Author name: newskarkala desk

ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತ ಮೋರ್ಚಾದ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಶೆಟ್ಟಿ ಇನ್ನಾ ಆಯ್ಕೆಯಾಗಿರುತ್ತಾರೆ. ೩ ಬಾರಿ ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ೧ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಯಕರ ಪೂಜಾರಿ ಅವರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿ‍ರ್ವಹಿಸಿದ್ದ, ಈ ವೇಳೆ ಹೆಬ್ರಿ ಸಾಲುಮರದ ತಿಮ್ಮಕ್ಕ ಪಾರ್ಕ್‌ ನಿರ್ಮಾಣಗೊಂಡಿದೆ. ಹೆಬ್ರಿ ವಲಯ ಬಿಲ್ಲವ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿ‍ರ್ವಹಿಸುತ್ತಿರುವ ಇವರು ಹಲವಾರು ಸಾಮಾಜಿಕ, […]

ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ Read More »

ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕ್ಕೆ ಹೋಟೆಲ್ ಮಾಲಿಕರ ಆಗ್ರಹ

ಕಾರ್ಕಳ: ಕಾನೂನು ರೀತ್ಯಾಕ್ಕೆ ವಿರುದ್ಧವಾಗಿ ತಾಲೂಕು ವ್ಯಾಪ್ತಿಯಲ್ಲಿ ತಲೆಎತ್ತಿರುವ ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾರ್ಕಳ ತಾಲೂಕು ಹೋಟೆಲ್ ಮಾಲಿಕರ ಸಂಘವು ಒತ್ತಾಯಿಸಿದೆ. ನಗರದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಜು. 21ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖ ಹರೀಶ್ ನಾಯಕ್ ಮಾತನಾಡಿ, ಹೊಟೇಲ್, ರೆಸ್ಟೋರೆಂಟ್ ಉದ್ಯಮ ಸ್ಥಾಪನೆಗೆ ಸಾಲ ಮೂಲಕ ಲಕ್ಷಾಂತರ ರೂ. ಬಂಡವಾಳ ಹೂಡಿ, ವಿವಿಧ ಇಲಾಖೆಗಳ ಮಾನ್ಯತೆ ಪತ್ರ ಪಡೆದು, ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆದು ಕಾರ್ಮಿಕರ ಹಿತಕಾಪಾಡಿಕೊಂಡು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ.ಅನಧಿಕೃತ

ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕ್ಕೆ ಹೋಟೆಲ್ ಮಾಲಿಕರ ಆಗ್ರಹ Read More »

ಹೊಸ ಪ್ರಯತ್ನ

ನಲ್ಮೆಯ ಓದುಗರೇ, ಕಾರ್ಕಳಕ್ಕೊಂದು ನಿಷ್ಪಕ್ಷಪಾತ, ಜನಾನುರಾಗಿ ಮತ್ತು ಸಶಕ್ತ ಸುದ್ದಿಮಾಧ್ಯಮದ ಅಗತ್ಯವಿದೆ, ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವ,ಇದ್ದದ್ದನ್ನು ಇದ್ದಂತೆಯೇ ಸಮಾಜದ ಮುಂದೆ ಇಡುವಂತಹ ಮಾಧ್ಯಮದ ಆವಶ್ಯಕತೆಯನ್ನು ಮನಗಂಡು ನಾವು ಕ್ರಿಯಾಶೀಲತೆಯ ಕುರುಹಾಗಿ ಕಾರ್ಕಳ ನ್ಯೂಸ್.ಕಾಂ ಎಂಬ ವೆಬ್ ನ್ಯೂಸ್ ತಾಣವನ್ನು ವಿನ್ಯಾಸಗೊಳಿಸಿದ್ದೇವೆ.ಒಂದು ಹೊಸಚಿಂತನೆ, ನೂತನ ಪ್ರಯೋಗ, ವಿನೂತನ ಕಾರ್ಯಶೈಲಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದು, ತಾಲೂಕಿನ ಸುದ್ದಿಗಳನ್ನು ಸಮಗ್ರವಾಗಿ ಮತ್ತು ಕ್ಷಿಪ್ರವಾಗಿ ಓದುಗರಿಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದೇವೆ. ಇವುಗಳ ಜತೆಗೆ ದೇಶ, ವಿದೇಶದ ಮಹತ್ವದ ವಿದ್ಯಮಾನಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಹೊಸ ಪ್ರಯತ್ನ Read More »

ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ಕರಪತ್ರ ಬಿಡುಗಡೆ

ಕಾರ್ಕಳ : ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ರೋಟರಿ ಆ್ಯನ್ಸ್ ಕ್ಲಬ್, ರೋಟರಿ ಸಂಸ್ಥೆ ಕಾರ್ಕಳ ಸಹಯೋಗದೊಂದಿಗೆ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಡಿವೈಎಸ್‌ಪಿ ಭರತ್ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ನಗರ ಪೊಲೀಸ್‌ ಠಾಣೆ ಎಸ್‌ಐ ಮಧು ಬಿ.ಇ., ರೋಟರಿ ಕ್ಲಬ್‌ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಆ್ಯನ್ಸ್  ಸಂಸ್ಥೆಯ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಕಾ‍ರ್ಯದರ್ಶಿ ಸುಮಾ ನಾಯಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಾಂತರ ಪೊಲೀಸ್‌

ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ಕರಪತ್ರ ಬಿಡುಗಡೆ Read More »

ಪರಪ್ಪಾಡಿ: ವಿಶ್ವ ಮಾದಕ ವಸ್ತು ವಿರೋಧಿ ಮಾಸಾಚರಣೆ

ಕಾರ್ಕಳ : ರೋಟರಿ ಆ್ಯನ್ಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ-ನಲ್ಲೂರುವಿನಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ಮಾಸಾಚರಣೆ ಆಚರಿಸಲಾಯಿತು. ಕಾ‍ರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಕಾರ್ಕಳ ಗ್ರಾಮಾಂತರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ನಾಗೇಶ್ ನಾಯಕ್, ಮಾದಕ ವಸ್ತುಗಳ ಗೀಳು ಅಂಟಿಸಿಕೊಂಡು ಯುವ ಸಮುದಾಯ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳಬಾರದು. ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವವಾದುದು ಎಂದರು. ರೋಟರಿ ಸಂಸ್ಥೆ ಕಾರ್ಕಳದ ಅಧ್ಯಕ್ಷೆ ರೇಖಾ ಉಪಾಧ್ಯಾಯ,

ಪರಪ್ಪಾಡಿ: ವಿಶ್ವ ಮಾದಕ ವಸ್ತು ವಿರೋಧಿ ಮಾಸಾಚರಣೆ Read More »

ಡಾ. ಜ್ಯೋತ್ಸ್ನಾ ಬಿ.ಕೆ. ಅವರಿಗೆ ಸನ್ಮಾನ

ಕಾರ್ಕಳ : ವಿಶ್ವ ವೈದ್ಯರ ದಿನಾಚರಣೆಯಂಗವಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ತಾಲೂಕು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ, ಕೋವಿಡ್-19 ಇದರ ನೋಡಲ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ. ಅವರನ್ನು ಸನ್ಮಾನಿಸಲಾಯಿತು. ಡಾ. ಆಶಾ  ಪಿ. ಹೆಗ್ಡೆ, ರೋಟರಿಯ ಡಾ. ಭರತೇಶ್ ಆದಿರಾಜ್, ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಜಗದೀಶ್ ಟಿ., ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್, ರೋಟರಿ ರಾಕ್

ಡಾ. ಜ್ಯೋತ್ಸ್ನಾ ಬಿ.ಕೆ. ಅವರಿಗೆ ಸನ್ಮಾನ Read More »

