Author name: Bhuvana

ಗಣೇಶ ಚತುರ್ಥಿ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಟಿ. ಸ್ವರೂಪ ಆದೇಶಿಸಿದ್ದಾರೆ. ಈ ಆದೇಶದಲ್ಲಿ ಸೆ. 14 ರಂದು, ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸೆ.16 ರಂದು ಹಾಗೂ ಕುಂದಾಪುರ ನಗರ, ಗಂಗೊಳ್ಳಿ, ಕಾಪು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಾಗಿ ತಿಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿರುವುದಾಗಿದೆ.ಗಣೇಶ ಹಬ್ಬದಂದು ವಿಸರ್ಜನೆ ಸಮಯದಲ್ಲಿ ಮದ್ಯಪಾನ ಮಾಡಿ ಗಲಭೆ, ಗೊಂದಲಗಳನ್ನು

ಗಣೇಶ ಚತುರ್ಥಿ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ Read More »

ಮೂರೂರು-ಹಿರ್ಗಾನ: 3ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ

ಭಕ್ತರಿಂದ ರಜತ ಕಿರೀಟ, ತ್ರಿಶೂಲ ಸಮರ್ಪಣೆ ಹಿರ್ಗಾನ: ಶ್ರೀಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ 3ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಜರುಗಲಿದೆ. ಗಣೇಶೋತ್ಸವ ಸಮಿತಿ ಹಾಗೂ ರೈರ‍್ಸ್ ಆಫ್ ಕಾರ್ಕಳ ಸಹಯೋಗದಲ್ಲಿ ಎಣ್ಣೆಹೊಳೆಯಿಂದ ಬೆಳಗ್ಗೆ 8 ಗಂಟೆಗೆ ಗಣೇಶನ ವಿಗ್ರಹದ ಮೆರವಣಿಗೆ ನಡೆಯಲಿದೆ. ಈ ವೇಳೆ ಗಣೇಶನಿಗೆ ಭಕ್ತರಿಂದ ಬೆಳ್ಳಿಯ ಕಿರೀಟ ಮತ್ತು ನೆಲ್ಲಿಕಟ್ಟೆಯ ಸವಿತಾ ಪ್ರಕಾಶ್ ಶೆಟ್ಟಿ ಅವರು ಅರ್ಪಿಸಿರುವ ಬೆಳ್ಳಿಯ ತ್ರಿಶೂಲವನ್ನು ಪುರಮೆರವಣಿಗೆಯ ಮೂಲಕ ತರಲಾಗುತ್ತದೆ. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ

ಮೂರೂರು-ಹಿರ್ಗಾನ: 3ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ Read More »

ಸೆ. 18: ಸಿಎಂ ಡಿ ಕೆ ಶಿವಕುಮಾರ್ ಹೆಬ್ರಿಗೆ

ಹೆಬ್ರಿ: ಸೆ. 18 ರಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಬ್ರಿಗೆ ಆಗಮಿಸಲಿದ್ದು, ಕಸ್ತೂರಿ ರಂಗನ್ ‌ವರದಿಗೆ ಸಂಬಂಧಿಸಿದಂತೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಸ್ತೂರಿ ರಂಗನ್ ‌ವರದಿಗೆ ಸಂಬಂಧಿಸಿದ ಹಾಗೆ ಜನರಲ್ಲಿ ಸೃಷ್ಟಿಯಾಗಿರುವ ಆತಂಕ, ಆಕ್ಷೇಪಣೆಗಳ ಹಿನ್ನೆಲೆ ಈ ಸಭೆ ನಡೆಯಲಿದೆ. ಕಸ್ತೂರಿರಂಗನ್ ವರದಿಯ 7ನೇ ಕರಡು ಪ್ರಕಟಗೊಂಡಿದ್ದು, ಈ ವರದಿಯ ಕುರಿತು ಸಾರ್ವಜನಿಕ ಆಕ್ಷೇಪಣೆ, ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಜನವಸತಿ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಿಂದ ಕೈಬಿಡಬೇಕು ಎಂಬ ಒತ್ತಾಯ ಸಹ ವಿವಿಧೆಡೆಗಳಿಂದ

ಸೆ. 18: ಸಿಎಂ ಡಿ ಕೆ ಶಿವಕುಮಾರ್ ಹೆಬ್ರಿಗೆ Read More »

