Author name: Bhuvana

ಸೆ:18 ಸಿಎಂ ಹೆಬ್ರಿ ಭೇಟಿ ಹಿನ್ನಲೆ ಮುದ್ರಾಡಿ ಮಂಜುನಾಥ ಪೂಜಾರಿ ಅವರಿಂದ ಪತ್ರಿಕಾಗೋಷ್ಠಿ

ಕಸ್ತೂರಿ ರಂಗನ್ ವರದಿಯ ಆತಂಕ, ಗೊಂದಲಗಳನ್ನು ಒಗ್ಗಟ್ಟಾಗಿ ಸಿಎಂ ಮುಂದಿರಿಸಲು ಜನರಿಗೆ ಕರೆ ಕಾರ್ಕಳ: ಸಿಎಂ ಡಿ.ಕೆ. ಶಿವಕುಮಾರ್ ಅವರು ಸೆ. 18 ರಂದು ಹೆಬ್ರಿಗೆ ಆಗಮಿಸಲಿದ್ದು, ಈ ಹಿನ್ನೆಲೆ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ (ನಿ.) ಯ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಹೆಬ್ರಿಗೆ ಆಗಮಿಸಿ ಕಸ್ತೂರಿ ರಂಗನ್ ‌ವರದಿಗೆ ಸಂಬಂಧಿಸಿದ ಹಾಗೆ ಈ ಭಾಗದ ಜನರಲ್ಲಿರುವ ಸಾಕಷ್ಟು ಗೊಂದಲ, ಆತಂಕಗಳನ್ನು ಆಲಿಸಲಿದ್ದಾರೆ. ಆ ಬಳಿಕ ಈ ವಿಷಯಕ್ಕೆ

ಸೆ:18 ಸಿಎಂ ಹೆಬ್ರಿ ಭೇಟಿ ಹಿನ್ನಲೆ ಮುದ್ರಾಡಿ ಮಂಜುನಾಥ ಪೂಜಾರಿ ಅವರಿಂದ ಪತ್ರಿಕಾಗೋಷ್ಠಿ Read More »

ಐಫೋನ್‌ಗಿಂತ ಜೀವ ದೊಡ್ಡದು : ಹುಷಾರ್

ಐಫೋನ್‌ ಖರೀದಿ ಮಾಡಬೇಕು ಎನ್ನುವ ಆಸೆ ಯಾರಿಗೆ ತಾನೇ ಇಲ್ಲ ಹೇಳಿ. ಆ ಫೋನಿನ ‌ಮುಂದೆ ಸಾಧಾರಣ ಫೋನು ನಮ್ಮ ಕಣ್ಣಿಗೆ ಸಂತೋಷ ನೀಡುವುದು ಅಷ್ಟರಲ್ಲೇ ಇದೆ. ಸಾಲ ಮಾಡಿಯಾದರೂ ಐಫೋನ್ ತೆಗೆದುಕೊಳ್ಳಬೇಕು ಎನ್ನುವ ಮನಸ್ಥಿತಿಯ ಹಲವರು ನಮ್ಮ ನಡುವೆ ಇದ್ದಾರೆ. ಐಫೋನ್ ಖರೀದಿ ಮಾಡಲು ಹಾಸಿಗೆಗಿಂತ ಹೆಚ್ಚು ಕಾಲು ಚಾಚಿದಾಗ ಎದುರಾಗುವ ಅಪಾಯಗಳಿಗೆ ಮುಂದೆ ನಾವೇ ದೊಡ್ಡ ಬೆಲೆ ತೆರಬೇಕಾಗುತ್ತದೆ ಎನ್ನುವುದು ಸತ್ಯ ಮತ್ತು ಅತ್ಯಂತ ನೋವಿನ ಸಂಗತಿ. ಇಂದಿನ ದಿನಗಳಲ್ಲಿ ದುಬಾರಿ ಐಫೋನ್ ಖರೀದಿಸುವ