ಚೀನಾ ದೇಶಕ್ಕೆ ಬಹುದೊಡ್ಡ ಹೊಡೆತ : ವಿಖ್ಯಾತ್ ಶೆಟ್ಟಿ

ಕಾರ್ಕಳ : ಗಡಿ ರೇಖೆಯಲ್ಲಿ ಉದ್ದಟತನ ತೋರುತ್ತಿರುವ ಚೀನಾ ದೇಶಕ್ಕೆ ನಮ್ಮ ಸೈನಿಕರು ಮರೆಯಲಾಗದ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಚೀನಾ ವಸ್ತುಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಇದೀಗ ಕೇಂದ್ರ ಸರಕಾರ ಚೀನಾ ಆಪ್‌ಗಳನ್ನು ನಿಷೇಧಿಸಿರುವುದು ಚೀನಾಕ್ಕೆ ಬಹುದೊಡ್ಡ ಹೊಡೆತ ನೀಡಿದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಾವೆಲ್ಲರೂ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಚೀನಾ ವಸ್ತುಗಳನ್ನು, ಆಪ್ ಬಳಸದೇ ಅವರಿಗೆ ಆರ್ಥಿಕ ಹೊಡೆತ

ಚೀನಾ ದೇಶಕ್ಕೆ ಬಹುದೊಡ್ಡ ಹೊಡೆತ : ವಿಖ್ಯಾತ್ ಶೆಟ್ಟಿ Read More »

ಶ್ರೀ ಬಾಹುಬಲಿ ವಿಗ್ರಹ

೧೪೩೨ರ ಸಂದರ ಅರಸರ ವೀರಪಾಂಡ್ಯನ ಕಾಲದಲ್ಲಿ ಶ್ರೀ `ಗವಾನ್ ಬಾಹುಬಲಿ ವಿಗ್ರಹ ಕಾರ್ಕಳ ಸಮೀಪದ ಶಿಲಾಬೆಟ್ಟದಲ್ಲಿ ಸ್ಥಾಪನೆಯಾಯಿತು.ಏಕಶಿಲೆಯಲ್ಲಿ ನಿರ್ಮಾಣವಾದ ೪೨ ಅಡಿ ಎತ್ತರದ ಈ ವಿಶ್ವ ವಿಖ್ಯಾತ ವಿಗ್ರಹವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು ೨೬೧ ಅಡಿ ಎತ್ತರದ ಈ ಪ್ರಶಾಂತ ಪರಿಸರ ಪ್ರವಾಸಿಗರ ನೆಚ್ಚಿನ ತಾಣ. ಅತ್ಯಂತ ಆಕರ್ಷಣೀಯವಾಗಿರುವ ಈ ಬೆಟ್ಟದ ಮೇಲಿಂದ ಇಡೀ ಕಾರ್ಕಳದ ಸೌಂದರ್ಯ ಸವಿಯಬಹುದಾಗಿದೆ.

ಶ್ರೀ ಬಾಹುಬಲಿ ವಿಗ್ರಹ Read More »

ಪಡುತಿರುಪತಿ

ನಗರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳದಲ್ಲಿನ ಪುರಾತನ ದೇಗುಲಗಳಲ್ಲೊಂದು. ೧೫೩೭ರಲ್ಲಿ ದೇವಳ ನಿರ್ಮಾಣವಾಯಿತೆಂಬ ಪ್ರತೀತಿ ಇದೆ. ಇಲ್ಲಿನ ಪಟ್ಟದ ದೇವರು ಚಪ್ಪರ ಶ್ರೀನಿವಾಸ. ಉತ್ಸವ ದೇವರು ಶ್ರೀ ವೆಂಕಟರಮಣ. ಇಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ವಿಶ್ವರೂಪ ದರ್ಶನ ಹಾಗೂ ಲಕ್ಷ ದೀಪೋತ್ಸವ, ಲಕ್ಷದೀಪೋತ್ಸವಂದು ನಡೆಯುವ ವನಜನ, ವೈಶಾಖ ಮಾಸದಲ್ಲಿ ನಡೆಯುವ ರಥೋತ್ಸವ ಅತ್ಯಂತ ವೈವದಿಂದ ಜರಗುವುದು. ಜಿಎಸ್‌ಬಿಯವರ ಆಡಳಿತಕ್ಕೊಳಪಟ್ಟ ಈ ದೇಗುಲಕ್ಕೆ ದೇಶದ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕ್ತರು ಆಗಮಿಸಿ, ದೇವರ ದರ್ಶನ

ಪಡುತಿರುಪತಿ Read More »

error: Content is protected !!
Scroll to Top