ಮಳೆ ಇಲ್ಲದೆ ಕಂಗಾಲಾದ ರೈತ — ಒಣಗುತ್ತಿದೆ ಬತ್ತದ ಗದ್ದೆಗಳು

ಸೆಪ್ಟೆಂಬರ್‌ನಲ್ಲಿ ಸುಡು ಬಿಸಿಲು; ಕೈಗೆ ಬರಬೇಕಾದ ಫಸಲು ಕಣ್ಣೆದುರೇ ಒಣಗುವ ಆತಂಕ ಕರಾವಳಿಯ ರೈತನ ಬದುಕು ಮಳೆಯೊಂದಿಗೆ ಬೆಸೆದುಕೊಂಡಿದೆ. ಮಳೆ ಬಂತು ಎಂದರೆ ಗದ್ದೆಯಲ್ಲಿ ಹಸಿರು ನಳನಳಿಸುತ್ತದೆ. ಬತ್ತದ ತೆನೆಗಳು ತೂಗಾಡಿದಾಗ ರೈತನ ಮುಖದಲ್ಲಿ ನೆಮ್ಮದಿಯ ನಗು ಮೂಡುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಸೆಪ್ಟೆಂಬರ್ ತಿಂಗಳಲ್ಲೇ ಮಾರ್ಚ್–ಏಪ್ರಿಲ್ ತಿಂಗಳಿನಂತೆ ಸುಡು ಬಿಸಿಲು ಕಾಡುತ್ತಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತನ ಕಣ್ಣುಗಳು ಆಕಾಶದತ್ತ ನೆಟ್ಟಿವೆ. ಫಸಲು ನೀಡುವ ಹಂತಕ್ಕೆ ಬಂದಿರುವ ಬತ್ತದ ಗದ್ದೆಗಳು ನೀರಿನ ಕೊರತೆಯಿಂದ ನಿಧಾನವಾಗಿ

ಮಳೆ ಇಲ್ಲದೆ ಕಂಗಾಲಾದ ರೈತ — ಒಣಗುತ್ತಿದೆ ಬತ್ತದ ಗದ್ದೆಗಳು Read More »

ಪಡುಬಿದ್ರಿ ಕಡಲ ತೀರದಲ್ಲಿ ಇನ್ನೂ ತೆರವಾಗದೇ ಉಳಿದಿದೆ ಅಲಯನ್ಸ್ ಟಗ್ ಅವಶೇಷ

ಮೀನುಗಾರಿಕೆ ಮತ್ತು ಪ್ರವಾಸಿಗರಿಗೂ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿರುವ ಟಗ್ ತೆರವು ಯಾವಾಗ? ಉಡುಪಿ: ಕಳೆದ ಐದು ವರ್ಷಗಳ ಹಿಂದಿನ ತೌಕ್ತೆ ಚಂಡಮಾರುತದ ಸಂದರ್ಭದಲ್ಲಿ ಪಡುಬಿದ್ರಿ ಕಡಿಪಟ್ಣ ಕಡಲತೀರಕ್ಕೆ ಬಂದು ಸಿಲುಕಿದ್ದ ‘ಅಲಯನ್ಸ್’ ಟಗ್‌ ಇಂದಿಗೂ ಸಂಪೂರ್ಣವಾಗಿ ತೆರವಾಗದೆ ಉಳಿದಿದ್ದು, ಇದು ಸ್ಥಳೀಯರು ಮತ್ತು ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ. ಮಂಗಳೂರಿನ ಸಮುದ್ರದಲ್ಲಿ 2021 ರ ತೌಕ್ತೆ ಚಂಡಮಾರುತದ ಸಮಯದಲ್ಲಿ ಅಪಘಾತಕ್ಕೆ ಒಳಗಾದ ಟಗ್, ಆ ಬಳಿಕ ಸಮುದ್ರದ ಅಲೆಗಳ ರಭಸಕ್ಕೆ ಪಡುಬಿದ್ರಿ ಕಡಲ ತೀರಕ್ಕೆ ಬಂದು ಬಿದ್ದಿತ್ತು. ಈ

ಪಡುಬಿದ್ರಿ ಕಡಲ ತೀರದಲ್ಲಿ ಇನ್ನೂ ತೆರವಾಗದೇ ಉಳಿದಿದೆ ಅಲಯನ್ಸ್ ಟಗ್ ಅವಶೇಷ Read More »

