Author name: Bhuvana

ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಕಾರ್ಕಳ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು ಅವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಇಂದಿರಾನಗರ ಸಾಣೂರಿನಲ್ಲಿ ನಡೆದಿದೆ. ಬಾವಿಗೆ ಬಿದ್ದ ವ್ಯಕ್ತಿಯನ್ನು ಗುರು ಪ್ರಸಾದ್ ಕಾಮತ್ (39) ಎಂದು ಗುರುತಿಸಲಾಗಿದೆ. ಸುಮಾರು 30 ಅಡಿ ಇರುವ ಬಾವಿಯಲ್ಲಿ 20 ಅಡಿಗಳಷ್ಟು ನೀರಿದ್ದು ಅದಕ್ಕೆ ಆಕಸ್ಮಿಕವಾಗಿ ಬಿದ್ದಿದ್ದಾಗಿ ತಿಳಿದು ಬಂದಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಆ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬಾವಿಯಲ್ಲಿ ರಕ್ಷಣೆಗಾಗಿ ಹಗ್ಗ ಹಿಡಿದುಕೊಂಡು ಕೂಗುತ್ತಿದ್ದ ಗುರುಪ್ರಸಾದ್

ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ Read More »

ಡಾ. ರವೀಂದ್ರ ಶೆಟ್ಟಿ ಅವರ ತೇಜೋವಧೆ ಮಾಡುವ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ವಿಧಿಸಿದ ಕೋರ್ಟ್

ಬಜಗೋಳಿ: ಇಲ್ಲಿನ ಶ್ರೀ ಶ್ರೀನಿವಾಸ ಸ್ಟೋನ್ ಕ್ರಷರ್‌ನ ಮಾಲೀಕ ಹಾಗೂ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿಯವರ ವಿರುದ್ಧ ತೇಜೋವಧೆ ಮಾಡುವ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ರವೀಂದ್ರ ಶೆಟ್ಟಿ ಅವರ ವಿರುದ್ಧ ವಿಜಯೇಂದ್ರ ಎನ್ನುವವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಮೆಟಾ ಪ್ಲಾಟ್‌ಫಾರ್ಮ್, ಯೂಟ್ಯೂಬ್ ಹಾಗೂ ಗೂಗಲ್‌ಗಳಲ್ಲಿ ಅವಹೇಳನಕಾರಿ ವಿಡಿಯೋಗಳನ್ನು ಮಾಡಿ ಪ್ರಸಾರ ಮಾಡಿದ್ದರು. ಅವರ ವಿರುದ್ಧ ರವೀಂದ್ರ ಶೆಟ್ಟಿಯವರು ಪ್ರಧಾನ ಸಿವಿಲ್ ಜಡ್ಜ್ ಮತ್ತು

ಡಾ. ರವೀಂದ್ರ ಶೆಟ್ಟಿ ಅವರ ತೇಜೋವಧೆ ಮಾಡುವ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ವಿಧಿಸಿದ ಕೋರ್ಟ್ Read More »

ಸೆ. 14:ಯರ್ಲಪಾಡಿ ಗೋವಿಂದೂರಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಾರ್ಕಳ: ಯರ್ಲಪಾಡಿ ಗೋವಿಂದೂರಿನ 2 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ. 14 ರಂದು ಯುವಕ ಮಂಡಲ ವಠಾರ, ಗೋವಿಂದೂರು ಇಲ್ಲಿ ನಡೆಯಲಿದೆ. ಆ ಪ್ರಯುಕ್ತ ಗಣ ಹೋಮ, ಗಣೇಶನ ವಿಗ್ರಹ ಪ್ರತಿಷ್ಟೆ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಭಜನಾ ಕಾರ್ಯಕ್ರಮ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಯಂಕಾಲ ಗಂಟೆ 5.30 ಕ್ಕೆ ವಿಸರ್ಜನಾ ಪೂಜೆ, 7 ಗಂಟೆಗೆ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಭಗವದ್ಭಕ್ತರು

ಸೆ. 14:ಯರ್ಲಪಾಡಿ ಗೋವಿಂದೂರಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ Read More »

