆರ್.‌ ರಾಜು (ಅಧ್ಯಕ್ಷರು, ತಾ.

ಕೊರೊನಾ ಪಾಸಿಟಿವ್‌ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ Read More »

ಕಥೊಲಿಕ್ ಸಭಾದಿಂದ ಆರ್ಥಿಕ ಸಹಾಯ

ಕಾರ್ಕಳ : ಕಥೊಲಿಕ್ ಸಭಾ ಕಾರ್ಕಳ ವಲಯ ಇದರ ವತಿಯಿಂದ ಅಜೆಕಾರಿನ ಕ್ಯಾನ್ಸರ್ ಪೀಡಿತ ವ್ಯಕ್ತಿಯ ಚಿಕಿತ್ಸೆಗಾಗಿ ರೂ. 5000 ನೀಡಲಾಯಿತು. ಕಥೋಲಿಕ್‌ ಸಭಾ ವಲಯಾಧ್ಯಕ್ಷ ರಾಬರ್ಟ್ ಮಿನೇಜಸ್ ಚೆಕ್ ಹಸ್ತಾಂತರಿಸಿದರು. ಸಭಾದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ಓಲಿವಿಯಾ ಡಿಮೆಲ್ಲೊ, ಖಜಾಂಚಿ ಥಾಮಸ್‌ ನಜ್ರೆತ್ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕಥೊಲಿಕ್ ಸಭಾದಿಂದ ಆರ್ಥಿಕ ಸಹಾಯ Read More »

ಉಡುಪಿ ಲೋಕಾಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣ್ಣಾಮಲೈಗೆ ಒಲವಿದೆಯೇ ?

ನ್ಯೂಸ್‌ ಕಾರ್ಕಳ ವಿಶೇಷ ಸಂದರ್ಶನ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪ್ರಸ್ತುತ ಏನು ಮಾಡುತ್ತಿದ್ದಾರೆ ? ಅವರ ಮುಂದಿನ ರಾಜಕೀಯ ನಿಲುವು-ಒಲವೇನು ? ಎನ್ನುವ ಕುರಿತು ಅವರೊಂದಿಗೆ ನಡೆಸಿದ ಎಕ್ಸ್‌ಕ್ಲೂಸಿವ್‌ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಪೊಲೀಸ್ ಇಲಾಖೆಯ ಘನತೆ, ಗೌರವವನ್ನು ಹೆಚ್ಚಿಸಿದ ಅಪ್ಪಟ ಅಪರಂಜಿ ಅಣ್ಣಾಮಲೈ. ತನ್ನ ದಕ್ಷತೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಔದಾರ್ಯತೆ, ಮಾನವೀಯತೆಯ ಮೂಲಕವೇ ಇಡೀ ಕರ್ನಾಟಕದಾದ್ಯಂತ ಮನೆ ಮಾತಾದವರು. ತಮಿಳುನಾಡಿನ  ಕೊಯಮ್ಮತ್ತೂರು ಕರೂರು ಮೂಲದ ಅಣ್ಣಾಮಲೈ ತನ್ನ

ಉಡುಪಿ ಲೋಕಾಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣ್ಣಾಮಲೈಗೆ ಒಲವಿದೆಯೇ ? Read More »

ಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌

ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರರಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌ ಆಯ್ಕೆಯಾಗಿರುತ್ತಾರೆ. ಜು. 31ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 10 ಮಂದಿ ಉಪಾಧ್ಯಕ್ಷರು, 4 ಮಂದಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ನೂತನ ವಕ್ತಾರರಾಗಿ ನೇಮಕಗೊಂಡ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರು ಕಾರ್ಕಳ ತಾಲೂಕಿನ ಕೆರ್ವಾಶೆಯವರು.

ಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌ Read More »

ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ

ಕಾರ್ಕಳ : ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ಕಾರ್ಕಳದ ಶ್ರೀ ಕಾಶಿಮಠದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ವ್ರತ ಹಾಗೂ ಚೂಡಿ ಪೂಜೆ ಜು. 31ರಂದು ಸರಳವಾಗಿ ನಡೆಯಿತು. ಜಿ.ಎಸ್‌.ಬಿ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ Read More »

ನಾಗರಪಂಚಮಿ ಮನೆಯಲ್ಲೇ ಆಚರಿಸಿ : ಡಿಸಿ

ಉಡುಪಿ : ಶ್ರದ್ಧಾಕೇಂದ್ರಗಳಲ್ಲಿ ಜನಸಂದಣಿ ಕಂಡು ಬಂದರೆ ಕೊರೊನಾ ವೈರಸ್‌ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ನಾಗರ ಪಂಚಮಿ ಹಬ್ಬವನ್ನು ಎಲ್ಲರೂ ತಮ್ಮ ಮನೆಯಲ್ಲೇ ಆಚರಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರು ನಾಗರಪಂಚಮಿ ಹಬ್ಬಕ್ಕೆ ತಡೆ ಹೇರಿದ್ದಾರೆ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಜು. 24ರಂದು ಸ್ಪಷ್ಟೀಕರಣ ನೀಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಈ ವರ್ಷ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವಂತಿಲ್ಲ. ಸಾಮಾಜಿಕ ಅಂತರ ಪಾಲನೆ ಮಾಡಿದರೂ ವೈರಸ್‌

ನಾಗರಪಂಚಮಿ ಮನೆಯಲ್ಲೇ ಆಚರಿಸಿ : ಡಿಸಿ Read More »

error: Content is protected !!
Scroll to Top