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಬ್ರಿಕ್ಸ್ ‌ಶೃಂಗಸಭೆ ಆರಂಭ

ಜನಕೇಂದ್ರಿತ ಮತ್ತು ಮಾನವೀಯತೆಗೆ ಮೊದಲ ಆದ್ಯತೆ ನೀಡುವ ತತ್ವದ ಮೇಲೆ ನಡೆಯುತ್ತಿದೆ ಈ ಬಾರಿಯ ಬ್ರಿಕ್ಸ್ ಶೃಂಗಸಭೆ ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ 18 ನೇ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದಾರೆ. ರಷ್ಯಾ, ಚೀನಾ ಸೇರಿದಂತೆ ಹಲವು ಜಾಗತಿಕ ನಾಯಕರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿರುವ ಪ್ರಧಾನಿ ಮೋದಿ ಅವರು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ಮಾತನಾಡಿದ್ದಾರೆ. ಬದಲಾಗುತ್ತಿರುವ ಜಗತ್ತಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಕೇವಲ ಪ್ರೇಕ್ಷಕರಾಗಿ ಉಳಿಯುವುದಲ್ಲ,

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಬ್ರಿಕ್ಸ್ ‌ಶೃಂಗಸಭೆ ಆರಂಭ Read More »

ಲೈಸೆನ್ಸ್ ಇಲ್ಲದೆ ಬಂದೂಕು ಹೊಂದಿದ್ದೀರಾ?: ಸಿ ಎಂ ಡಿಕೆ ‌ಶಿವಕುಮಾರ್ ಕೊಟ್ಟ ಎಚ್ಚರಿಕೆ ಏನು ಗೊತ್ತಾ?

ಬೆಂಗಳೂರು: ಲೈಸೆನ್ಸ್ ಹೊಂದಿರದ ಅಕ್ರಮ ಬಂದೂಕುಗಳನ್ನು ಹೊಂದಿದವರು ನವೆಂಬರ್ 1 ರೊಳಗಾಗಿ ಸರ್ಕಾರಕ್ಕೆ ಸ್ವಯಂಪ್ರೇರಣೆಯಿಂದ ತಂದೊಪ್ಪಿಸಬೇಕು. ಇಲ್ಲವಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೀಡಿದ್ದಾರೆ. ಅಕ್ರಮವಾಗಿ ಬಂದೂಕು ಇರಿಸಿಕೊಂಡವರಿಂದಾಗಿ ಹಲವು ಮಂದಿ ಅರಣ್ಯ ಸಿಬ್ಬಂದಿಗಳ ಸಾವಾಗಿದೆ. ಬಂದೂಕು ಅತ್ಯಗತ್ಯ ಎನ್ನುವವರು ಅದನ್ನು ಇಟ್ಟುಕೊಳ್ಳಲು, ಬಳಸಲು ಲೈಸೆನ್ಸ್ ಪಡೆದುಕೊಳ್ಳುವುದು ಕಡ್ಡಾಯ. ರಾಜ್ಯದಲ್ಲಿ ಅನೇಕ ಜನರು ಅಕ್ರಮ ಬಂದೂಕು ಇರಿಸಿಕೊಂಡಿರುವ ಮಾಹಿತಿ ಸರ್ಕಾರದ ಬಳಿ ಇದೆ ಎಂದು ಅವರು ತಿಳಿಸಿದ್ದಾರೆ. ಇದೇ

ಲೈಸೆನ್ಸ್ ಇಲ್ಲದೆ ಬಂದೂಕು ಹೊಂದಿದ್ದೀರಾ?: ಸಿ ಎಂ ಡಿಕೆ ‌ಶಿವಕುಮಾರ್ ಕೊಟ್ಟ ಎಚ್ಚರಿಕೆ ಏನು ಗೊತ್ತಾ? Read More »

ಓಲಾ ಓಲುಂಡಾ.? – ಸರ್ವಿಸ್‌ಗೆಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ನೀಡಿದಲ್ಲಿ ವಾಪಸ್‌ ಇಲ್ಲ