ರಾಜೇಶ್ವರಿ ನ್ಯಾಷನಲ್ ಸ್ಕೂಲ್, ಪಿಯು ಕಾಲೇಜಿನಲ್ಲಿ ಗಂಗಾರತಿ ಕಾರ್ಯಕ್ರಮ

ಪ್ರಕೃತಿ ಆರಾಧನೆಯೊಂದಿಗೆ ಸಂಸ್ಕೃತಿ ಸಂವರ್ಧನೆಗೆ ಕರೆ ಸಾಣೂರು: ಪ್ರಕೃತಿ ಆರಾಧನೆ, ಜಲ ಸಂರಕ್ಷಣೆ ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ವತಿಯಿಂದ ಗಂಗಾರತಿ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಸಲಾಯಿತು. ರಾಜೇಶ್ವರಿ ನ್ಯಾಷನಲ್ ಸ್ಕೂಲಿನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವನ್ನು ವಿವರಿಸಿದರು. ವಿದ್ಯಾಸಂಸ್ಥೆಯು ಪ್ರಕೃತಿಯ ಮಡಿಲಿನಲ್ಲಿ ಇರಬೇಕು. ಉತ್ಕೃಷ್ಟ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ,

ರಾಜೇಶ್ವರಿ ನ್ಯಾಷನಲ್ ಸ್ಕೂಲ್, ಪಿಯು ಕಾಲೇಜಿನಲ್ಲಿ ಗಂಗಾರತಿ ಕಾರ್ಯಕ್ರಮ Read More »

ಸೆ. 14 – 18: ಜೋಡುರಸ್ತೆಯಲ್ಲಿ 43 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ, ಕುಕ್ಕಂದೂರು ಅಲ್ಲಿನ 43 ನೇ ವರ್ಷದ ಗಣೇಶೋತ್ಸವವು ಸೆ. 14 ರಿಂದ ಸೆ. 18 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಸೆ. 14 ರಂದು ಬೆಳಗ್ಗೆ ಪ್ರತಿಷ್ಠಾಪನಾ ಪೂಜೆ, ಗಣಪತಿ ವಿಗ್ರಹದ ಪೀಠಕ್ಕೆ ಬೆಳ್ಳಿಯ ಹೊದಿಕೆ ಸಮರ್ಪಣೆ, ರಾತ್ರಿ ಗಂಟೆ 8 ಕ್ಕೆ ಮಹಾ ಪೂಜೆ, ರಾತ್ರಿ ವಿಶೇಷ ಪೂಜೆ ನಡೆಯಲಿದೆ. ಸೆ. 15 ರಂದು ಗಣ ಹೋಮ, ಆಶ್ಲೇಷಾ ಬಲಿ, ಮಧ್ಯಾಹ್ನ

ಸೆ. 14 – 18: ಜೋಡುರಸ್ತೆಯಲ್ಲಿ 43 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ Read More »

ಗಣೇಶೋತ್ಸವದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 778 ಪೊಲೀಸರ ನಿಯೋಜನೆ

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಈ ಕ್ರಮ ಮಂಗಳೂರು: ಗಣೇಶೋತ್ಸವದ ಹಿನ್ನೆಲೆ ಯಾವುದೇ ಗಲಭೆ – ಗೊಂದಲಗಳು, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ‌ವ್ಯಾಪ್ತಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಠಾಣಾ ವ್ಯಾಪ್ತಿಗಳ ವಿವಿಧ ಕಡೆಗಳಲ್ಲಿ ಗಣೇಶ ಚತುರ್ಥಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ಘಟಕದಿಂದ 778

ಗಣೇಶೋತ್ಸವದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 778 ಪೊಲೀಸರ ನಿಯೋಜನೆ Read More »

ಕಾಂಗ್ರೆಸ್ ನಾಯಕರ ಮಧ್ಯೆ ಯಾವುದೇ ಒಡಕಿಲ್ಲ: ಯು.ಟಿ. ಖಾದರ್

ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಬೆಂಗಳೂರು: ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಒಡಕಿಲ್ಲ ಎಂದು ಸಚಿವ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ. ಸಚಿವ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯ ಹಿಂದೆ ಸ್ವಪಕ್ಷೀಯರ ಕೈವಾಡ ಇದೆ ಎನ್ನುವ ಆರೋಪಕ್ಕೆ ಅವರು ಈ ಉತ್ತರ ನೀಡಿರುವುದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಮ್ಮತ ಇಲ್ಲ ಎಂದು ಯಾರು ಎಷ್ಟೇ ಪ್ರಯತ್ನ ಮಾಡಿದರೂ ಸಾಬೀತು ಮಾಡಲು ಸಾಧ್ಯವಿಲ್ಲ.

