Author name: Bhuvana

ಹಣ ಪಣಕ್ಕಿಟ್ಟು ನಡೆಸಲಾಗುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ

ಶಿರ್ವ: ಸಾರ್ವಜನಿಕ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಕೋಳಿ ಅಂಕ ಜೂಜಿನಲ್ಲಿ ‌ತೊಡಗಿಕೊಂಡಿದ್ದ ಹಲವರನ್ನು ಶಿರ್ವ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರ್ವ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಸುದೇಶ್ ಶೆಟ್ಟಿ ಅವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ‌ನಡೆಸುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಸೂಡಾದ ನರೇಂದ್ರ ಫ್ರಭು(61), ಬೆಳ್ಮಣ್ಣಿನ ಪ್ರಕಾಶ್ ಕಾಮತ್(45), ಇನ್ನಾ ಗ್ರಾಮದ ರಮೇಶ(49), ಇನ್ನಾದ ಜಯ ಪೂಜಾರಿ(64), ಪಾಂಗಳದ ರಾಘವೇಂದ್ರ(48), ಶಿರ್ವದ ಕಾಪುವಿನ ಜೆರಾಲ್ಡ್

ಹಣ ಪಣಕ್ಕಿಟ್ಟು ನಡೆಸಲಾಗುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ Read More »

ಕಾರು – ಬಸ್ ನಡುವೆ ಅಪಘಾತ: ಹಲವರಿಗೆ ಗಾಯ

ಕಾರ್ಕಳ: ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಕಾರ್ಕಳದ ಸಾಣೂರಿನ ರಾಮ ಮಂದಿರದ ಸಮೀಪ ಸಂಭವಿಸಿದೆ. ಈ ಸಂಬಂಧ ಕಿರಣ್ ಜೋನ್ಸನ್ ಪಿರೇರಾ ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಪಿರ್ಯಾದಿದಾರರಾದ ಕಿರಣ್‌ ಜೋನ್ಸನ್‌ ಪಿರೇರಾ (45),ಮಂಗಳೂರು ಅವರು ಮಂಗಳೂರಿನಿಂದ ಮೂಡಬಿದ್ರಿ ಮಾರ್ಗವಾಗಿ ಕಾರ್ಕಳಕ್ಕೆ ತನ್ನ ಕಾರಿನಲ್ಲಿ ಹೊರಟು ಕಾರ್ಕಳ ತಾಲೂಕು ಸಾಣೂರು ಗ್ರಾಮದ ರಾಮ ಮಂದಿರದ ಎದುರುಗಡೆ ತಲುಪಿದಾಗ ಅವರ ಹಿಂದುಗಡೆಯಿಂದ ಬರುತ್ತಿದ್ದ ಇನ್ನೋವಾ ಕಾರನ್ನು ಅದರ

ಕಾರು – ಬಸ್ ನಡುವೆ ಅಪಘಾತ: ಹಲವರಿಗೆ ಗಾಯ Read More »

ಕಾರುಗಳ ನಡುವೆ ಅಪಘಾತ: ಇಬ್ಬರಿಗೆ ಗಾಯ, ದೂರು ದಾಖಲು

ಕಾರ್ಕಳ: ಕಾರುಗಳೆರಡರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಕಲ್ಯಾ‌ದ ಬೋರುಗುಡ್ಡೆಯ ಅಶೋಕನಗರದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಗಾಯಾಳುಗಳನ್ನು ಕಲ್ಯಾದ ಪ್ರಶಾಂತ್ ಮತ್ತು ಅವರ ಪತ್ನಿ ರೇಖಾ ಎಂದು ಗುರುತಿಸಲಾಗಿದೆ. ರೇಖಾ ಮತ್ತು ಪ್ರಶಾಂತ್ ಅವರು ಕೆಲಸಕ್ಕೆಂದು ಕಲ್ಯಾದಿಂದ ಕಾರ್ಕಳದತ್ತ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಕಳ‌ ಕಡೆಯಿಂದ ಸಂದೀಪ್ ಡಿಸೋಜಾ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ರೇಖಾ ಅವರಿದ್ದ ‌ಕಾರಿಗೆ ಗುದ್ದಿದೆ. ಪರಿಣಾಮ ಪ್ರಶಾಂತ್ ಅವರ ತಲೆ ಮತ್ತು ಬಲಗಾಲಿಗೆ ಗಾಯಗಳಾಗಿವೆ.