ಐಫೋನ್‌ಗಿಂತ ಜೀವ ದೊಡ್ಡದು : ಹುಷಾರ್ Read More »

ಪ್ರೌಢಶಾಲಾ ವಿಭಾಗದ ವಾಲಿಬಾಲ್‌: ಕ್ರೈಸ್ಟ್‌ಕಿಂಗ್ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಾರ್ಕಳ : ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಕಳ ಅಮೃತ ಭಾರತಿ ವಿದ್ಯಾಸಂಸ್ಥೆ ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಕಾರ್ಕಳ ತಾಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಹತ್ತನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ, ಶೈನಿ ಡಿಸೋಜಾ, ಒಂಬತ್ತನೇ ತರಗತಿಯ ಪಾವನಿ, ಎಂಟನೇ ತರಗತಿಯ ಐಶ್ವರ್ಯ, ಅನುರಾಧ

ಪ್ರೌಢಶಾಲಾ ವಿಭಾಗದ ವಾಲಿಬಾಲ್‌: ಕ್ರೈಸ್ಟ್‌ಕಿಂಗ್ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ Read More »

ಟೆನ್ಶನ್ ಬೇಡ, 2000 ರೂ. ಮೀರಿದ ಯುಪಿಐ ವಹಿವಾಟಿಗೂ ‌ಶುಲ್ಕ ಇಲ್ಲ: ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ಭಾರತದಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ಬಳಕೆ ಮಾಡುವ ಡಿಜಿಟಲ್ ಪಾವತಿ ಯುಪಿಐ ವ್ಯವಸ್ಥೆ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ‌ನೀಡಿದೆ. ಯುಪಿಐ ಪೇಮೆಂಟ್ ವಹಿವಾಟು ರೂ. 2000 ವರೆಗೆ ನಡೆಯುವ ವಹಿವಾಟಿಗೆ ಯಾವುದೇ ಬ್ಯಾಂಕ್ ಅಥವಾ ಸಂಸ್ಥೆಗಳು ಶುಲ್ಕ ವಿಧಿಸುವ ಹಾಗಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ರುಪೇ, ಡೆಬಿಟ್ ಕಾರ್ಡ್ ವಹಿವಾಟುಗಳಿಗೂ ಇದೇ ನಿಯಮ ಅನ್ವಯಿಸುತ್ತದೆ ಎಂದು ಅಧಿಸೂಚನೆಯಲ್ಲಿ ಸರ್ಕಾರ ತಿಳಿಸಿದೆ. ಇನ್ನು 2000 ರೂ. ಮೀರಿದ ಯುಪಿಐ

ಟೆನ್ಶನ್ ಬೇಡ, 2000 ರೂ. ಮೀರಿದ ಯುಪಿಐ ವಹಿವಾಟಿಗೂ ‌ಶುಲ್ಕ ಇಲ್ಲ: ಕೇಂದ್ರ ಸರ್ಕಾರದಿಂದ ಸ್ಪಷ್ಟನೆ Read More »

‘ವಂದೇ ಮಾತರಂ’ನ ಎರಡು ಚರಣ ಹಾಡಿದರೆ ಸಾಕು ಎಂದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ PIL

ಬೆಂಗಳೂರು: ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡಿನ ಎರಡೇ ಚರಣಗಳನ್ನು ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈ ಆದೇಶ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಸರ್ಕಾರ ಸೆ. 8 ರಂದು ಈ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನೆ ಮಾಡಿ ವಕೀಲ ಗಿರೀಶ್ ಭಾರದ್ವಾಜ್ ಅವರ ಪರ ವಕೀಲ ಅಂಗದ್ ಕಾಮತ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ‌ಸಲ್ಲಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶ ಕೇಂದ್ರ ಸರ್ಕಾರದ

‘ವಂದೇ ಮಾತರಂ’ನ ಎರಡು ಚರಣ ಹಾಡಿದರೆ ಸಾಕು ಎಂದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ PIL Read More »