ಗ್ರಾಹಕರಿಗೆ ಸೇವೆ ನೀಡದೆ ನುಣುಚಿಕೊಳ್ಳುತ್ತಿರುವ ಓಲಾ ಕಂಪೆನಿ ವಿರುದ್ಧ ಜನಾಕ್ರೋಶ ಉಡುಪಿ : ಓಲಾ ಇವಿ ಸ್ಕೂಟರ್‌ ಸರ್ವಿಸ್‌ಗೆಂದು ನೀಡಿದಲ್ಲಿ ಕಂಪೆನಿಯವರು ಸರ್ವಿಸ್‌ ಮಾಡಿ ಸ್ಕೂಟರ್‌ ವಾಪಸ್‌ ಕೊಡದೇ ಸತಾಯಿಸುತ್ತಿರುವ ಕುರಿತು ಓಲಾ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಗಿಮಿಕ್‌ ಮಾಡಿ ಜನರನ್ನು ಮರುಳು ಮಾಡಿ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟ ಮಾಡಿರುವ ಓಲಾ ಕಂಪನಿಯು ಇದೀಗ ಗ್ರಾಹಕರಿಗೆ ಸೇವೆ ನೀಡದೇ ಕೈಕೊಡುತ್ತಿರುವ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.ನಗರದ ಕಡಿಯಾಳಿ ರಸ್ತೆ ಬದಿಯಲ್ಲಿದ್ದ ಓಲಾ ಸರ್ವಿಸ್‌ ಸೆಂಟರ್‌ಗೆ ಸರ್ವಿಸ್‌ಗಾಗಿ

ಓಲಾ ಓಲುಂಡಾ.? – ಸರ್ವಿಸ್‌ಗೆಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ನೀಡಿದಲ್ಲಿ ವಾಪಸ್‌ ಇಲ್ಲ Read More »

ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ ಸಂಬಂಧಿಸಿ ‘ಉದ್ಯೋಗ ನಿಧಿ’ ಜಾರಿಗೆ ಸರ್ಕಾರ ನಿರ್ಧಾರ

ಯುವಜನರು ಉದ್ಯೋಗವನ್ನರಸಿ ವಲಸೆ ಹೋಗುವುದನ್ನು ತಪ್ಪಿಸಲು ನೆರವಾಗಲಿದೆ ಈ ಯೋಜನೆ ಬೆಂಗಳೂರು: ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ಸ್ಥಳೀಯ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನೂತನ ‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಬಾಗಲಕೋಟೆ ಸೇರಿದಂತೆ ರಾಜ್ಯದ 11 ಕಡಿಮೆ ಅಭಿವೃದ್ಧಿ ಹೊಂದಿರುವ ಜಿಲ್ಲೆಗಳಲ್ಲಿ

ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ ಸಂಬಂಧಿಸಿ ‘ಉದ್ಯೋಗ ನಿಧಿ’ ಜಾರಿಗೆ ಸರ್ಕಾರ ನಿರ್ಧಾರ Read More »

ಬಸ್ ಡಿಕ್ಕಿ ಹೊಡೆದು ಸ್ಕೂಟಿ ‌ಸವಾರನಿಗೆ ಗಾಯ: ದೂರು ದಾಖಲು

ಕಾರ್ಕಳ: ಸ್ಕೂಟಿ ಮತ್ತು ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ನಡೆದಿದೆ. ಗಾಯಾಳುವನ್ನು ಲಿಯೋ ಡಿಸೋಜ (54) ಎಂದು ಗುರುತಿಸಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ಕೂಟಿ ‌ಸವಾರ ಚಿಕ್ಕಮಗಳೂರಿನ ಕಿರಣ್ ಡಿಕುನ್ಹಾ ಅವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಾವು ಸ್ಕೂಟಿಯಲ್ಲಿ ಬಜಗೋಳಿ ಮಾರ್ಗವಾಗಿ ಕೊಪ್ಪ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಜಗೋಳಿ ಮಾರ್ಗವಾಗಿ ಶೃಂಗೇರಿಗೆ ತೆರಳುತ್ತಿದ್ದ ಬಸ್ಸಿನ ಚಾಲಕ ಮಹಮ್ಮದ್ ಅಜ್ವೀರ್ ಅಜಾಗರೂಕತೆಯಿಂದ

ಬಸ್ ಡಿಕ್ಕಿ ಹೊಡೆದು ಸ್ಕೂಟಿ ‌ಸವಾರನಿಗೆ ಗಾಯ: ದೂರು ದಾಖಲು Read More »

error: Content is protected !!
Scroll to Top