ಕಾರುಗಳ ನಡುವೆ ಅಪಘಾತ: ಇಬ್ಬರಿಗೆ ಗಾಯ, ದೂರು ದಾಖಲು Read More »

ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಧರ್ಮಸ್ಥಳದ‌ ಸೌಜನ್ಯ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಮರು ತನಿಖೆಗೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಇದಕ್ಕಾಗಿ ಮೂರು ತಿಂಗಳುಗಳ ಕಾಲಾವಕಾಶ ನೀಡಿದೆ. ಸಿಬಿಐ ಈ ಪ್ರಕರಣದ ತನಿಖೆಯನ್ನು ‌ನಡೆಸಿ, ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆ ಬಳಿಕ ಮೃತ ಸೌಜನ್ಯಳ ತಾಯಿ ಕುಸುಮಾವತಿ ಅವರು ಪ್ರಕರಣದ ಮರುತನಿಖೆ ‌ನಡೆಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅವರ ಮನವಿ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿತ್ತು. ಅದಾದ ಬಳಿಕ ಕುಸುಮಾವತಿ ‌ಈ ಪ್ರಕರಣದ ಮರುತನಿಖೆಯ ಮನವಿಯನ್ನು ಸುಪ್ರೀಂ

ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ Read More »

ಸಾಣೂರಿನಲ್ಲಿ ಕನ್ನಡ ಸಾಹಿತ್ಯ ರಚನಾ ಕಮ್ಮಟ, ವಿವಿಧ ಸ್ಪರ್ಧೆಗಳ ಆಯೋಜನೆ

ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಾಣೂರು ಇವರ ಸಹಯೋಗದಲ್ಲಿ 22 ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ರಚನಾ ಕಮ್ಮಟ ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ನಮ್ಮಲ್ಲಿ ಹೆಚ್ಚು ಹೆಚ್ಚು ಸಾಹಿತಿಗಳು ನಿರ್ಮಾಣವಾಗಬೇಕು, ಪುಸ್ತಕಗಳ

ಸಾಣೂರಿನಲ್ಲಿ ಕನ್ನಡ ಸಾಹಿತ್ಯ ರಚನಾ ಕಮ್ಮಟ, ವಿವಿಧ ಸ್ಪರ್ಧೆಗಳ ಆಯೋಜನೆ Read More »

ಕಲೆ ಮತ್ತು ವಿಜ್ಞಾನ ಒಂದೇ ನಾಣ್ಯದ ಮುಖಗಳು: ದೀಪಾ ಫಡ್ಕೆ

ಕಾರ್ಕಳ: ಕಲೆ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಮುಖವಾಗಿದ್ದು, ಇವುಗಳ ಮಧ್ಯೆ ಹೆಚ್ಚು ವ್ಯತ್ಯಾಸ ಇಲ್ಲ. ಎರಡೂ ಶೋಧನೆಯ ಮಾರ್ಗಗಳಾಗಿದೆ ಎಂದು ಹಿರಿಯ ಲೇಖಕಿ ದೀಪಾ ಫಡ್ಕೆ ತಿಳಿಸಿದರು. ಕಾರ್ಕಳದ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ವಿದುಷಿ ವರ್ಷಾ ಕಾಕತ್ಕರ್ ಅವರ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಲೆ ಮತ್ತು ವಿಜ್ಞಾನ ಎರಡೂ ಮನುಷ್ಯ ನನ್ನು ಹೆಚ್ಚು ಯೋಚನೆಗೆ ಒಳಪಡಿಸುತ್ತವೆ. ಸಾವಿರಾರು ವರ್ಷಗಳಿಂದ ಇದು ದೃಢಪಟ್ಟಿದ್ದು, ಅನೇಕ ದೇವಾಲಯಗಳ ವಾಸ್ತುಶಿಲ್ಪಗಳಲ್ಲಿ ಕಲೆ ಮತ್ತು

ಕಲೆ ಮತ್ತು ವಿಜ್ಞಾನ ಒಂದೇ ನಾಣ್ಯದ ಮುಖಗಳು: ದೀಪಾ ಫಡ್ಕೆ Read More »