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಳಿ ವೀರರು ಕೋಟಿ ಚೆನ್ನಯರ ಹೆಸರಿಡಲು ಮನವಿ‌‌ ಸಲ್ಲಿಸಿದ ಮಿಥುನ್ ರೈ

ದ.ಕ. ದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಸಲ್ಲಿಸಲು ‌ಸಚಿವ ಯು. ಟಿ. ಖಾದರ್‌ಗೆ ಪತ್ರ ಮಂಗಳೂರು: ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಳಿ ವೀರರು ‌ಕೋಟಿ ಚೆನ್ನಯರ ಹೆಸರನ್ನಿಡುವಂತೆ ಮತ್ತು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಅವರು ಸಚಿವ ಖಾದರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಳಿ ವೀರರು ಕೋಟಿ ಚೆನ್ನಯರ ಹೆಸರಿಡಲು ಮನವಿ‌‌ ಸಲ್ಲಿಸಿದ ಮಿಥುನ್ ರೈ Read More »

ಕಾರ್ಕಳ ಭುವನೇಂದ್ರ ಪ್ರೌಢಶಾಲೆಯಲ್ಲಿ ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ, ಮೊಬೈಲ್ ದುಷ್ಪರಿಣಾಮಗಳ ಮಾಹಿತಿ

ಕಾರ್ಕಳ: ಇಲ್ಲಿನ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ ಮತ್ತು ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಜರುಗಿತು. ಸಂಪನ್ಮೂಲ ವ್ಯಕ್ತಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷರ ಕಚೇರಿಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ದೇಶದ ಪ್ರಗತಿಯನ್ನು ಗಮನಿಸುತ್ತಾ ತಮ್ಮ ವಿಶೇಷ ಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳ ಕಡೆ ಗಮನ ಹರಿಸಬೇಕು. ತಮ್ಮ ಬೌದ್ಧಿಕ ಮಾನಸಿಕ ನೈತಿಕ ಸಾಮರ್ಥ್ಯಗಳಿಗೆ ಧಕ್ಕೆ ಉಂಟು ಮಾಡುವ ಮಾದಕ ವ್ಯಸನಗಳಿಗೆ ತುತ್ತಾಗಬಾರದು. ತಮ ಉಜ್ವಲ

ಕಾರ್ಕಳ ಭುವನೇಂದ್ರ ಪ್ರೌಢಶಾಲೆಯಲ್ಲಿ ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ, ಮೊಬೈಲ್ ದುಷ್ಪರಿಣಾಮಗಳ ಮಾಹಿತಿ Read More »

ಡಿಜಿಟಲ್ ವೇದಿಕೆಗಳಲ್ಲಿ ಮಕ್ಕಳ ವಿರುದ್ಧ ಲೈಂಗಿಕ ಶೋಷಣೆಯ ವಿರುದ್ದ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಮಕ್ಕಳ ಸುರಕ್ಷತೆಗೆ ಹಾನಿಯಾಗುವ ಪ್ರಕರಣಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಸಲು ಒಪ್ಪಿಕೊಂಡ ಮೆಟಾ ನವದೆಹಲಿ: ಕೇಂದ್ರ ಸರ್ಕಾರ ಸೋಷಿಯಲ್ ಮಿಡಿಯಾಗಳಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದು, ಮಕ್ಕಳ ವಿರುದ್ಧ ಲೈಂಗಿಕ ಶೋಷಣೆ, ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳಿದ್ದಲ್ಲಿ ತಕ್ಷಣವೇ ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡುವುದಕ್ಕೆ ಮೆಟಾ ಸಂಸ್ಥೆ ಒಪ್ಪಿದೆ. ಮಕ್ಕಳ ಸುರಕ್ಷತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಆದ್ಯತೆಯಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಿಯಾಗುವ ಮಾತೇ ಇಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರದ ಈ