ಕಾಂಗ್ರೆಸ್ ನಾಯಕರ ಮಧ್ಯೆ ಯಾವುದೇ ಒಡಕಿಲ್ಲ: ಯು.ಟಿ. ಖಾದರ್ Read More »

ಮಹಿಳೆಗೆ ಜಾತಿ ನಿಂದನೆ: ಆರೋಪಿ ಹನೀಫ್‌ಗೆ ನ್ಯಾಯಾಂಗ ಬಂಧನ

ವೇಣೂರು: ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯೊಬ್ಬನನ್ನು ‌ವೇಣೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಹನೀಫ್ ಎಂದು ತಿಳಿದು ಬಂದಿದೆ. ಮಹಿಳೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿ ಹನೀಫ್ ಅಕ್ರಮ ಪ್ರವೇಶ ಮಾಡಿ ಮಹಿಳೆಯ ಜೊತೆ ಅನುಚಿತವಾಗಿ ‌ವರ್ತಿಸಿದ್ದಾನೆ. ಜೊತೆಗೆ ಜಮೀನಿನ ಬೇಲಿ ಮತ್ತು ಕೃಷಿಗೆ ಹಾನಿ ಮಾಡಿ ಸುಮಾರು ಒಂದೂವರೆ ಲಕ್ಷ ರೂ. ಗಳಷ್ಟು ನಷ್ಟ ಉಂಟು ಮಾಡಿದ್ದಾನೆ. ಹಾಗೆಯೇ ಜಾತಿನಿಂದನೆ ಮಾಡಿ ಅವಾಚ್ಯವಾಗಿ ನಿಂದನೆ

ಮಹಿಳೆಗೆ ಜಾತಿ ನಿಂದನೆ: ಆರೋಪಿ ಹನೀಫ್‌ಗೆ ನ್ಯಾಯಾಂಗ ಬಂಧನ Read More »

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಸಮಾಲೋಚನಾ ಸಭೆ

ಕಾರ್ಕಳ:, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಡೆವಲಪ್‌ಮೆಂಟ್ ಟ್ರಸ್ಟ್ (ರಿ.) ಇದರ ವತಿಯಿಂದ ನಿರ್ಮಿಸಲ್ಪಡುವ “ವಿಶ್ವಕರ್ಮ ಸಮುದಾಯ ಭವನ” ನಿರ್ಮಾಣ ಕಾರ್ಯದ ಪೂರ್ವಭಾವಿಯಾಗಿ ಸಾಮೂಹಿಕ ಶ್ರೀ ನವಚಂಡಿಕಾ ಹೋಮವನ್ನು ನೆರವೇರಿಸುವುದಾಗಿ ನಿರ್ಣಯಿಸಲಾಗಿದ್ದು ಈ ಸಂಬಂಧ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಸಲಹಾ ಸಮಿತಿ, ಪೇಟೆಯ ಹತ್ತು ಸಮಸ್ಥರು, ಶ್ರೀ ಕ್ಷೇತ್ರದ ಕೂಡುವಳಿಕೆ ಮೊಕ್ತೇಸರುಗಳು, ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ, ವಿ.ಬಿ.ಎಸ್. ಸಭಾ ಪೆರ್ವಾಜೆ, ಚಿನ್ನದ

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಸಮಾಲೋಚನಾ ಸಭೆ Read More »

ಶಾಸಕ ಸುನೀಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಆರೋಪಿ ಪ್ರಸಾದ್ ಶೆಟ್ಟಿ ಅಂದರ್

ಶಾಸಕರ ತಲೆ ಕತ್ತರಿಸುವ ಚಿತ್ರ ಪೋಸ್ಟ್ ಮಾಡಿ ಸಾಮಾಜಿಕ ಶಾಂತಿ ಕದಡಲು ಯತ್ನಿಸಿದ ಆರೋಪಿ ಕಾರ್ಕಳ: ಶಾಸಕ ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವಂತೆ ಚಿತ್ರವನ್ನು ಬಳಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಹಾಗೂ ಹಲ್ಲೆಗೆ ಪ್ರಚೋದಿಸುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಕಳ ತಾಲೂಕು ನಿವಾಸಿ ವಿಘ್ನೇಶ್ ಪ್ರಸಾದ್ ರಾವ್ ಅವರು ಫೇಸ್ಬುಕ್ ನೋಡುತ್ತಿದ್ದ ಸಂದರ್ಭದಲ್ಲಿ ‘Prasad

ಶಾಸಕ ಸುನೀಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಆರೋಪಿ ಪ್ರಸಾದ್ ಶೆಟ್ಟಿ ಅಂದರ್ Read More »

error: Content is protected !!
Scroll to Top