ಸೌಹಾರ್ದ ಫ್ರೆಂಡ್ಸ್‌‌ ಇದರ ಅಧ್ಯಕ್ಷ, ಪ್ರದಾನ ಕಾರ್ಯದರ್ಶಿಗಳ ಆಯ್ಕೆ

ಕಾರ್ಕಳ: ಸೌಹಾರ್ದ ಫ್ರೆಂಡ್ಸ್ (ರಿ.) ಜಾರ್ಕಳ-ಮುಂಡ್ಲಿ ಇದರ ನೂತನ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಸಂಘದ ಬೆಳವಣಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಇವರ ನೇತೃತ್ವದಲ್ಲಿ ಮತ್ತಷ್ಟು ಚೈತನ್ಯ ಸಿಗಲಿ ಎಂದು ಸಂಘದ ಸದಸ್ಯರು ಶುಭ ಹಾರೈಸಿ, ಅಭಿನಂದನೆ ಸಲ್ಲಿಸಿದ್ದಾರೆ.

ಸೌಹಾರ್ದ ಫ್ರೆಂಡ್ಸ್‌‌ ಇದರ ಅಧ್ಯಕ್ಷ, ಪ್ರದಾನ ಕಾರ್ಯದರ್ಶಿಗಳ ಆಯ್ಕೆ Read More »

ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಕಾರ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್, ತುಳು ಸಂಘಟನೆಗಳಿಂದ ಸಂಭ್ರಮಾಚರಣೆ

ಕಾರ್ಕಳ: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ತುಳು ಸಂಘಟನೆಗಳ ವತಿಯಿಂದ ಕಾರ್ಕಳದ ಅನಂತಶಯನ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವುದು ತುಳುನಾಡಿನ

ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಕಾರ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್, ತುಳು ಸಂಘಟನೆಗಳಿಂದ ಸಂಭ್ರಮಾಚರಣೆ Read More »

ನಾಡಹಬ್ಬ ದಸರಾ ಹಿನ್ನೆಲೆ ಶಾಲೆಗಳಿಗೆ ಇಪ್ಪತ್ತು ದಿನಗಳ ರಜೆ ಘೋಷಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ನಾಡಹಬ್ಬ ದಸರಾದ ಸಂಭ್ರಮ ರಾಜ್ಯದಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆ ದಸರಾ ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆಯು ಸುಧೀರ್ಘ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಅ. 3 ರಿಂದ ಅ. 22 ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅ.23 ರಂದು ಶಾಲೆಗಳು ಮತ್ತೆ ಆರಂಭವಾಗಲಿವೆ. ರಜಾ ಅವಧಿಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕಡ್ಡಾಯವಾಗಿ ಅನ್ವಯಿಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ರಈ ಬಾರಿಯ ದಸರಾವನ್ನು

ನಾಡಹಬ್ಬ ದಸರಾ ಹಿನ್ನೆಲೆ ಶಾಲೆಗಳಿಗೆ ಇಪ್ಪತ್ತು ದಿನಗಳ ರಜೆ ಘೋಷಿಸಿದ ಕರ್ನಾಟಕ ಸರ್ಕಾರ Read More »

ರಾಗತರಂಗ ಗಾಯನ ಸ್ಪರ್ಧೆ: ಶ್ರೀ ಗುರುಕುಲ ಅನುದಾನಿತ ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

ಮಂಗಳೂರು: ರಾಗ ತರಂಗ (ರಿ.) ಮಂಗಳೂರು ಇವರ ವತಿಯಿಂದ ನಡೆದ ಜಿಲ್ಲಾಮಟ್ಟದ ರಾಗ ತರಂಗ ಆನ್ಲೈನ್ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಸುಮಾರು 31 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿಯ ವಿದ್ಯಾರ್ಥಿಗಳ ತಂಡವು ಆಯ್ಕೆಯಾಗಿ, ಬಳಿಕ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ. ವಿಜೇತ ತಂಡಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು,

ರಾಗತರಂಗ ಗಾಯನ ಸ್ಪರ್ಧೆ: ಶ್ರೀ ಗುರುಕುಲ ಅನುದಾನಿತ ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ Read More »

error: Content is protected !!
Scroll to Top