ಡಿಜಿಟಲ್ ವೇದಿಕೆಗಳಲ್ಲಿ ಮಕ್ಕಳ ವಿರುದ್ಧ ಲೈಂಗಿಕ ಶೋಷಣೆಯ ವಿರುದ್ದ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ Read More »

ಕಾರ್ಕಳ ಮಕ್ಕಳ ಪಾರ್ಕ್‌ನಲ್ಲಿ ಕಡವೆಯೊಂದು ಮೃತಪಟ್ಟ ‌ಸ್ಥಿತಿಯಲ್ಲಿ ಪತ್ತೆ

ವಾಯುವಿಹಾರಕ್ಕೆಂದು ಬಂದವರಿಂದ ಅರಣ್ಯ ಇಲಾಖೆಗೆ ಮಾಹಿತಿ ಕಾರ್ಕಳ: ಇಲ್ಲಿನ ತಾಲೂಕು ಕಚೇರಿ ಸಮೀಪ ಇರುವ ಮಕ್ಕಳ ಪಾರ್ಕ್‌ನಲ್ಲಿ ಕಡವೆಯೊಂದರ ಮೃತ ದೇಹ ಪತ್ತೆಯಾಗಿದೆ. ಮುಂಜಾನೆ ವೇಳೆ ಪಾರ್ಕ್‌ಗೆ ‌ವಾಯು ವಿಹಾರಕ್ಕೆ ಬಂದವರು ಸತ್ತು ಬಿದ್ದ ಕಡವೆಯನ್ನು ಗಮನಿಸಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಡವೆಯು ಕುಕ್ಕುಂದೂರು ಅರಣ್ಯ ಪ್ರದೇಶ ಭಾಗದಿಂದ ಇಲ್ಲಿಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದು, ಆ ವೇಳೆ ಮೃತ ಕಡವೆಯ ತಲೆ ಮತ್ತು ಕೊಂಬಿನ

ಕಾರ್ಕಳ ಮಕ್ಕಳ ಪಾರ್ಕ್‌ನಲ್ಲಿ ಕಡವೆಯೊಂದು ಮೃತಪಟ್ಟ ‌ಸ್ಥಿತಿಯಲ್ಲಿ ಪತ್ತೆ Read More »

ಲಾಡ್ಜ್‌ನ ಕೊಠಡಿಯಲ್ಲಿ ವ್ಯಕ್ತಿ ಶವವಾಗಿ ಪತ್ತೆ

ಕಾರ್ಕಳ: ಉಡುಪಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ವ್ಯಕ್ತಿಯೊಬ್ಬರು ಇಲ್ಲಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿಯ ಲಾಡ್ಜ್‌ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದುರ್ಗಾ ಗ್ರಾಮದ ನಿವಾಸಿ ಶಿವಾನಂದ ಮೃತ ದುರ್ದೈವಿ. ಸೆಪ್ಟೆಂಬರ್ 11ರಂದು ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಶಿವಾನಂದ ಅವರು ಬಳಿಕ ಮನೆಗೆ ಮರಳಿರಲಿಲ್ಲ. ಅಕ್ಕಪಕ್ಕದ ಮನೆಯವರಿಗೂ ಕರೆ ಮಾಡಿ ಮಾತನಾಡಿದ್ದರು. ಆದರೆ, ಸೆಪ್ಟೆಂಬರ್ 14ರ ರಾತ್ರಿ 8 ಗಂಟೆ ಸುಮಾರಿಗೆ ಪುಲ್ಕೇರಿ ಬೈಪಾಸ್‌ ಬಳಿಯ ಹೋಟೆಲ್‌ನ

ಲಾಡ್ಜ್‌ನ ಕೊಠಡಿಯಲ್ಲಿ ವ್ಯಕ್ತಿ ಶವವಾಗಿ ಪತ್ತೆ Read More »

error: Content is protected !!
Scroll to Top